ನವದೆಹಲಿ: ‘ಚಂದ್ರನ ಮೇಲ್ಮೈನಲ್ಲಿನ ಕಲ್ಲುಗಳ ಮಾದರಿಗಳನ್ನು ಹೊತ್ತು ಭೂಮಿಗೆ ತರಲು 2027ರ ವೇಳೆಗೆ ‘ಚಂದ್ರಯಾನ 4’ ಮಿಷನ್ ಅನ್ನು ಜಾರಿ ಮಾಡಲಾಗುವುದು’ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೆಂದ್ರ ಸಿಂಗ್ ಹೇಳಿದರು.

‘ಕಲ್ಲುಗಳ ಮಾದರಿಗಳನ್ನು ಹೊರುವ ಶಕ್ತಿ ಹೊಂದಿರುವ ಎರಡು ಪ್ರತ್ಯೇಕ ರಾಕೆಟ್ಗಳನ್ನು ಉಡ್ಡಯನ ಮಾಡಲಾಗುವುದು. ಈ ರಾಕೆಟ್ಗಳಲ್ಲಿ ಐದು ವಿವಿಧ ಕಾಂಪೋನೆಂಟ್ಗಳು ಇರಲಿವೆ. ಇವುಗಳನ್ನು ಕ್ಷಕೆಯಲ್ಲಿ ಜೋಡಿಸಲಾಗುವುದು’ ಎಂದರು.

‘ಮುಂದಿನ ವರ್ಷ ಮಾನವರವನ್ನು ಬಾಹ್ಯಾಕಾಶಕ್ಕೆ ಕಳುಹಿಸಿ, ಸುರಕ್ಷಿತವಾಗಿ ವಾಪಸು ಕರೆಸಿಕೊಳ್ಳುವ ‘ಗಗನಯಾನ’ ಮಿಷನ್ ಅನ್ನು ಕೂಡ ಜಾರಿ ಮಾಡಲಾಗುವುದು. 2026ರಲ್ಲಿ ‘ಸಮುದ್ರಯಾನ’ ಮಿಷನ್ ಅನ್ನು ಜಾರಿ ಮಾಡಲಿದ್ದೇವೆ. ಸಮುದ್ರದ 6 ಸಾವಿರ ಮೀಟರ್ನಷ್ಟು ಆಳಕ್ಕೆ ಮೂವರು ವಿಜ್ಞಾನಿಗಳು ತೆರಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ರೊಬೊಟ್ ‘ವ್ಯೂಮಿತ್ರಾ’ವನ್ನು ಗಗನಯಾನಕ್ಕೆ ಕಳುಹಿಸುವ ಮಹತ್ವದ ಕಾರ್ಯ ಇದೇ ವರ್ಷ ನಡೆಯಲಿದೆ. 1969ರಲ್ಲಿ ಇಸ್ರೊ ಸ್ಥಾಪನೆಯಾದರೂ ಇದರ ಮೊದಲ ಉಡ್ಡಯನ ಕೇಂದ್ರವು 1993ರಲ್ಲಿ ಸ್ಥಾಪನೆಯಾಯಿತು. ಇಸ್ರೊ ಸ್ಥಾಪನೆಯಿಂದ 2014ರವರೆಗೆ ಭಾರತೀಯ ಬಾಹ್ಯಾಕಾಶ ಕ್ಷೇತ್ರವು ಅಭಿವೃದ್ಧಿ ಹೊಂದಿದ್ದಕ್ಕಿಂತ ಹೆಚ್ಚಿನ ಅಭಿವೃದ್ಧಿಯು ಕಳೆದ 10 ವರ್ಷಗಳಲ್ಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.