ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಹೈಕಮಾಂಡ್‌ ಆದೇಶ ಉಲ್ಲಂಘಿಸಿಲ್ಲ, ಬಿಎಸ್‌ಪಿ ಪಕ್ಷದಲ್ಲೇ ಇರುತ್ತೇನೆ: ಮಹೇಶ್‌

Last Updated 24 ಜುಲೈ 2019, 10:21 IST
ಅಕ್ಷರ ಗಾತ್ರ

ಬೆಂಗಳೂರು:‘ನಾನು ಹೈಕಮಾಂಡ್‌ ಆದೇಶವನ್ನು ಉಲ್ಲಂಘಿಸಿಲ್ಲ.ಬಿಎಸ್‌ಪಿ ಪಕ್ಷದಲ್ಲೇ ಇರುತ್ತೇನೆ’ ಎಂದು ಶಾಸಕ ಎನ್‌.ಮಹೇಶ್‌ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ‘ಜೆಡಿಎಸ್‌–ಕಾಂಗ್ರೆಸ್‌ ವಿರುದ್ಧ ಸ್ಥಳೀಯ ಚುನಾವಣೆಯಲ್ಲಿ ಹೋರಾಟ ಮಾಡಿ ಹೆಚ್ಚು ಸ್ಥಾನ ಗಳಿಸಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಮಾಯಾವತಿಯವರ ಆದೇಶದಂತೆ ಸ್ವತಂತ್ರವಾಗಿ ಸ್ಪರ್ಧೆ ನಡೆಸಲಾಯಿತು ಎಂದು ತಿಳಿಸಿದರು.

ಡಾ.ಅಶೋಕ್ ಸಿದ್ದಾರ್ಥ ರಾಜ್ಯಸಭಾ ಸದಸ್ಯರ ನಿರ್ದೇಶನದಂತೆ ವಿಶ್ವಾಸಮತಯಾಚನೆ ಪ್ರಕ್ರಿಯೆಯಲ್ಲಿ ಪಾಲ್ಗೋಳ್ಳದೆ ನಮ್ಮ ಊರಿನಲ್ಲಿ ಉಳಿದಿದ್ದೆ. ಹೈಕಮಾಂಡ್ ಆದೇಶವನ್ನು ನಾನು ಉಲ್ಲಂಘಿಸಿಲ್ಲ. ಪಕ್ಷದ ಆದೇಶದಂತೆ ನಡೆದುಕೊಂಡಿದ್ದೇನೆ. ಆದರೆ, ಸಂವಹನದ ಕೊರತೆಯಿಂದ ಉಂಟಾಗಿದೆ. ನಾನು ಪಕ್ಷದಲ್ಲಿ ಇರುತ್ತೇನೆ. ತಟಸ್ಥವಾಗಿರಲಿದ್ದೇನೆ ಎಂದು ಹೇಳಿದರು.

ಮಂಗಳವಾರ ನಡೆದಮೈತ್ರಿ ಸರ್ಕಾರದ ವಿಶ್ವಾಸಮತ ಸಾಬೀತು ವೇಳೆ ಸದನಕ್ಕೆ ಗೈರುಹಾಜರಾಗಿದ್ದ ಬಿಎಸ್‌ಪಿ ಶಾಸಕ ಎನ್‌.ಮಹೇಶ್ ಅವರನ್ನು ಪಕ್ಷವು ಉಚ್ಚಾಟಿಸಿದೆ.

‘ಕುಮಾರಸ್ವಾಮಿ ಅವರ ಸರ್ಕಾರದ ಪರ ಮತ ಚಲಾಯಿಸುವಂತೆ ಪಕ್ಷವು ನಿರ್ದೇಶನ ನೀಡಿತ್ತು. ಆದರೆ ಸದನಕ್ಕೆ ಗೈರುಹಾಜರಾಗುವ ಮೂಲಕ ಪಕ್ಷದ ನಿರ್ದೇಶನ ಉಲ್ಲಂಘಿಸಿದ್ದಾರೆ. ಈ ಅಶಿಸ್ತನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿ ಉಚ್ಚಾಟಿಸಲಾಗಿದೆ’ ಎಂದುಪಕ್ಷದ ಮುಖ್ಯಸ್ಥೆ ಮಾಯಾವತಿ ಟ್ವೀಟ್ ಮಾಡಿದ್ದರು.

‘ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT