ಸೋಮವಾರ, ಮೇ 17, 2021
31 °C

ಸಚಿವ ಸಂಪುಟ ವಿಸ್ತರಣೆ ಫಿಕ್ಸ್: ಕಂದಾಯ ಸಚಿವ ಆರ್.ಅಶೋಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಮಯ ಫಿಕ್ಸ್ ಆಗಿದ್ದು, ಸರ್ಕಾರ ರಚನೆಗೆ ಕಾರಣರಾದವರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.

ಸೋಮವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಸಂಪುಟದಲ್ಲಿ ಹಿರಿಯ ಸಚಿವರ ತ್ಯಾಗ ಪ್ರಸ್ತಾವ ಇಲ್ಲ, ಸಚಿವ ಮಾಧುಸ್ವಾಮಿ ಅವರದು ವೈಯಕ್ತಿಕ ಹೇಳಿಕೆ ಎಂದರು. ಸಿದ್ದರಾಮಯ್ಯ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರೇ ಪಕ್ಷದಲ್ಲಿ ಅಪ್ರಸ್ತುತರಾಗುತ್ತಿದ್ದು, ಮತ್ತೆ ವಕೀಲಿಕೆಗೆ ಅರ್ಜಿ ಹಾಕಲು ಹೊರಟಿದ್ದಾರೆ, ಫ್ಫ್ರೀ ಕಾಶ್ಮೀರ ಘೋಷಣೆ ಕೂಗಿದವರ ಪರವಾಗಿ ವಕಾಲತು ನಡೆಸಲಿ ಎಂದು ಕುಟುಕಿದರು.

ಇದನ್ನೂ ಓದಿ: ಸಿಎಎ ಗಲಭೆಯಲ್ಲಿ ಆಸ್ತಿ ಹಾನಿ| ಉ.ಪ್ರದೇಶ ಮಾದರಿ ದಂಡಕ್ಕೆ ಚಿಂತನೆ: ಆರ್‌. ಅಶೋಕ್‌

ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ 10 ಸಾವಿರ ಮಂದಿಗೆ ಮಂಗಳವಾರ ಹಕ್ಕುಪತ್ರ ವಿತರಿಸಲಾಗುವುದು. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದ ವಿವಿಧ ಭಾಗಗಳಲ್ಲಿ ವಾಹನ ಪಾರ್ಕಿಂಗ್‌‌ಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು