ಭಾನುವಾರ, ಡಿಸೆಂಬರ್ 8, 2019
25 °C

ಸಿದ್ಧಗಂಗಾ ಶ್ರೀಗಳಿಗೆ ಮತ್ತೆರಡು ಸ್ಟೆಂಟ್‌ ಅಳವಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಸ್ಟೆಂಟ್‌ ಅಳವಡಿಕೆ ಯಶಸ್ವಿಯಾಗಿ ನಡೆದಿದ್ದು ಶ್ರೀಗಳು ಆರೋಗ್ಯವಾಗಿದ್ದಾರೆ. ಸೋಮವಾರ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. 

ಇಲ್ಲಿನ ಬಿಜಿಎಸ್‌ ಆಸ್ಪತ್ರೆಯಲ್ಲಿ ಭಾನುವಾರ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಪಿತ್ತನಾಳದಲ್ಲಿ ಸೋಂಕು ಕಂಡುಬಂದಿತ್ತು. ಅಲ್ಲಿದ್ದ ಅಡೆತಡೆಗಳನ್ನು ತೆರವುಗೊಳಿಸಿ ಆ ಜಾಗದಲ್ಲಿ ಎರಡು ಸ್ಟೆಂಟ್‌ ಅಳವಡಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯ ಡಾ.ರವೀಂದ್ರ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

‘ಮೊದಲು ಒಂಬತ್ತು ಸ್ಟೆಂಟ್‌ಗಳನ್ನು ಅಳವಡಿಸಿದ್ದ ಜಾಗದಲ್ಲಿಯೇ ಸೋಂಕು ಹೆಚ್ಚಾಗಿತ್ತು. ಎಂಡೋಸ್ಕೋಪಿ ಮೂಲಕ ಶಸ್ತ್ರಚಿಕಿತ್ಸೆ ಇಲ್ಲದೇ ಸ್ಟೆಂಟ್‌ ಅಳವಡಿಸುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದರು. 

ವೈದ್ಯಕೀಯ ಕ್ಷೇತ್ರಕ್ಕೇ ಸೋಜಿಗ: ‘ಚಿಕಿತ್ಸೆ ಮುಗಿದ ಕೂಡಲೇ ಸ್ವಾಮೀಜಿ ಅವರನ್ನು ವಾರ್ಡ್‌ಗೆ ಕಳುಹಿಸಲಾಗಿದೆ. ಈಗಾಗಲೇ ಅವರು ದರ್ಶನವನ್ನೂ ನೀಡಿದ್ದಾರೆ. ಅವರ ಪೂಜೆಗೆ ಆಸ್ಪತ್ರೆಯಲ್ಲೇ ವ್ಯವಸ್ಥೆ ಮಾಡಿದ್ದೇವೆ. ಬೇರೆ ರೋಗಿಗಳಾಗಿದ್ದರೆ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಡಬೇಕಿತ್ತು. ವೈದ್ಯಕೀಯ ಜಗತ್ತಿಗೆ ಇದೊಂದು ಪವಾಡ’ ಎಂದು ರವೀಂದ್ರ ಬಣ್ಣಿಸಿದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು