ಬುಧವಾರ, ಫೆಬ್ರವರಿ 19, 2020
16 °C

ಯೋಗೇಶ್ವರ್‌ಗೆ ಘೇರಾವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು (ಮೈಸೂರು): ಬಿಜೆಪಿ ಅಭ್ಯರ್ಥಿ ಎಚ್‌.ವಿಶ್ವನಾಥ್‌ ಪರ ಮತ ಯಾಚನೆಗೆ ತೆರಳಿದ್ದ, ಪಕ್ಷದ ಮುಖಂಡ ಸಿ.ಪಿ.ಯೋಗೇಶ್ವರ್‌ ಅವರನ್ನು ತಾಲ್ಲೂಕಿನ ಗ್ರಾಮಸ್ಥರು ಶುಕ್ರವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ಹನಗೋಡು ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಯೋಗೇಶ್ವರ್‌ ಪ್ರಚಾರ ಕೈಗೊಂಡಿದ್ದರು.

ಹೆಗ್ಗಂದೂರು ಗ್ರಾಮಕ್ಕೆ ಬಂದಾಗ ಅವರನ್ನು ಸುತ್ತುವರಿದ ಕೆಲವರು, ‘ಗ್ರಾಮದೊಳಗೆ ಬರಬೇಡಿ. ನೀವು ಒಬ್ಬರೇ ಪ್ರಚಾರಕ್ಕೆ ಬಂದಿದ್ದೇಕೆ? ನಿಮ್ಮ ಅಭ್ಯರ್ಥಿ ವಿಶ್ವನಾಥ್‌ ಅವರನ್ನೂ ಕರೆದುಕೊಂಡು ಬನ್ನಿ. ಅವರನ್ನು ಪ್ರಶ್ನಿಸ ಬೇಕಿದೆ’ ಎಂದು ವಾಗ್ವಾದಕ್ಕಿಳಿದರು.

ಹೇಳಿಕೆಗೆ ಕ್ಷಮೆ ಕೋರಿದ ತಮ್ಮಣ್ಣ

ಕೆ.ಆರ್‌.ಪೇಟೆ: ‘ಅನರ್ಹ ಶಾಸಕ ಕೆ.ಸಿ. ನಾರಾಯಣಗೌಡ ಗೆದ್ದರೆ ಕೆ.ಆರ್‌.ಪೇಟೆಯನ್ನು ಕಾಮಾಟಿಪುರ ಮಾಡುತ್ತಾರೆ’ ಎಂಬ ತಮ್ಮ ಹೇಳಿಕೆಗೆ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಕ್ಷಮೆ ಯಾಚಿಸಿದ್ದಾರೆ.

ಅವರ ಹೇಳಿಕೆಗೆ ಮುಂಬೈನಲ್ಲಿ ನೆಲೆಸಿರುವ ಕೆ.ಆರ್‌.ಪೇಟೆ ಜನರು ವ್ಯಾಪಕವಾಗಿ ಅಸಮಾಧಾನ ವ್ಯಕ್ತ
ಪಡಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು