ಶುಕ್ರವಾರ, ಮೇ 29, 2020
27 °C

ಕ್ವಾರೆಂಟೈನ್ ಕೇಂದ್ರದಲ್ಲೇ ಪಾಲನೆಯಾಗುತ್ತಿಲ್ಲ ದೈಹಿಕ ಅಂತರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡ ಗ್ರಾಮದ ವಸತಿ ನಿಲಯದಲ್ಲಿ ಕ್ವಾರೆಂಟೈನ್ ಗೆ ಒಳಗಾಗಿರುವ ಗ್ರಾಮಸ್ಥರು ಊಟಕ್ಕಾಗಿ ಮುಗಿಬಿದ್ದಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 ಢಾಣಕಶಿರೂರು ಗ್ತಾಮದಲ್ಲಿ  21 ವರ್ಷದ ಗರ್ಭಿಣಿ, 10 ವರ್ಷದ ಬಾಲಕ ಸೇರಿದಂತೆ 13 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಅದರ ಬೆನ್ನಲ್ಲೇ  ಸೋಂಕಿತರ ಸಂಪರ್ಕಕ್ಕೆ ಬಂದ 80ಕ್ಕೂ ಹೆಚ್ಚು ಜನರನ್ನು ಚಿಕ್ಕಮುಚ್ಚಳಗುಡ್ಡದಲ್ಲಿ ಇರಿಸಲಾಗಿದೆ.

ಅಲ್ಲಿ ಸುರಕ್ಷಿತ ಅಂತರ ಪಾಲನೆ ಮಾಡದೇ ಗ್ರಾಮಸ್ಥರು ಊಟ ಪಡೆಯಲು ಮುಗಿಬಿದ್ದಿರುವುದನ್ನು ವಿಡಿಯೊ ಚಿತ್ರೀಕರಿಸಿ ಹರಿಯ ಬಿಡಲಾಗಿದೆ. ಅವರಲ್ಲಿ ಮಹಿಳೆಯರು, ಮಕ್ಕಳು ಸೇರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು