ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಸರ್ ಹೊಸ ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಬಿಡುಗಡೆ:ಗೇಮಿಂಗ್ ಪ್ರಿಯರಿಗೆ ಹಲವು ಆಯ್ಕೆ

Last Updated 24 ಜೂನ್ 2020, 12:55 IST
ಅಕ್ಷರ ಗಾತ್ರ

ಬೆಂಗಳೂರು: ಏಸರ್‌ ಕಂಪನಿ ಜಾಗತಿಕ ಮಾರುಕಟ್ಟೆಗೆ ಹೊಸ ಸರಣಿ ಲ್ಯಾಪ್‌ಟಾಪ್‌ಗಳು, ಗೇಮಿಂಗ್‌ ಲ್ಯಾಪ್‌ಟಾಪ್‌ಗಳು ಹಾಗೂ ಡೆಸ್ಕ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಚೀನಾ ಮಾರುಕಟ್ಟೆ ತಕ್ಕಂತೆ ಬೆಲೆ ಬಹಿರಂಗವಾಗಿದ್ದು, ಭಾರತ ಸೇರಿದಂತೆ ಇತರೆ ದೇಶಗಳಲ್ಲಿ ಲ್ಯಾಪ್‌ಟಾಪ್‌ ದರ ವ್ಯತ್ಯಾಸವಾಗಲಿದೆ.

ಏಸರ್‌ ಸ್ವಿಪ್ಟ್‌ 5 (2020), ಕಾನ್ಸೆಪ್ಟ್‌ಡಿ 3 ಮತ್ತು ಕಾನ್ಸೆಪ್ಟ್‌ಡಿ 3 ಇಜೆಲ್, ಪ್ರಿಡೇಟರ್ ಹೀಲಿಯೊಸ್, ಪ್ರಿಡೇಟರ್ ಟ್ರೈಟನ್ ಹಾಗೂ ನೈಟ್ರೊ ಲ್ಯಾಪ್‌ಟಾಪ್‌ಗಳು ಬಿಡುಗಡೆಯಾಗಿವೆ. ಆರಂಭಿಕ ಬೆಲೆ ಸುಮಾರು ₹74,000 (6,999 ಯುವಾನ್) ಇದೆ.

ಏಸರ್‌ ಸ್ವಿಫ್ಟ್‌ 5 ಲ್ಯಾಪ್‌ಟಾಪ್‌: 14 ಇಂಚು ಫುಲ್‌ ಎಚ್‌ಡಿ ಟಚ್‌ಸ್ಕ್ರೀನ್‌ ಡಿಸ್‌ಪ್ಲೇ ಮತ್ತು ಗೊರಿಲ್ಲ ಗ್ಲಾಸ್‌ ಪದರವಿದೆ. ಇಂಟೆಲ್‌ ಐಸ್‌ ಲೇಕ್‌ ಚಿಪ್‌ಸೆಟ್‌ (11th Gen), ಗ್ರಾಫಿಕ್ಸ್‌ಗಾಗಿ ಎನ್‌ವಿಡಿಯಾ GeForce MX350 ಜಿಪಿಯು ಹಾಗೂ 1ಟಿಬಿ ಸಂಗ್ರಹ ಸಾಮರ್ಥ್ಯ ಹೊಂದಿದೆ. 16ಜಿಬಿ ರ್‍ಯಾಮ್‌ ಮತ್ತು 56ವ್ಯಾಟ್‌–ಹವರ್‌ ಬ್ಯಾಟರಿ ಹೊಂದಿದೆ. ಟೈಪ್–ಸಿ ಪೋರ್ಟ್‌, ಥಂಡರ್‌ಬೋಲ್ಟ್ ಪೋರ್ಟ್, ವೈ–ಫೈ 6 ಹಾಗೂ ಬ್ಲೂಟೂಥ್‌ 5.0 ಇದೆ.

ಕಾನ್ಸೆಪ್ಟ್‌ಡಿ 3 ಇಜೆಲ್: ಕನ್‌ವರ್ಟಿಬಲ್‌ 14 ಇಂಚು ಹಾಗೂ 15.6 ಇಂಚು ಎಫ್‌ಎಚ್‌ಡಿ ಡಿಸ್‌ಪ್ಲೇಗಳಲ್ಲಿ ಲಭ್ಯವಿದೆ. ಇಂಟೆಲ್‌ ಕೋರ್‌ ಐ5 ಅಥವಾ ಇಂಟೆಲ್‌ ಕೋರ್‌ ಐ7 (10th Gen) ಪ್ರೊಸೆಸರ್‌ ಆಯ್ಕೆಗಳಲ್ಲಿ ಸಿಗಲಿದೆ. ಗ್ರಾಫಿಕ್ಸ್‌ಗಾಗಿ ಎನ್‌ವಿಡಿಯಾ GeForce GTX 1650Ti ಹಾಗೂ 1ಟಿಬಿ ಸಂಗ್ರಹ ಸಾಮರ್ಥ್ಯ ಇರಲಿದೆ. ಯುಎಸ್‌ಬಿ ಟೈಪ್‌–ಸಿ, ಥಂಡರ್‌ಬೋಲ್ಟ್‌ 3 ಪೋರ್ಟ್ ಹಾಗೂ ಎಸ್‌ಡಿ ಕಾರ್ಡ್‌ ರೀಡರ್‌ ಇದೆ.

ಕಾನ್ಸೆಪ್ಟ್‌ಡಿ 3: ಇದರಲ್ಲೂ 14 ಇಂಚು ಹಾಗೂ 15.6 ಇಂಚು ಎಫ್‌ಎಚ್‌ಡಿ ಡಿಸ್‌ಪ್ಲೇ ಆಯ್ಕೆಗಳಿದ್ದು, ಇಂಟೆಲ್ ಕೋರ್‌ ಎಚ್‌ ಸರಣಿಯ (10th Gen) ಪ್ರೊಸೆಸರ್‌ ಅಳವಡಿಸಲಾಗಿದೆ. ಗ್ರಾಫಿಕ್ಸ್‌ಗಾಗಿ ಎನ್‌ವಿಡಿಯಾ GeForce GTX 1650Ti ಜಿಪಿಯು ಸೇರಿ ಕಾನ್ಸೆಪ್ಟ್‌ಡಿ 3 ಇಜೆಲ್‌ನ ಬಹುತೇಕ ಸೌಲಭ್ಯಗಳಿವೆ. ಪೂರ್ಣ ಚಾರ್ಜ್ ಮಾಡಿದ ಬ್ಯಾಟರಿ ಸುಮಾರು 20 ಗಂಟೆಗಳ ವರೆಗೂ ಕಾರ್ಯಾಚರಣೆಗೆ ಅವಕಾಶ ನೀಡುವುದಾಗಿ ಏಸರ್‌ ಹೇಳಿದೆ.

ಪ್ರಿಡೇಟರ್‌ ಹೀಲಿಯೊಸ್ 700: 17.3 ಇಂಚು ಎಫ್‌ಎಚ್‌ಡಿ ಡಿಸ್‌ಪ್ಲೇ ಹೊಂದಿರುವ ಗೇಮಿಂಗ್‌ ಲ್ಯಾಪ್‌ಟಾಪ್‌. ಇಂಟೆಲ್‌ ಕೋರ್‌ ಐ9 ಅಥವಾ ಐ7 (10th Gen) ಪ್ರೊಸೆಸರ್‌ ಮತ್ತು ಗ್ರಾಫಿಕ್ಸ್‌ಗಾಗಿ ಎನ್‌ವಿಡಿಯಾ GeForce GTX 2080 SUPER ಜಿಪಿಯು ನೀಡಲಾಗಿದೆ. ಗೇಮಿಂಗ್‌ ವೇಳೆ ಹೆಚ್ಚು ಬಿಸಿ ಸೃಷ್ಟಿಯಾಗುವುದರಿಂದ ಸಾಧನವನ್ನು ತಣ್ಣಗಿರಿಸಲು ಕಾಪರ್‌ ಹೀಟ್‌ ಪೈಪ್‌ಗಳು, ಕೂಲ್‌ಬೂಸ್ಟ್‌ ತಂತ್ರಜ್ಞಾನ, ಏರೊಬ್ಲೇಡ್‌ 3ಡಿ ಫ್ಯಾನ್‌ಗಳನ್ನು ಅಳವಡಿಸಲಾಗಿದೆ. 64ಜಿಬಿ ರ್‍ಯಾಮ್‌ ಮತ್ತು ಸಂಗ್ರಹಕ್ಕೆ ಸಾಲಿಡ್‌ ಸ್ಟೇಟ್‌ ಡ್ರೈವ್ (ಎಸ್ಎಸ್‌ಡಿ) ಇದೆ. ಇದರ ಬೆಲೆ ಸುಮಾರು ₹1.81 ಲಕ್ಷ.

ಪ್ರಿಡೇಟರ್‌ ಹೀಲಿಯೊಸ್ 300 ಮತ್ತು ಟ್ರೈಟನ್‌ 300, ನೈಟ್ರೊ 7 ಲ್ಯಾಪ್‌ಟಾಪ್‌ಗಳಲ್ಲೂ ಗೇಮಿಂಗ್‌ಗೆ ಪೂರಕವಾದ ಸೌಲಭ್ಯಗಳನ್ನು ನೀಡಲಾಗಿದೆ.

ಗೇಮಿಂಗಾಗಿ ಡೆಸ್ಕ್‌ಟಾಪ್‌ ಆಯ್ಕೆ ಮಾಡುವವರಿಗೆ ಪ್ರಿಡೇಟರ್ ಎಕ್ಸ್25, ಎಕ್ಸ್‌ಬಿ3 ಸರಣಿಯ ದೊಡ್ಡ ಪರದೆಯ ಮಾನಿಟರ್‌ಗಳು ಹಾಗೂ ಗೇಮಿಂಗ್‌ ಅನುಭವಕ್ಕೆ ತೊಡಕಾದಂತಹ ಹೈಸ್ಪೀಡ್‌ ಪ್ರೊಸೆಸ್‌ ಹೊಂದಿರುವ ಪ್ರಿಡೇಟರ್‌ ಓರಿಯಾನ್‌ 9000, ಓರಿಯಾನ್‌ 3000 ಹಾಗೂ ನೈಟ್ರೊ 50 ಸರಣಿಯ ಸಿಪಿಯುಗಳಿವೆ. ಇದರೊಂದಿಗೆ ಪ್ರಿಡೇಟರ್‌ ಸೆಸ್‌ಟಸ್‌ 350 ಮೌಸ್‌ ಸಹ ಬಿಡುಗಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT