ಬೆಂಗಳೂರು: ಬೆಂಚ್‌ಮಾರ್ಕ್ ಸ್ಕೋರ್‌ಗಳನ್ನು ಒನ್‌ಪ್ಲಸ್ ತಿದ್ದುತ್ತಿದೆ ಎಂಬ ಆರೋಪ ಸಾಮಾಜಿಕ ತಾಣಗಳಲ್ಲಿ ಕೇಳಿಬಂದ ಬೆನ್ನಲ್ಲೇ ಕಂಪನಿ ಸ್ಪಷ್ಟನೆ ನೀಡಿದೆ.
ಒನ್‌ಪ್ಲಸ್ 9 ಮತ್ತು ಒನ್‌ಪ್ಲಸ್ 9 ಪ್ರೊ ಸ್ಮಾರ್ಟ್‌ಫೋನ್‌ಗಳಲ್ಲಿ ಬೆಂಚ್‌ಮಾರ್ಕ್ ಕಾರ್ಯನಿರ್ವಹಣೆಯ ಸ್ಕೋರ್‌ಗಳಲ್ಲಿ ವ್ಯತ್ಯಾಸವಾಗಿ ಹೆಚ್ಚಿನ ಅಂಕಗಳು ಬರುವಂತೆ ಸಾಫ್ಟ್‌ವೇರ್ ರೂಪಿಸಲಾಗಿದೆ ಎಂಬ ಆರೋಪದ ಬಳಿಕ ‘ಜೀಕ್‌ಬೆಂಚ್’ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಅನ್‌ಲಿಸ್ಟ್ ಮಾಡಿದೆ.
ಒನ್‌ಪ್ಲಸ್ ಫೋನ್‌ಗಳ ಕಾರ್ಯನಿರ್ವಹಣೆ ಮತ್ತು ಜೀಕ್‌ಬೆಂಚ್ ರೇಟಿಂಗ್ ಬಗ್ಗೆ ವಿವಾದದ ಬಳಿಕ ಸಿಇಒ ಪೀಟೆ ಲಾ, ಒನ್‌ಪ್ಲಸ್ ಫೋರಂನಲ್ಲಿ ಈ ಬಗ್ಗೆ ವಿವರಣೆ ನೀಡಿದ್ದಾರೆ.
‘ನಾವು ಫೋನ್‌ಗಳನ್ನು ಬೆಂಚ್‌ಮಾರ್ಕಿಂಗ್ ಸ್ಕೋರ್‌ಗಳಿಗಾಗಿ ತಯಾರಿಸುವುದಿಲ್ಲ, ಬಳಕೆದಾರರಿಗೆ ನೈಜ ಅನುಭವ ದೊರೆಯುವಂತೆ ರೂಪಿಸಲಾಗುತ್ತದೆ, ಎಂದು ಒನ್‌ಪ್ಲಸ್ ಫೋರಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಸ್ಮಾರ್ಟ್‌ಫೋನ್‌ಗಳ ಕಾರ್ಯನಿರ್ವಹಣೆ ಮತ್ತು ಕ್ಷಮತೆಯನ್ನು ಪರಿಶೀಲಿಸಲು ಬೆಂಚ್‌ಮಾರ್ಕ್ ಜೀಕ್‌ಬೆಂಚ್ ರೇಟಿಂಗ್ ನೀಡಲಾಗುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.