ಪ್ಯಾರಿಸ್: ‘ಕೋವಿಡ್–19ಗೆ ಒಳಗಾದವರ ರಕ್ತದಲ್ಲಿ ಗ್ಲೂಕೋಸ್ ಅಂಶ ವಿಪರೀತವಾಗಿದ್ದರೆ, ಅಂಥವರು ಸಾವಿಗೆ ಒಳಗಾಗುವ ಅಪಾಯವು ಇತರರಿಗಿಂತ ಎರಡುಪಟ್ಟು ಹೆಚ್ಚಿರುತ್ತದೆ’ ಎಂದು ಚೀನಾದ ಸಂಶೋಧಕರು ಶನಿವಾರ ಹೇಳಿದ್ದಾರೆ.

ಮಧುಮೇಹಿಗಳೆಂದು ಗುರುತಿಸದಿದ್ದರೂ, ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾಗಿರುವವರು (ಹೈಪರ್ಗ್ಲೈಸೀಮಿಯಾ) ಸಹ ಕೋವಿಡ್ನಿಂದ ಹೆಚ್ಚು ಅಪಾಯಕ್ಕೆ ಒಳಗಾಗಬಲ್ಲರು ಎಂಬುದನ್ನು ಇದೇ ಮೊದಲ ಬಾರಿ ವಿಜ್ಞಾನಿಗಳು ಖಚಿತಪಡಿಸಿದ್ದಾರೆ. ಚೀನಾದ ವುಹಾನ್ನ ಎರಡು ಆಸ್ಪತ್ರೆಗಳಲ್ಲಿ 605 ಮಂದಿ ಕೋವಿಡ್–19 ರೋಗಿಗಳ ಮರಣ ಪ್ರಮಾಣದ ಅಧ್ಯಯನ ನಡೆಸಿ ವಿಜ್ಞಾನಿಗಳು ಈ ವರದಿ ತಯಾರಿಸಿದ್ದಾರೆ.

ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವು ವಿಪರೀತವಾಗಿರುವವರು ಕೋವಿಡ್ಗೆ ಒಳಗಾದರೆ, ಅವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ರಕ್ತನಾಳಗಳು ದುರ್ಬಲವಾಗಿರುವುದು ಮತ್ತು ರೋಗ ನಿರೋಧಕ ವ್ಯವಸ್ಥೆಯು ಅತಿಕ್ರಿಯಾಶೀಲವಾಗುವುದೂ ಸಹ ಸಾವಿನ ಸಾಧ್ಯತೆಯನ್ನು ಹೆಚ್ಚಿಸಲು ಕಾರಣವಾಗಿರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.