iPhone 15 Pro: ಹೊಸ ಅ್ಯಪಲ್ ಐಫೋನ್ 15 ಪ್ರೊ ವಿನ್ಯಾಸ ಸೋರಿಕೆ
ಬೆಂಗಳೂರು: ಪ್ರೀಮಿಯಂ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆ್ಯಪಲ್, ಈ ವರ್ಷ ಐಫೋನ್ 15 ಸರಣಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಹೊಸ ಐಫೋನ್ ಸರಣಿ ಕುರಿತಂತೆ ಈಗಾಗಲೇ ಟೆಕ್ ಮಾರುಕಟ್ಟೆಯಲ್ಲಿ ಕುತೂಹಲ ಹೆಚ್ಚಿದೆ.
ಆ್ಯಪಲ್, ನೂತನ ಸರಣಿಯಲ್ಲಿ ನಾಲ್ಕು ಮಾದರಿಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಅದರಲ್ಲೂ ಪ್ರೊ ಮತ್ತು ಪ್ರೊ ಮ್ಯಾಕ್ಸ್ ಆವೃತ್ತಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.
ಹೀಗಾಗಿ, ಆ್ಯಪಲ್ 15 ಪ್ರೊ ಆವೃತ್ತಿಯ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ಮಾಡಲು ಮುಂದಾಗಿದೆ. ತೆಳುವಾದ ಹೊರವಿನ್ಯಾಸ, ಗರಿಷ್ಠ ಡಿಸ್‌ಪ್ಲೇ ಮತ್ತು ಕಡಿಮೆ ಬ್ಯಾಝೆಲ್ ಫ್ರೇಮ್ ಹೊಸ ವಿನ್ಯಾಸದಲ್ಲಿ ಗಮನ ಸೆಳೆಯಲಿದೆ.
Apple | ಐಫೋನ್, ಮ್ಯಾಕ್, ಐಪ್ಯಾಡ್ಗೆ ವಿಶೇಷ ಡಿಸ್ಕೌಂಟ್
ಮೂಲಗಳ ಪ್ರಕಾರ, ಆ್ಯಪಲ್ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಹೊಸ ಐಫೋನ್ 15 ಸರಣಿ ಬಿಡುಗಡೆ ಮಾಡಲಿದೆ. ಕಳೆದ ಬಾರಿ ಬಿಡುಗಡೆಯಾಗಿರುವ ಐಫೋನ್ 14 ಪ್ರೊ ಮತ್ತು 14 ಪ್ರೊ ಮ್ಯಾಕ್ಸ್‌ಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಜನಪ್ರಿಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ, ಆ್ಯಪಲ್ ಈ ಬಾರಿ 15 ಪ್ರೊ ವಿನ್ಯಾಸ ಮತ್ತು ಕ್ಯಾಮೆರಾ ವ್ಯವಸ್ಥೆಯಲ್ಲಿ ಹೆಚ್ಚಿನ ವೈಶಿಷ್ಟ್ಯ ಪರಿಚಯಿಸಲು ಸಿದ್ಧತೆ ನಡೆಸಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
Nokia T21 | ಆಕರ್ಷಕ ವಿನ್ಯಾಸದ ಟ್ಯಾಬ್ಲೆಟ್ ಪರಿಚಯಿಸಿದ ನೋಕಿಯಾ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.