ಗುರುವಾರ , ಮೇ 26, 2022
26 °C

ಮುಂದಿನ ವರ್ಷದ ಆರಂಭದಲ್ಲೇ ಮಾರುಕಟ್ಟೆಗೆ ಬರಲಿದೆ ಆ್ಯಪಲ್ ಐಫೋನ್ ಎಸ್‌ಇ 3

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ಕ್ಯುಪರ್ಟಿನೊ ಮೂಲದ ಟೆಕ್ ದೈತ್ಯ ಸಂಸ್ಥೆ ಆ್ಯಪಲ್, ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಹೊಸ ಐಫೋನ್ ಪರಿಚಯಿಸಲಿದೆ ಎಂದು ವರದಿಗಳು ಹೇಳಿವೆ.

ಆ್ಯಪಲ್ ಐಫೋನ್ ಸರಣಿಯಲ್ಲಿ ಎಸ್‌ಇ 3 ಮಾದರಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಐಫೋನ್ ಎಕ್ಸ್‌ಆರ್ ವಿನ್ಯಾಸದಲ್ಲೇ ಹೊಸ ಐಫೋನ್ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಮಾರ್ಚ್ ತಿಂಗಳಿನಲ್ಲಿ ವಿಶೇಷ ಈವೆಂಟ್ ಆಯೋಜಿಸುವ ಮೂಲಕ ಆ್ಯಪಲ್, ಹೊಸ ಐಫೋನ್ ಬಿಡುಗಡೆ ಮಾಡಲಿದೆ.

ಹೊಸ ಐಫೋನ್ ಎಸ್‌ಇ 3 ಮಾದರಿಯಲ್ಲಿ ಆ್ಯಪಲ್ 5G ತಂತ್ರಜ್ಞಾನ ಪರಿಚಯಿಸಲಿದೆ. ಜತೆಗೆ ಬ್ಯಾಟರಿ ಮತ್ತು ಕ್ಯಾಮೆರಾದಲ್ಲೂ ಕೆಲವೊಂದು ಬದಲಾವಣೆಗಳನ್ನು ನಿರೀಕ್ಷಿಸಬಹುದು ಎಂದು ವರದಿಗಳು ಹೇಳಿವೆ.

ಹೊಸ A15 ಚಿಪ್, ಹೋಮ್ ಬಟನ್ ಇಲ್ಲದ ಡಿಸ್‌ಪ್ಲೇ ವಿನ್ಯಾಸದಲ್ಲಿ ನೂತನ ಐಫೋನ್ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು