ಬೆಂಗಳೂರು: ಜಾಗತಿಕ ಟೆಕ್ ದೈತ್ಯ ಹಾಗೂ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ ಮೂಲದ ಇಂಟೆಲ್ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ (CTO) ಹಾಗೂ ಆ ಕಂಪನಿಯ ಕೃತಕ ಬುದ್ಧಿಮತ್ತೆ (AI) ವಿಭಾಗದ ಮುಖ್ಯಸ್ಥರಾಗಿ ಬೆಳಗಾವಿ ಮೂಲದ ಸಚಿನ್ ಕತ್ತಿ ಅವರು ನೇಮಕವಾಗಿದ್ದಾರೆ ಎಂದು ಕೆಲ ವರದಿಗಳು ಹೇಳಿವೆ.

Intel ಕಂಪನಿಯ ಸಿಇಒ ಲಿಪ್ ಬೂ ಟಾನ್ ಅವರು ಇಂಟೆಲ್ ಮೆಮೊ ಮೂಲಕ ಈ ವಿಷಯ ತಿಳಿಸಿದ್ದಾರೆ. ಇಂಟೆಲ್ ವೆಬ್ಸೈಟಿನಲ್ಲಿ ಸದ್ಯ ಸಚಿನ್ ಕತ್ತಿ ಅವರು ಹಿರಿಯ ಉಪಾಧ್ಯಕ್ಷ ಜನರಲ್ ಮ್ಯಾನೇಜರ್ (ನೆಟ್ವರ್ಕ್ ಎಡ್ಜ್ ಗ್ರೂಪ್) ಎಂದು ಬರೆಯಲಾಗಿದೆ.

ಸಚಿನ್ ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಮೂಲದವರು. ಅವರ ತಂದೆ– ತಾಯಿ ವೈದ್ಯರಾಗಿದ್ದು, ಊರಿನಲ್ಲಿಯೇ ಸ್ವಂತ ಆಸ್ಪತ್ರೆ ನಡೆಸುತ್ತಿದ್ದಾರೆ. ಸಚಿನ್ ಪತ್ನಿ ಸೀಮಾ ಕೂಡ ಸಾಫ್ಟ್ವೇರ್ ಎಂಜಿನಿಯರ್. ಸಹೋದರ ಅಮಿತ್ ಹಾಗೂ ಅವರ ಪತ್ನಿ ಕೂಡ ವೈದ್ಯರಾಗಿದ್ದು, ಬೆಳಗಾವಿಯಲ್ಲಿ ವೃತ್ತಿ ಕೈಗೊಂಡಿದ್ದಾರೆ.

ಬೆಳಗಾವಿಯ ಸೇಂಟ್ ಝೇವಿಯರ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಧಾರವಾಡದ ಕೆ.ಇ. ಬೋರ್ಡ್ಸ್ನಲ್ಲಿ ಪ್ರೌಢಶಿಕ್ಷಣ, ಕರ್ನಾಟಕ ಕಾಲೇಜಿನಲ್ಲಿ ಬಿಎಸ್ಸಿ, ಮುಂಬೈನ ಐಐಟಿಯಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. 2003ರಿಂದ 2008ರವರೆಗೆ ಅಮೆರಿಕದ ಮೆಸ್ಸಾಚುಯೇಟ್ಸ್ನ ಎಂಐಟಿ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸಸ್ನಲ್ಲಿ ಎಂ.ಎಸ್ ಮತ್ತು ಪಿಎಚ್.ಡಿ ಪಡೆದಿದ್ದಾರೆ.

ಸಚಿನ್ ಅವರ ಕಿರಿಯ ಸಹೋದರ ಡಾ.ಅಮಿತ್ ಕತ್ತಿ, ‘ಇದು ಸಚಿನ್ ಬುದ್ಧಿವಂತಿಕೆ, ಶ್ರಮಕ್ಕೆ ಸಂದ ಸ್ಥಾನ. ಆರು ತಿಂಗಳ ಹಿಂದಿನಿಂದಲೂ ನಿರೀಕ್ಷೆ ಇತ್ತು. ಜಾಗತಿಕ ಮಟ್ಟದಲ್ಲಿ ಸಹೋದರ ಹೆಸರು ಮಾಡಿದ್ದು ಖುಷಿ ತಂದಿದೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಆರಂಭದಲ್ಲಿ ಸ್ಟ್ಯಾನ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು. ಅದರೊಂದಿಗೇ ‘ಕುಮಾ’ ಹಾಗೂ ‘ಉಹಾನ್’ ಎಂಬ ನೆಟ್ವರ್ಕ್ ಕಂಪನಿಗಳನ್ನು ಆರಂಭಿಸಿದ್ದರು.

2021ರಲ್ಲಿ ಇಂಟೆಲ್ ಕಂಪನಿ ಸೇರಿದ ಸಚಿನ್ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ‘ಚಿಫ್ ಟೆಕ್ನಾಲಜಿ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಅವರದು ಅಸಾಮಾನ್ಯ ಕೌಶಲ’ ಎಂಬುದು ಅವರ ಸ್ನೇಹಿತರು ನೀಡುವ ಮಾಹಿತಿ.

ಸಚಿನ್ ಅವರು ಮಾಜಿ ಸಚಿವ ದಿವಂಗತ ಉಮೇಶ ಕತ್ತಿ ಹಾಗೂ ಉದ್ಯಮಿ ರಮೇಶ ಕತ್ತಿ ಅವರ ದೂರದ ಸಂಬಂಧಿಯಾಗಿದ್ದಾರೆ.

ಸದ್ಯ ಸಚಿನ್ ಕತ್ತಿ ಅವರು ಅಮೆರಿಕದ ನಾಗರಿಕರಾಗಿ ಕ್ಯಾಲಿಫೊರ್ನಿಯಾ ರಾಜ್ಯದ ಸ್ಯ್ಟಾನ್ಫೊರ್ಡ್ನಲ್ಲಿ ನೆಲೆಸಿದ್ದಾರೆ. ಇಂಟೆಲ್ ಕಂಪನಿಯ ವೆಬ್ಸೈಟ್ ಪ್ರಕಾರ ಸಚಿನ್ ಕಟ್ಟಿ ಅವರದ್ದು ಎಐ ವಿಭಾಗದಲ್ಲಿ ಗುರುತರ ಕೆಲಸ. ಅಲ್ಲದೇ ತಂತ್ರಜ್ಞಾನ ಲೋಕದಲ್ಲಿ ಸಚಿನ್ ಅವರು ಜಾಗತಿಕವಾಗಿ ಹೆಸರು ಮಾಡಿದ್ದಾರೆ.

ಸಚಿನ್ ಕಟ್ಟಿ ಅವರಿಗೆ ಶುಭಾಶಯ ಕೋರಿ ಅನೇಕ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.