ಮಂಗಳವಾರ, ಸೆಪ್ಟೆಂಬರ್ 21, 2021
20 °C

iPhone 12: ಹೊಸ ಐಫೋನ್ ಬಿಡುಗಡೆ ಬೆನ್ನಲ್ಲೇ ಹಳೆಯ ಆ್ಯಪಲ್ ಫೋನ್ ದರ ಇಳಿಕೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Apple iPhone 12

ಬೆಂಗಳೂರು: ಮಂಗಳವಾರ ನಡೆದ ಆ್ಯಪಲ್ ಇವೆಂಟ್‌ನಲ್ಲಿ ನೂತನ ಐಪೋನ್ 13 ಸರಣಿಯನ್ನು ಪರಿಚಯಿಸಲಾಗಿದೆ. ಅದರ ಬೆನ್ನಲ್ಲೇ ಹಳೆಯ ಐಫೋನ್ ಮಾದರಿಗಳ ಬೆಲೆಯನ್ನು ಆ್ಯಪಲ್ ಇಳಿಕೆ ಮಾಡಿದೆ.

ಆ್ಯಪಲ್ ಐಫೋನ್ 12 ಮತ್ತು ಐಫೋನ್ 11 ವಿವಿಧ ಆವೃತ್ತಿಗಳ ದರ ಇಳಿಕೆಯನ್ನು ಆ್ಯಪಲ್ ಇಂಡಿಯಾ ಆನ್‌ಲೈನ್ ಸ್ಟೋರ್‌ನಲ್ಲಿ ಪ್ರಕಟಿಸಿದೆ.

ಪ್ರತಿ ಬಾರಿ ಹೊಸ ಐಫೋನ್ ಬಿಡುಗಡೆ ಮಾಡಿದ ಬಳಿಕ ಆ್ಯಪಲ್, ಹಳೆಯ ಮಾದರಿಗಳ ಬೆಲೆ ಪರಿಷ್ಕರಿಸುತ್ತದೆ.

ಆ್ಯಪಲ್ ಐಫೋನ್ 12, 64 GB ಮಾದರಿ ಆರಂಭಿಕ ಆವೃತ್ತಿಗೆ ಬಿಡುಗಡೆ ಸಂದರ್ಭದಲ್ಲಿ ₹79,900 ದರ ಇತ್ತು. ಆದರೆ ₹14,000 ಬೆಲೆ ಇಳಿಕೆ ಬಳಿಕ ₹65,900 ದರಕ್ಕೆ ದೊರೆಯುತ್ತಿದೆ.

ಅಲ್ಲದೆ, 2019ರಲ್ಲಿ ಆ್ಯಪಲ್ ಬಿಡುಗಡೆ ಮಾಡಿದ್ದ ಐಪೋನ್ 11, ಕಳೆದ ವರ್ಷ ಬೆಲೆ ಇಳಿಕೆ ಬಳಿಕ 64GB ಮಾದರಿಗೆ ₹54,900 ದರ ಹೊಂದಿತ್ತು. ಈ ಬಾರಿ ಮತ್ತೆ ಬೆಲೆ ಇಳಿಕೆ ಮಾಡಲಾಗಿದ್ದು, ಪ್ರಸ್ತುತ ₹49,900 ದರಕ್ಕೆ ದೊರೆಯುತ್ತಿದೆ.

ಐಫೋನ್ 12 ವಿವಿಧ ಆವೃತ್ತಿಗಳ ಪರಿಷ್ಕೃತ ದರ ವಿವರ ಇಲ್ಲಿದೆ.

ಮಾದರಿ-ಹಳೆಯ ದರ-ಹೊಸ ದರ

ಆ್ಯಪಲ್ iPhone 12 ಮಿನಿ

64GB ₹64,999   ₹59,990

128GB ₹74,900  ₹64,900 

256GB ₹84,900 ₹74,900

 ಆ್ಯಪಲ್ iPhone 12 

64GB ₹79,999   ₹65,900

128GB ₹84,990   ₹70,900

256GB ₹94,900  ₹80,900

ಆ್ಯಪಲ್ iPhone 12 ಪ್ರೊ

128GB ₹1,19,900  ₹1,06,900

256GB ₹1,29,990  ₹1,18,900

512GB ₹1,49,900  ₹1,39,900

ಆ್ಯಪಲ್ iPhone 12 ಪ್ರೊ ಮ್ಯಾಕ್ಸ್

128GB ₹1,29,900   ₹1,15,900

256GB ₹1,39,900  ₹1,25,900

512GB ₹1,59,900     ₹1,55,900.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು