ಶುಕ್ರವಾರ, ಆಗಸ್ಟ್ 14, 2020
27 °C

ಟ್ರಂಪ್‌ ಪುತ್ರನ ಸ್ನೇಹಿತೆಗೆ ಕೊರೊನಾ ಸೋಂಕು ದೃಢ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಡೊನಾಲ್ಡ್‌ ಟ್ರಂಪ್‌ ಅವರ ಹಿರಿಯ ಪುತ್ರನ ಸ್ನೇಹಿತೆ ಕಿಂಬರ್ಲಿ ಗುಯಿಲ್‌ಫಾಯಿಲ್‌ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಫಾಕ್ಸ್‌ ನ್ಯೂಸ್‌ ಟಿ.ವಿ. ವಾಹಿನಿಯ ಮಾಜಿ ಉದ್ಯೋಗಿಯಾಗಿದ್ದ ಕಿಂಬರ್ಲಿ ಅವರು ಕೆಲವು ತಿಂಗಳುಗಳಿಂದ ಟ್ರಂಪ್‌ ಜೂನಿಯರ್‌ ಅವರ ಜತೆ ಡೇಟಿಂಗ್‌ ಮಾಡುತ್ತಿದ್ದಾರೆ. ಕೊರೋನಾ ದೃಢಪಟ್ಟ ಕೂಡಲೇ ಅವರನ್ನು ಪ್ರತ್ಯೇಕವಾಸದಲ್ಲಿ ಇಡಲಾಗಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ.

‘ಕಿಂಬರ್ಲಿ ಅವರು ಆರೋಗ್ಯವಾಗಿದ್ದಾರೆ, ಸೋಂಕಿನ ಲಕ್ಷಣಗಳು ಅವರಲ್ಲಿ ಕಾಣಿಸಿಲ್ಲವಾದ್ದರಿಂದ ಅವರನ್ನು ಮರು ಪರೀಕ್ಷೆಗೆ ಒಳಪಡಿಸಲಾಗುವುದು. ಟ್ರಂಪ್‌ ಅವರ ಪುತ್ರನಿಗೆ ಸೋಂಕು ತಗುಲಿಲ್ಲ ಎಂಬುದು ದೃಢಪಟ್ಟಿದೆ’ ಎಂದು ಟ್ರಂಪ್‌ ಅವರ ಸಿಬ್ಬಂದಿ ವಿಭಾಗದ ಮುಖ್ಯಸ್ಥ ಸರ್ಜಿಯೊ ಗೊರ್ ತಿಳಿಸಿದ್ದಾರೆ.

ಕಿಂಬರ್ಲಿ ಅವರು ಅಧ್ಯಕ್ಷ ಟ್ರಂಪ್ ಅವರ ಸಮೀಪವರ್ತಿಗಳಲ್ಲಿ, ಸೋಂಕಿಗೊಳಗಾದ ಮೂರನೇ ವ್ಯಕ್ತಿಯಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು