ಮಂಗಳವಾರ, ಸೆಪ್ಟೆಂಬರ್ 21, 2021
21 °C

ಮಾರುಕಟ್ಟೆಗೆ ಬಂತು ಹೊಸ ನೋಕಿಯಾ ಸ್ಮಾರ್ಟ್‌ಫೋನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Nokia

ಬೆಂಗಳೂರು: ಮೊಬೈಲ್ ಮಾರುಕಟ್ಟೆಯ ಜನಪ್ರಿಯ ಬ್ರ್ಯಾಂಡ್ ನೋಕಿಯಾ, ಮೂರು ಹೊಸ ಮಾದರಿಗಳನ್ನು ಪರಿಚಯಿಸಿದೆ.

ನೋಕಿಯಾ ಮೊಬೈಲ್ಸ್ ಸರಣಿಯಲ್ಲಿ ನೋಕಿಯಾ XR20, ನೋಕಿಯಾ 6310 ಮತ್ತು ನೋಕಿಯಾ C30 ಬಿಡುಗಡೆಯಾಗಿದೆ. ಜತೆಗೆ ಹೊಸ ಇಯರ್‌ಬಡ್ಸ್ ಕೂಡ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

ಫಿನ್‌ಲ್ಯಾಂಡ್ ಮೂಲಕ ನೋಕಿಯಾ, ಪ್ರಸ್ತುತ ಎಚ್‌ಎಂಡಿ ಗ್ಲೋಬಲ್ ಒಡೆತನದಲ್ಲಿದೆ.


ನೋಕಿಯಾ 6310 (2021)

ನೋಕಿಯಾ XR20 ಮತ್ತು ನೋಕಿಯಾ C30 ಸ್ಮಾರ್ಟ್‌ಫೋನ್‌ಗಳಾಗಿದ್ದರೆ, ನೋಕಿಯಾ 6310 ಬೇಸಿಕ್ ಫೀಚರ್ ಫೋನ್ ಆಗಿದ್ದು, 2021ರ ಆವೃತ್ತಿಯಾಗಿದೆ.

ಮೂರು ಹೊಸ ಮಾದರಿಗಳು ದೇಶದ ಮಾರುಕಟ್ಟೆಯನ್ನು ಶೀಘ್ರದಲ್ಲೇ ಪ್ರವೇಶಿಸಲಿದ್ದು, ಬೆಲೆ ವಿವರವನ್ನು ಕಂಪನಿ ಇನ್ನಷ್ಟೇ ಪ್ರಕಟಿಸಲಿದೆ.

ನೋಕಿಯಾ XR20 ಸ್ಮಾರ್ಟ್‌ಫೋನ್ 4GB + 64GB ಹಾಗೂ 6GB + 128 GB ಎಂಬ ಎರಡು ಮಾದರಿಗಳಲ್ಲಿ ದೊರೆಯಲಿದೆ.

ನೋಕಿಯಾ C30 ಫೋನ್ 2GB + 32GB, 3GB + 32GB ಮತ್ತು 3GB + 64GB ಎಂಬ ಮೂರು ಆವೃತ್ತಿಗಳಲ್ಲಿ ಲಭ್ಯವಾಗಲಿದೆ.

ನೋಕಿಯಾ 6310 ಮೊಬೈಲ್ 2021 ಆವೃತ್ತಿ ಕಪ್ಪು, ಹಸಿರು, ನೀಲಿ ಮತ್ತು ಹಳದಿ ಬಣ್ಣಗಳಲ್ಲಿ ದೊರೆಯಲಿದ್ದು, ಅಂದಾಜು ₹3,500 ದರ ಹೊಂದಿರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು