ಗುರುವಾರ , ಜೂನ್ 17, 2021
29 °C

ಸ್ಯಾಮ್‌ಸಂಗ್‌ ಎ31 ಬಿಡುಗಡೆ: 6ಜಿಬಿ ರ‍್ಯಾಮ್‌, 48ಎಂಪಿ ಕ್ಯಾಮೆರಾ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ31 ಸ್ಮಾರ್ಟ್‌ಫೋನ್‌

ಬೆಂಗಳೂರು: ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಗ್ಯಾಲಕ್ಸಿ ಎ ಸಿರೀಸ್‌ನಲ್ಲಿ ಹೊಸ ಫೋನ್‌ ಎ31 ಭಾರತದಲ್ಲಿ ಬಿಡುಗಡೆಯಾಗಿದೆ. ಸ್ಯಾಮ್‌ಸಂಗ್‌ ಒಪೇರಾ ಹೌಸ್‌ ಸೇರಿದಂತೆ ಮೊಬೈಲ್‌ ಮಾರಾಟ ಮಳಿಗೆಗಳಲ್ಲಿ ಫೋನ್‌ ಲಭ್ಯವಿದೆ. ಬೆಲೆ ₹21,999 ನಿಗದಿಯಾಗಿದೆ.

ಎಚ್‌ಡಿ+ ರೆಸಲ್ಯೂಷನ್‌ (1080x2400) ಹೊಂದಿರುವ 6.4 ಇಂಚು ಇನ್ಫಿನಿಟಿ–ಯು ಎಸ್‌ಅಮೊಲೆಡ್‌ ಡಿಸ್‌ಪ್ಲೇ ಇದೆ. ಮೀಡಿಯಾಟೆಕ್‌ ಆಕ್ಟಾ–ಕೋರ್ ಪ್ರೊಸೆಸರ್‌, 6ಜಿಬಿ ರ‍್ಯಾಮ್‌ ಮತ್ತು 128ಜಿಬಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಗೇಮ್‌ ಬೂಸ್ಟರ್‌ ಮೋಡ್‌ ಸಹ ನೀಡಲಾಗಿದ್ದು, ಕಾರ್ಯಾಚರಣೆಗೆ ಆ್ಯಂಡ್ರಾಯ್ಡ್‌ 10 ಒನ್‌ಯುಐ ಇದೆ.

ಮೈಕ್ರೊಎಸ್‌ಡಿ ಕಾರ್ಡ್‌ ಮೂಲಕ 512ಜಿಬಿ ವರೆಗೂ ಸಂಗ್ರಹ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು. 5,000 ಎಂಎಎಚ್‌ ಬ್ಯಾಟರಿ ಇದ್ದು, 15 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ ಅನ್ವಯಿಸುತ್ತದೆ.

ಪ್ರಿಸಮ್‌ ಕ್ರಷ್‌ ಬ್ಲೂ, ಕಪ್ಪು ಹಾಗೂ ಬಿಳಿ ಬಣ್ಣಗಳಲ್ಲಿ ಫೋನ್‌ ಸಿಗಲಿದೆ. ಸ್ಯಾಮ್‌ಸಂಗ್‌ ವೆಬ್‌ಸೈಟ್‌, ಅಮೆಜಾನ್‌, ಫ್ಲಿಪ್‌ಕಾರ್ಟ್‌ ಸೇರಿದಂತೆ ಆನ್‌ಲೈನ್‌ ಮಾರಾಟ ವ್ಯವಸ್ಥೆಯಲ್ಲೂ ಫೋನ್‌ ಸಿಗುತ್ತಿದೆ.

ಫೋನ್‌ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳನ್ನು ನೀಡಲಾಗಿದೆ. 48ಎಂಪಿ, 5ಎಂಪಿ ಡೆಪ್ತ್‌ ಸೆನ್ಸರ್‌, 8ಎಂಪಿ ಅಲ್ಟ್ರಾ ವೈಡ್‌ ಆ್ಯಂಗಲ್‌, 5ಎಂಪಿ ಮ್ಯಾಕ್ರೊ ಲೆನ್ಸ್ ಅಳವಡಿಸಲಾಗಿದೆ. ಸೆಲ್ಫಿಗಾಗಿ 20ಎಂಪಿ ಕ್ಯಾಮೆರಾ ಇದೆ. ಹಿಂಬದಿ ಕ್ಯಾಮೆರಾದಲ್ಲಿ  8x ಡಿಜಿಟಲ್‌ ಜೂಮ್‌ ಹಾಗೂ ಪ್ರತಿ ಸೆಕೆಂಡ್‌ಗೆ 30 ಫ್ರೇಮ್‌ ವೇಗದಲ್ಲಿ ಪೂರ್ಣ ಎಚ್‌ಡಿ ವಿಡಿಯೊ ರೆಕಾರ್ಡ್‌ ಮಾಡಬಹುದು.

ಯುಎಸ್‌ಬಿ ಟೈಪ್‌–ಸಿ ಪೋರ್ಟ್‌, ವೈ–ಫೈ, ಬ್ಲೂಟೂಥ್‌ 5.0,3.5ಎಂಎಂ ಹೆಡ್‌ಫೋನ್‌ ಜ್ಯಾಕ್‌ ಹಾಗೂ ಸ್ಕ್ರೀನ್‌ ಮೇಲೆಯೇ ಫಿಂಗರ್‌ಪ್ರಿಂಟ್‌ ಸೆನ್ಸರ್‌ ನೀಡಲಾಗಿದೆ. ಫೋನ್‌ 185 ಗ್ರಾಂ ತೂಕವಿದೆ.

ಗ್ಯಾಲಕ್ಸಿ ಎ31 ಗುಣಲಕ್ಷಣಗಳು

* ಡಿಸ್‌ಪ್ಲೇ: 6.4 ಇಂಚು ಫುಲ್‌ ಎಚ್‌ಡಿ+ ಎಸ್‌ಅಮೊಲೆಡ್‌ ಇನ್ಫಿನಿಟಿ–ಯು
* ಕ್ಯಾಮೆರಾ: ಹಿಂಬದಿಯಲ್ಲಿ 48ಎಂಪಿ +8ಎಂಪಿ +5ಎಂಪಿ +5ಎಂಪಿ; ಮುಂದೆ 20ಎಂಪಿ
* ಸಾಮರ್ಥ್ಯ: 6ಜಿಬಿ ರ‍್ಯಾಮ್‌, 128ಜಿಬಿ ಸಂಗ್ರಹ (512ಜಿಬಿ ವರೆಗೂ ಸಂಗ್ರಹ ವಿಸ್ತರಿಸಬಹುದು)
* ಬ್ಯಾಟರಿ: 5000 ಎಂಎಎಚ್‌ + 15ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌
* ಪ್ರೊಸೆಸರ್‌: ಎಂಟಿ 6768 ಆಕ್ಟಾ–ಕೋರ್‌ + ಗೇಮ್‌ ಬೂಸ್ಟರ್‌
* ಒಎಸ್‌: ಆ್ಯಂಡ್ರಾಯ್ಡ್‌ 10 +ಸ್ಯಾಮ್‌ಸಂಗ್‌ ಒನ್‌ ಯುಐ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು