ಶನಿವಾರ, ಅಕ್ಟೋಬರ್ 16, 2021
29 °C

ಸ್ಯಾಮ್‌ಸಂಗ್ ಗ್ಯಾಲಕ್ಸಿ A21s ಸ್ಮಾರ್ಟ್‌ಫೋನ್ ಬೆಲೆ ₹2,500 ಇಳಿಕೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Samsung India

ಬೆಂಗಳೂರು: ಸ್ಯಾಮ್‌ಸಂಗ್ ಗ್ಯಾಲಕ್ಸಿ ಸರಣಿಯಲ್ಲಿ ಬಿಡುಗಡೆಯಾಗಿದ್ದ A21s ಸ್ಮಾರ್ಟ್‌ಫೋನ್ ದರ ಇಳಿಕೆಯಾಗಿದೆ.

ಮಧ್ಯಮ ಬಜೆಟ್ ಮತ್ತು ವಿಶೇಷತೆ ಹೊಂದಿರುವ ಸ್ಮಾರ್ಟ್‌ಫೋನ್ ಖರೀದಿದಾರರಿಗೆ ಸ್ಯಾಮ್‌ಸಂಗ್ ವಿಶೇಷ ಕೊಡುಗೆ ನೀಡುತ್ತಿದ್ದು, ಗ್ಯಾಲಕ್ಸಿ A21s ದರದಲ್ಲಿ ₹2,500 ಇಳಿಕೆ ಮಾಡಿದೆ.

ಮುಂಬೈ ಮೂಲದ ರಿಟೇಲರ್ ಆಗಿರುವ ಮಹೇಶ್ ಟೆಲಿಕಾಂ, ಸ್ಯಾಮ್‌ಸಂಗ್ ಫೋನ್ ದರ ಇಳಿಕೆ ಕುರಿತು ಪ್ರಕಟಿಸಿದ್ದಾರೆ.

ಕಳೆದ ವರ್ಷದ ಜೂನ್‌ನಲ್ಲಿ ಬಿಡುಗಡೆಯಾಗಿದ್ದ ಸ್ಯಾಮ್‌ಸಂಗ್ ಗ್ಯಾಲಕ್ಸಿ A21s, 4 GB + 64 GB ಮಾದರಿಗೆ ಪರಿಷ್ಕೃತ ದರ ₹13,999 ಹಾಗೂ 6 GB + 64 GB ಆವೃತ್ತಿಗೆ ₹16,490 ದರವಿದೆ.

ಕಪ್ಪು, ಬಿಳಿ ಮತ್ತು ನೀಲಿ ಎಂಬ ಮೂರು ಬಣ್ಣಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A21s ದೊರೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು