ಈಗ ರಸ್ತೆಯ ಮೇಲೆ ದಿನದಿಂದ ದಿನಕ್ಕೆ ವಿದ್ಯುತ್ ಚಾಲಿತ ವಾಹನಗಳು ಕಾಣುವುದು ಹೆಚ್ಚುತ್ತಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವೆಹಿಕಲ್(ಇವಿ)ಗಳ ಸಂಖ್ಯೆ ಕಳೆದ ಐದು ವರ್ಷಗಳಲ್ಲಿ ಹತ್ತು ಪಟ್ಟು ಹೆಚ್ಚಿದೆ. ಇಂಧನವನ್ನು ಉರಿಸಿ ಚಲಿಸುವ ವಾಹನಗಳಿಗಿಂತ ಇವಿಗಳು ತುಸು ದುಬಾರಿ. ಆದರೆ ಒಮ್ಮೆ ಖರೀದಿಸಿದ ಮೇಲೆ ಬಳಕೆಯಲ್ಲಿ ಸೋವಿ. ಆರಂಭಿಕ ದುಬಾರಿ ಬೆಲೆಯನ್ನು ಕಡಿಮೆ ಮಾಡಲು ಚೀನಾ ಸರ್ಕಾರ ಅಲ್ಲಿ ರಿಯಾಯಿತಿ ಪದ್ಧತಿಯನ್ನು ಜಾರಿ ಮಾಡಿದೆ. ಹೀಗಾಗಿ ಇವಿಗಳನ್ನು ತಯಾರಿಸುವ ಕಂಪನಿಗಳಿಗೆ ಚೀನಾದಲ್ಲಿ ತುಂಬಾ ಅನುಕೂಲಕರ ಪರಿಸರವಿದೆ. ಅದರ ಪರಿಣಾಮವೇ ಈ ವರ್ಷ ಚೀನಾದಲ್ಲಿ ಮಾರಾಟವಾದ ಒಟ್ಟೂ ಪ್ರಯಾಣಿಕ ಕಾರುಗಳಲ್ಲಿ ಅರ್ಧದಷ್ಟು ಇವಿಗಳು!

ಜಗತ್ತಿನಲ್ಲಿ ಇಂದು ಪರ್ಯಾಯ ಶಕ್ತಿಯ ಮೇಲೆ ಚಲಾಯಿಸಬಲ್ಲ ವಾಹನದ ತಯಾರಿಕೆಗೆ ಹಾಗೂ ಬೆಳವಣಿಗೆಗೆ ತುಂಬಾ ಪ್ರೋತ್ಸಾಹ ಸಿಗುತ್ತಿದೆ. ಆದರೆ ಅಭಿವೃದ್ಧಿಯ ಗತಿ ಮಾತ್ರ ಆಮೆಯ ವೇಗ. ಇದಕ್ಕೆ ಒಂದಲ್ಲ, ಹಲವಾರು ಕಾರಣಗಳಿವೆ. ಅವುಗಳಲ್ಲೊಂದು ಮುಖ್ಯ ಕಾರಣವೆಂದರೆ ‘ರೇಂಜ್ ಎಂಕ್ಸೈಟಿ’. ಇದೊಂದು ಹೊಸ ಪದ. ಪಾರಂಪರಿಕ ಇಂಜಿನ್ಗಳನ್ನು ಅಳವಡಿಸಿದ ವಾಹನಗಳಲ್ಲಿ (ವಿಶೇಷವಾಗಿ ಕಾರುಗಳಲ್ಲಿ) ಒಮ್ಮೆ ಇಂಧನವನ್ನು ತುಂಬಿಸಿದರೆ 400-500 ಕಿಮೀ ದೂರವನ್ನು ಆರಾಮದಲ್ಲಿ ಕ್ರಮಿಸಬಹುದು. ಆದರೆ ಇವಿಗಳು ಒಂದೇ ಚಾರ್ಜಿಂಗ್ನಲ್ಲಿ 300 ಕಿಮೀಗಳನ್ನು ದಾಟಿದರೂ ಹೆಚ್ಚು! ಇದರಿಂದಾಗಿ ಜನರಿಗೆ ತಾವು ಪ್ರಯಾಣ ಮಾಡುತ್ತಿರುವಾಗಲೇ ಚಾರ್ಜಿಂಗ್ ಮುಗಿದು ಹೋಗುವ ಭಯ; ಹತ್ತಿರದಲ್ಲಿ ಎಲ್ಲಾದರೂ ಚಾರ್ಜಿಂಗ್ ಸ್ಟೇಷನ್ ಇರಬಹುದೇ ಎನ್ನುವ ಆತಂಕ. ಇದನ್ನೇ ‘ರೇಂಜ್ ಎಂಕ್ಸೈಟಿ’ ಎನ್ನುತ್ತಾರೆ. ಭಾರತದಲ್ಲಿ 150 ಇಲೆಕ್ಟ್ರಿಕ್ ವಾಹನಗಳಿಗೆ ಒಂದು ಚಾರ್ಜಿಂಗ್ ಸ್ಟೇಷನ್ ಇದ್ದರೆ, ಅದೇ ಚೀನಾದಲ್ಲಿ ಏಳು ಇಲೆಕ್ಟ್ರಿಕ್ ವಾಹನಗಳಿಗೆ ಒಂದು! ಹಾಗಿದ್ದರೆ ಚಾರ್ಜಿಂಗ್ ಸ್ಟೇಷನ್ ಒಂದೇ ಇದಕ್ಕೆ ಪರಿಹಾರವೇ? ಜಗತ್ತು ಈ ರೇಂಜ್ ಎಂಕ್ಸೈಟಿಯನ್ನು ಕಡಿಮೆ ಮಾಡುವುದಕ್ಕೆ ಹಲವಾರು ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ. ಅವುಗಳಲ್ಲೊಂದು ‘ಇ-ರೋಡ್’!

ಇ-ರೋಡ್ ಏನಿದು?

‘ಇ-ರೋಡ್’ ಎನ್ನುವುದಕ್ಕೆ ಹಲವಾರು ಅರ್ಥಗಳಿವೆ. ಉದಾಹರಣೆಗೆ. ಯುರೋಪಿನ ಅಂತರಾಷ್ಟ್ರೀಯ ರಸ್ತೆಗಳ ಹೆಸರನ್ನು ‘ಇಂಟರ್ನ್ಯಾಷನಲ್ ಇ-ರೋಡ್ ಸಿಸ್ಟಮ್ಸ್’ ಎಂದು ಕರೆಯುತ್ತಾರೆ. ನಾವು ಇಲ್ಲಿ ಚರ್ಚೆ ಮಾಡುತ್ತಿರುವುದು ಎಲೆಕ್ಟ್ರಿಕ್ ರಸ್ತೆಗಳ ಕುರಿತು. ಚಲಿಸುತ್ತಿರುವ ವಾಹನಗಳನ್ನು ಚಾರ್ಜ್ ಮಾಡಬಲ್ಲ ವಿನ್ಯಾಸದ ರಸ್ತೆಗಳಿಗೆ ಇ-ರೋಡ್ ಎನ್ನುತ್ತಾರೆ. ಇಲೆಕ್ಟ್ರಿಕ್ ರೈಲನ್ನು ನಾವು ನೋಡಿರುತ್ತೇವೆ; ವಿದ್ಯುತ್ ತಂತಿಯ ಮೂಲಕ ಅಲ್ಲಿಯ ಮೋಟರಿಗೆ ಶಕ್ತಿಯು ಸರಬರಾಜು ಆಗಿ ರೈಲು ಓಡುವುದು ಅಲ್ಲಿಯ ತಂತ್ರಜ್ಞಾನ ಇದೇ ಮಾದರಿಯಲ್ಲಿ ಇ-ರೋಡ್ ಕೂಡ ವಾಹನದಲ್ಲಿರುವ ಬ್ಯಾಟರಿಯನ್ನು ಚಾರ್ಜ್ ಮಾಡಿ, ಅದರಲ್ಲಿಯ ಮೋಟರುಗಳಿಗೆ ಶಕ್ತಿಯ ಸರಬರಾಜು ಮಾಡುವ ಮೂಲಕ ನಿರಂತರವಾಗಿ, ಸರಾಗವಾಗಿ ವಾಹನವು ತನ್ನ ದೂರವನ್ನು ಕ್ರಮಿಸಲು ಈ ತಂತ್ರಜ್ಞಾನವು ಸಹಾಯ ಮಾಡುತ್ತದೆ.

ಬಗೆಗಳು:

ಮೊದಲ ಇ-ರೋಡ್ ಜಗತ್ತಿಗೆ ಪರಿಚಯವಾಗಿದ್ದು 2016ರಲ್ಲಿ. ಸಿಮನ್ಸ್ ಎನ್ನುವ ಜರ್ಮನಿಯ ಕಂಪನಿಯು 2009-2014ರ ತನಕ ಈ ತಂತ್ರಜ್ಞಾನವನ್ನು ಅಧ್ಯಯನ ಮಾಡಿ, 2016ರಲ್ಲಿ ಕಾರ್ಯರೂಪಕ್ಕೆ ತಂದಿತ್ತು. ಅದರ ನಂತರ ಬೇರೆ ಬೇರೆ ವಿಧದ ಇ-ರೋಡ್ ಮಾದರಿಗಳ ಪರಿಶೀಲನೆ ನಡೆಯುತ್ತದೆ. ಇವತ್ತು ನಾವು ನಾಲ್ಕು ಮುಖ್ಯ ವಿಧದ ಇ-ರೋಡ್ ಗಳನ್ನು ನೋಡಬಹುದು.

1. ಓವರ್ ಹೆಡ್ ಪವರ್ ಲೈನ್ಸ್

ಇದು ಇಲೆಕ್ಟ್ರಿಕ್ ರೈಲ್ವೆಯ ಪದ್ಧತಿಯ ಹಾಗೆಯೇ ಕೆಲಸ ಮಾಡುತ್ತದೆ; ಅದರದ್ದೇ ಪಾಕ್ಕಾ ಅಚ್ಚು. ರಸ್ತೆಯುದ್ದಕ್ಕೂ ವಿದ್ಯುತ್ ಕಂಬಗಳನ್ನು ನಿರ್ಮಿಸಿ, ಅಲ್ಲಿಯ ತಂತಿಗಳ ಮೂಲಕ ವಿದ್ಯುತ್ ಹರಿದು, ಆ ಶಕ್ತಿಯ ವರ್ಗಾವಣೆಯ ಮೂಲಕ ವಾಹನಗಳು ಚಲಿಸುತ್ತವೆ. ಇದು ದೊಡ್ಡ ಗಾತ್ರದ ಟ್ರಕ್ ಹಾಗೂ ಬಸ್ಸುಗಳಿಗೆ ಮಾತ್ರ ಸೂಕ್ತ. ರಸ್ತೆಯ ಒಂದು ಬದಿಯಲ್ಲಿ ಯಾರಿಗೂ ತಲೆಬಿಸಿ ಮಾಡಿಕೊಳ್ಳದೆ ಗುಂಪಗುಂಪಾಗಿ ಹೋಗುವ ಕೋಣಗಳ ದಂಡಿನ ಹಾಗೆ ಇವುಗಳೂ ಸಾಗುವಂತೆ ಮಾಡಬಹುದು. ಸಿಮನ್ಸ್ ಕಂಪನಿಯು ಜರ್ಮನಿಯಲ್ಲಿ ಇಹೈವೆಯನ್ನು ನಿರ್ಮಿಸಿ ಈ ಪ್ರಯೋಗವನ್ನು ನಡೆಸುತ್ತಿದೆ.

2. ಕಂಡಕ್ಟಿವ್ ಲೈನ್ಸ್

ಈ ಮಾದರಿಯಲ್ಲಿ ರಸ್ತೆಯೊಳಗೆ ವಿದ್ಯುತ್ತನ್ನು ಸರಬರಾಜು ಮಾಡಬಲ್ಲ ಕಂಡಕ್ಟಿವ್ ರೇಲ್ಸ್ ಅಳವಾಡಿಸಲಾಗಿರುತ್ತದೆ. ವಾಹನದಲ್ಲಿರುವ ಒಂದು ಸಾಧನವನ್ನು ಈ ರಸ್ತೆಗೆ ಸಿಕ್ಕಿಸಿದಾಗ ವಿದ್ಯುತ್ ವಾಹನದೊಳಗೆ ಹರಿದು ಅದರಲ್ಲಿಯ ಬ್ಯಾಟರಿ ಚಾರ್ಜ್ ಆಗುತ್ತದೆ ಅಥವಾ ಮೋಟರ್ ಚಲಿಸುತ್ತದೆ. ಇದರಲ್ಲಿ ರಸ್ತೆ ಹಾಗೂ ವಾಹನದ ನಡುವೆ ಅಚ್ಚುಕಟ್ಟಾದ ಹೊಂದಾಣಿಕೆಯು ಮುಖ್ಯ. ಸ್ವಿಡನ್ ನ ಇ-ರೋಡ್ ಅಲ್ರಾಂಡಾ ಯೋಜನೆಯನ್ನು ಇದೇ ಮಾದರಿಯಲ್ಲಿ ರೂಪಿಸಲಾಗಿದೆ. ಓವರ್ಹೆಡ್ ಹಾಗೂ ಕಂಡಕ್ಟಿವ್ ಸಿಸ್ಟಮ್ ಮೂಲಭೂತವಾಗಿ ಒಂದೇ ರೀತಿಯಲ್ಲಿ ಕೆಲಸ ಮಾಡುವುದಾದರೂ ಹೊರಗಿನಿಂದ ನೋಡಲು ಮಾತ್ರ ಬೇರೆ ಬೇರೆ. ಇದರಲ್ಲಿ ವಾಹಕ ಸಾಧನವು ವಾಹನದ ಅಡಿಯಲ್ಲಿ ಇರುತ್ತದೆ; ಯಾರ ಕಣ್ಣಿಗೂ ಕಾಣುವುದಿಲ್ಲ!

3. ಇಂಡಕ್ಟಿವ್ ಲೈನ್ಸ್

ವಯರ್ಲೆಸ್ ಚಾರ್ಜಿಂಗ್ ಬಳಕೆ ಮಾಡಿದವರಿಗೆ ಈ ತಂತ್ರಜ್ಞಾನ ಬಹುಬೇಗ ಅರ್ಥವಾಗುತ್ತದೆ. ಇಂಡಕ್ಟಿವ್ ತಂತ್ರಜ್ಞಾನದ ಇ-ರೋಡ್ಗಳು ಇದೇ ಮಾದರಿಯಲ್ಲಿ ನಿರ್ಮಾಣಗೊಂಡಿರುವಂತಹದ್ದು! ಅದೇ, ಇಂಡಕ್ಷನ್ ಚಾರ್ಜಿಂಗ್ ತಂತ್ರಜ್ಞಾನ. ಇಲ್ಲಿ ರಸ್ತೆಯೊಳಗೆ ವಾಹಕ ತಂತಿಗಳ ಸುರುಳಿಯನ್ನು (ಇಂಡಕ್ಷನ್ ಕಾಯ್ಲ್) ಅಳವಡಿಸಲಾಗಿರುತ್ತದೆ, ಅದು ರಸ್ತೆಯ ಮೇಲೆ ಹೋಗುವ ಇಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡುತ್ತದೆ. ಇದರಲ್ಲಿ ಅಲೈನ್ಮೆಂಟ್, ವಿದ್ಯುತ್ ತಂತಿಗಳ ಬಳಕೆ ಯಾವುದೂ ಬೇಡ. ಆದರೆ ಇದರ ನಿರ್ಮಾಣದ ವೆಚ್ಚ ತುಂಬಾ ಹೆಚ್ಚು, ದುಬಾರಿ. ಆದರೂ ಈ ಅತ್ಯಾಧುನಿಕ ತಂತ್ರಜ್ಞಾನವನ್ನು ಇಸ್ರೇಲ್ ಹಾಗೂ ಸ್ವಿಡನ್ನಲ್ಲಿ ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ.

4. ರಸ್ತೆ ಬದಿಯ ಕಂಡಕ್ಟಿವ್ ಲೈನ್ಸ್

ರಸ್ತೆ ಬದಿಯ ಕಂಡಕ್ಟಿವ್ ಲೈನ್ಸ್ ಎನ್ನುವ ವಿಚಾರ ಇವತ್ತಿಗೆ ಕೇವಲ ಪ್ರಯೋಗಾಲಯಕ್ಕೆ ಮಾತ್ರವೇ ಸೀಮಿತವಾಗಿದೆ. ರಸ್ತೆಯ ಅಂಚಿನಲ್ಲಿ ನಿರ್ಮಿಸಲ್ಪಟ್ಟ ವಿದ್ಯುತ್ ಸಲಕರಣೆಗಳ ಮೂಲಕ ವಾಹನವನ್ನು ಓಡಿಸಲಬಲ್ಲ ತಂತ್ರಜ್ಞಾನವಿದು.

ಮೇಲಿನ ನಾಲ್ಕು ಬಗೆಯ ತಂತ್ರಜ್ಞಾನಗಳನ್ನು ಬೇರೆಯಾಗಿ ಅಥವಾ ಜೊತೆ ಜೊತೆಗೂ ಬಳಸಿದ ಉದಾಹರಣೆಗಳಿವೆ. ಇವತ್ತು ಇ-ರೋಡ್ ತಂತ್ರಜ್ಞಾನವನ್ನು ಸ್ವೀಡನ್, ಜರ್ಮನಿ, ಪ್ರಾನ್ಸ್, ಇಟಲಿ, ಇಸ್ರೇಲ್, ಚೀನಾ, ಹಾಗೂ ಅಮೆರಿಕಾದಂತಹ ದೇಶಗಳಲ್ಲಿ ಅತ್ಯಂತ ಸಣ್ಣ ಪ್ರಮಾಣದಲ್ಲಿ ಕಾಣಬಹುದು. ಭಾರತದಲ್ಲಿ ಇನ್ನೂ ಅದು ಪ್ರಯೋಗ ಶಾಲೆಯ ಆವರಣವನ್ನು ಮೀರಿಲ್ಲ. ಇದಕ್ಕೆ ಮುಖ್ಯವಾದ ಕಾರಣವೆಂದರೆ ಕ್ಯಾಪಿಟಲ್ ಇನ್ವೆಸ್ಟ್ಮೆಂಟ್. ಇಷ್ಟೊಂದು ಹಣವನ್ನು ತೆತ್ತು ಯಾರು ಹೊಸ ಮಾದರಿಯ ರಸ್ತೆಯನ್ನು ತಯಾರಿಸುವರು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.