ಸೋಮವಾರ, ಜೂಲೈ 6, 2020
23 °C

ಕೆಎಸ್ಸಾರ್ಟಿಸಿ ನೌಕರರಿಗೆ ಮೇ ತಿಂಗಳ ಸಂಬಳ ನೀಡುತ್ತೇವೆ ಆತಂಕ ಬೇಡ: ಲಕ್ಷ್ಮಣ ಸವದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಈಗಾಗಲೇ 460 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ಸಿಬ್ಬಂದಿಗೆ ಮೇ ತಿಂಗಳ ಸಂಬಳ ನೀಡಲಾಗುವುದು, ಯಾವ ಸಿಬ್ಬಂದಿಯೂ ಆತಂಕಕ್ಕೆ ಒಳಗಾಗಬೇಡಿ, ಸಾರಿಗೆ ಸಂಸ್ಥೆ ₹1800 ಕೋಟಿ ಸಾರಿಗೆ ಇಲಾಖೆ ನಷ್ಟ ಅನುಭವಿಸಿದೆ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ 1ರಿಂದ ಕೇಂದ್ರದ ಮರ್ಗಸೂಚಿಯನ್ವಯ ಹೆಚ್ಚು ಬಸ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಎಂದು ಹೇಳಿದರು.

ಅಂತರರಾಜ್ಯ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕಾಗಿತ್ತು. ಕೊರೊನಾ ಹೆಚ್ಚು ಇರುವುದರಿಂದ ಹೊರ ರಾಜ್ಯಗಳಿಗೆ ಬಸ್ ಸಂಚಾರ ಸದ್ಯಕ್ಕೆ ಇಲ್ಲ. ಆದರೆ, ರಾಜ್ಯದ ಗ್ರಾಮೀಣ, ಪಟ್ಟಣ ಪ್ರದೇಶದಲ್ಲಿ ಬಸ್ ಸಂಚಾರ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

ರಾತ್ರಿ ಬಸ್ ಸಂಚಾರ ಪ್ರಾರಂಭಿಸಲು ಸೂಚನೆ ನೀಡಿದ್ದು, ಪರ ಊರುಗಳಿಗೆ ತೆರಳಲು ಬಸ್ ಸಂಚಾರ ಆರಂಭಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ದಾವಣಗೆರೆಯಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣಕ್ಕಾಗಿ ₹123 ಕೋಟಿ ವೆಚ್ಚದಲ್ಲಿ ಹೊಸ ವಿನ್ಯಾಸಯುಳ್ಳ ಬಸ್ ನಿಲ್ದಾಣಕ್ಕಾಗಿ ಈಗಾಗಲೇ ಟೆಂಡರ್ ಪೂರ್ಣಗೊಳಿಸಿ ಅಡಿಗಲ್ಲು ಹಾಕುವ ಕೆಲಸ ಮಾಡಲಾಗುವುದು ಎಂದು ಅವರು ತಿಳಿಸಿದರು.

ಎಸಿ ಬಸ್ ಸಂಚಾರಕ್ಕೆ ಮಾರ್ಗಸೂಚಿಯಲ್ಲಿ ಬದಲಾವಣೆಗೆ ಮನವಿ ಮಾಡಲಾಗಿದೆ. ವಿಮಾನದಲ್ಲಿ ಎಸಿ ಇರುತ್ತದೆ. ಎಸಿ ಬಸ್ ಓಡಿಸಲು ಚಿಂತನೆ ನಡೆಸಲಾಗುವುದು. ಆಟೋರಿಕ್ಷಾ, ಟ್ಯಾಕ್ಸಿ ಡ್ರೈವರ್‌ಗೆ ಅಕೌಂಟ್‌ಗೆ 5 ಸಾವಿರ ಸೇವಾ ಸಿಂಧು ಆ್ಯಪ್ ನಲ್ಲಿ 11.28 ಲಕ್ಷ ನೋಂದಣಿ ಆಗಿದೆ. ಅವರಿಗೆ ನಾಳೆಯಿಂದಲೇ ಅಕೌಂಟ್ ಗೆ ₹ 5000 ಹಾಕುತ್ತೇವೆ. ಆರೂವರೆ ಲಕ್ಷ ಚಾಲಕರಿದ್ದಾರೆ, ಅರ್ಜಿ ಸಲ್ಲಿಸಿ ಸಾರಿಗೆ ಬಸ್ ಚಾಲಕರು, ನಿರ್ವಾಹಕರಿಗೆ ಮೇ ತಿಂಗಳ ಸಂಬಳ ಕೊಡುತ್ತೇವೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು