ಬೆಂಗಳೂರು: ಲಾವಾ ಇಂಟರ್ನ್ಯಾಷನಲ್ ಲಿಮಿಟೆಡ್ ಭಾರತೀಯ ಸ್ಮಾರ್ಟ್ಫೋನ್ ತಯಾರಿಕ ಕಂಪನಿಯಾಗಿದ್ದು ಇತ್ತೀಚೆಗೆ ಶಾರ್ಕ್ ಎಂಬ ಹೊಸ ಸ್ಮಾರ್ಟ್ಫೋನ್ ಸರಣಿ ಬಿಡುಗಡೆ ಮಾಡಿದೆ.

ವಿನ್ಯಾಸ, ಕಾರ್ಯಕ್ಷಮತೆ ಮತ್ತು ನಿರ್ಮಾಣ ಗುಣಮಟ್ಟದ ಮೇಲೆ ಗಮನ ಕೇಂದ್ರೀಕರಿಸಲಾಗಿರುವ ಲಾವಾ ಶಾರ್ಕ್, ಸ್ಮಾರ್ಟ್ಫೋನ್ ಬಳಸುವವರಿಗೆ ಸೂಕ್ತವಾಗುವಂತೆ ವಿನ್ಯಾಸ ಮಾಡಲಾಗಿದೆ.

ಬೆಲೆ ₹ 6999 ಆಗಿದ್ದು, ಎರಡು ಬೋಲ್ಡ್ ಕಲರ್ ವೇರಿಯಂಟ್ಗಳಾದ ಟೈಟಾನಿಯಮ್ ಗೋಲ್ಡ್ ಮತ್ತು ಸ್ಟೀಲ್ತ್ ಬ್ಲ್ಯಾಕ್ನಲ್ಲಿ ಲಭ್ಯವಿದೆ. 2025 ಮಾರ್ಚ್ನಿಂದ ಲಾವಾದ ವಿವಿಧ ಔಟ್ಲೆಟ್ಗಳಲ್ಲಿ ಲಭ್ಯವಿದೆ.

ಲಾವಾ ಶಾರ್ಕ್ನಲ್ಲಿ 16.94 cm (6.67”) HD+ ಪಂಚ್ಹೋಲ್ ಡಿಸ್ಪ್ಲೇ ಹಾಗೂ 120Hz ರಿಫ್ರೆಶ್ ರೇಟ್ ಇದೆ. ಇದರ ಜೊತೆಗೆ 0.68 ಸೆಕೆಂಡ್ಗಳಲ್ಲಿ ಫೇಸ್ ಅನ್ಲಾಕ್ ಮತ್ತು 0.28 ಸೆಕೆಂಡ್ಗಳಲ್ಲಿ ಫಿಂಗರ್ಪ್ರಿಂಟ್ ಅನ್ಲಾಕ್ ಸೌಲಭ್ಯ ನೀಡಲಾಗಿದೆ. ಹಾಗೇ ನೀರು ಮತ್ತು ಧೂಳು ತಡೆಯುವುದಕ್ಕೆ IP54 ರೇಟಿಂಗ್ ಇದೆ.

UNISOC T606 ಒಕ್ಟಾ ಕೋರ್ ಪ್ರೊಸೆಸರ್ ಇದೆ. ಅಲ್ಲದೆ, 4GB RAM ಮತ್ತು ಹೆಚ್ಚುವರಿ 4GB ವರ್ಚುವಲ್ RAM ಇದೆ. ಅಲ್ಲದೆ, 64GB ಆಂತರಿಕ ಸ್ಟೊರೇಜ್ (256GB ವರೆಗೆ ವಿಸ್ತರಿಸಬಹುದಾಗಿದೆ) ಇದೆ. 50MP AI ರಿಯರ್ ಕ್ಯಾಮೆರಾ, 8MP ಫ್ರಂಟ್ ಕ್ಯಾಮೆರಾ ಇದ್ದು, ಆಂಡ್ರಾಯ್ಡ್ 14ರಲ್ಲಿ ರನ್ ಆಗುತ್ತಿರುವ ಈ ಸ್ಮಾರ್ಟ್ಫೋನ್, 5000mAh ಬ್ಯಾಟರಿ ಹೊಂದಿದೆ.

ಇನ್ನಷ್ಟು ಹೊಸ ಉತ್ಪನ್ನಗಳ ಜೊತೆಗೆ ಶಾರ್ಕ್ ಸರಣಿಯನ್ನು ನಾವು ಇನ್ನಷ್ಟು ವಿಸ್ತರಣೆ ಮಾಡಲಿದ್ದೇವೆ. ಸ್ಮಾರ್ಟ್ಫೋನ್ ಬಳಕೆ ಹೆಚ್ಚುತ್ತಿರುವುದರಿಂದ, ಉತ್ಪನ್ನದ ಗುಣಮಟ್ಟ, ಕಾರ್ಯಕ್ಷಮತೆ ಮತ್ತು ಬಾಳಿಕೆಯಲ್ಲಿ ಇರುವ ಕೊರತೆಯನ್ನು ಕಡಿಮೆ ಮಾಡುವುದಕ್ಕೆ ನಾವು ಬದ್ಧವಾಗಿದ್ದೇವೆ ಎಂದು ಲಾವಾ ಇಂಟರ್ನ್ಯಾಷನಲ್ ಲಿಮಿಟೆಡ್ನ ಉತ್ಪನ್ನ ವಿಭಾಗದ ಮುಖ್ಯಸ್ಥ ಸುಮಿತ್ ಸಿಂಗ್ ಹೇಳಿದ್ದಾರೆ.

ಎಲ್ಲ ಲಾವಾ ಸ್ಮಾರ್ಟ್ಫೋನ್ಗಳಲ್ಲಿ ಇರುವಂತೆಯೇ ಶಾರ್ಕ್ನಲ್ಲಿ ಕೂಡಾ 1 ವರ್ಷದ ವಾರಂಟಿ ಮತ್ತು ಮನೆಗೆ ಉಚಿತ ಸರ್ವೀಸ್ ಲಭ್ಯವಿದೆ.

ಮಾಹಿತಿಗೆ ಸಂಪರ್ಕಿಸಿ: https://www.lavamobiles.com/lava_service_at_home/

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.