ಮಂಗಳವಾರ, ಜೂನ್ 2, 2020
27 °C

ಕೊರೊನಾ: ಕೆಪಿಸಿಸಿ ವೈದ್ಯರ ಘಟಕದಿಂದ ಸಹಾಯವಾಣಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಪಿಸಿಸಿ ವೈದ್ಯರ ಘಟಕ ಕೊರೊನಾ ಗೆಲ್ಲೋಣ ಎಂಬ ಧ್ಯೇಯದೊಂದಿಗೆ ವೈದ್ಯಕೀಯ ಸಹಾಯವಾಣಿಯನ್ನು ಆರಂಭಿಸಿದೆ.

 ಮಂಗಳವಾರ ಕೆಪಿಸಿಸಿ, ವೈದ್ಯರು ಮತ್ತು ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮತ್ತು ಸಲೀಂ ಅಹ್ಮದ್ ಜತೆ ಸಭೆ ನಡೆಸಿದ ನಂತರ  ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಈ ವಿಷಯ ಟ್ವೀಟ್ ಮಾಡಿದ್ದಾರೆ.

ಕೊರೊನಾವೈರಸ್ ಸೋಂಕು ಹರಡುವಿಕೆಗೆ ಧರ್ಮವನ್ನು  ದೂರುವುದು, ಶಾಂತಿ ಕದಡುವುದಕ್ಕಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದರ ಬಗ್ಗೆ ಡಿಕೆಶಿ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವೊಂದು ಪ್ರದೇಶಗಳಲ್ಲಿ ಸುಳ್ಳು ಸುದ್ದಿಯಿಂದಾಗಿ ಜನರಿಗೆ ಬಹಿಷ್ಕಾರ ಹಾಕಿದ ಅಥವಾ ಹೊರಗಟ್ಟಿದ ಘಟನೆಗಳು ನಡೆದಿವೆ. ಎಲ್ಲೋ ಒಂದೆರಡು ಕಡೆ ನಡೆದ ಘಟನೆಗಳಿಗೆ ಇಡೀ ಮುಸ್ಲಿಂ ಸಮುದಾಯವನ್ನು ಹೊಣೆ ಮಾಡುತ್ತಿರುವವರ ಮೇಲೆ ಕ್ರಮ ಕೈತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಇದು ಬರೀ ಬಾಯಿ ಮಾತಲ್ಲೇ ಉಳಿಯದಿರಲಿ ಎಂದು ಡಿಕೆಶಿ ಹೇಳಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು