ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Aditya-L1 Mission: ಎರಡನೇ ಕಕ್ಷೆ ಪ್ರವೇಶಿಸಿದ ಆದಿತ್ಯ; ಸೂರ್ಯನತ್ತ ಪಯಣ

Published : 5 ಸೆಪ್ಟೆಂಬರ್ 2023, 3:00 IST
Last Updated : 5 ಸೆಪ್ಟೆಂಬರ್ 2023, 3:00 IST
ಫಾಲೋ ಮಾಡಿ
Comments

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯು ಸೂರ್ಯನ ಅಧ್ಯಯನಕ್ಕಾಗಿ ಕಳುಹಿಸಿರುವ ಆದಿತ್ಯ–ಎಲ್‌ 1 ನೌಕೆ ಯಶಸ್ವಿಯಾಗಿ ಎರಡನೇ ಕಕ್ಷೆಯನ್ನು ಪ್ರವೇಶಿಸಿದೆ ಎಂದು ಇಸ್ರೊ ತಿಳಿಸಿದೆ.

ಸೆಪ್ಟೆಂಬರ್ 5ರ ರಾತ್ರಿ 2.45ಕ್ಕೆ ಆದಿತ್ಯ ಎಲ್ -1 ಎರಡನೇ ಕಕ್ಷೆಯನ್ನು ಪ್ರವೇಶಿಸಿದೆ ಎಂದು ಇಸ್ರೊ ಸಾಮಾಜಿಕ ಜಾಲತಾಣ ‘ಎಕ್ಸ್‌‘ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಭೂಮಿಯಿಂದ ಈ ಕಕ್ಷೆಯು 282 ಕಿ.ಮೀ X 40,225 ಕಿ.ಮೀ. ಅಂತರದಲ್ಲಿದೆ. ಅಂದರೆ ಭೂಮಿಯಿಂದ ಈ ಕಕ್ಷೆಯ ಕನಿಷ್ಠ ದೂರ 282 ಕಿ.ಮೀ, ಗರಿಷ್ಠ ದೂರ 40,225 ಕಿ.ಮೀ ಎಂದು ಅರ್ಥೈಸಿಕೊಳ್ಳಬಹುದು.

ಆದಿತ್ಯ–ಎಲ್‌ 1 ಸೆಪ್ಟೆಂಬರ್ 10 ರಂದು ರಾತ್ರಿ 2.30ಕ್ಕೆ ಮೂರನೇ ಕಕ್ಷೆಯನ್ನು ಪ್ರವೇಶಿಸುತ್ತದೆ ಎಂದು ಇಸ್ರೊ ತಿಳಿಸಿದೆ. ಸೆಪ್ಟೆಂಬರ್ 3ರಂದು ಆದಿತ್ಯ–ಎಲ್‌ 1 ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಬದಲಾಯಿಸಿತ್ತು. 

ಸೂರ್ಯ ಮತ್ತು ಭೂಮಿ ನಡುವಿನ ‘L1’ ಪಾಯಿಂಟ್‌ನಲ್ಲಿ ಭಾರತ ಮೊದಲ ಸೌರ ವೀಕ್ಷಣಾಲಯವನ್ನು ಸ್ಥಾಪಿಸಲಿದ್ದು ಈ ಮೂಲಕ ಸೂರ್ಯನ ಹೊರಗಿನ ವಾತಾವರಣವನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ. L1 ಎಂದರೆ ಲಾಗ್ರೇಂಜ್ ಪಾಯಿಂಟ್ 1, ಅಲ್ಲಿ ಆದಿತ್ಯ ನೌಕೆಯನ್ನು ನಿಲ್ಲಿಸಲಾಗುತ್ತದೆ. 

L1 ಪಾಯಿಂಟ್ ಭೂಮಿಯಿಂದ 15 ಲಕ್ಷ ಕಿ. ಮೀಟರ್‌ ದೂರದಲ್ಲಿದೆ, ಇಲ್ಲಿ ಸೂರ್ಯ ಮತ್ತು ಭೂಮಿಯ ಪರಸ್ಪರ ಗುರುತ್ವಾಕರ್ಷಣೆ ತಟಸ್ಥವಾಗಿರುತ್ತದೆ. ಭೂಮಿಯಿಂದ L1 ಪಾಯಿಂಟ್‌ ತಲುಪಲು ಆದಿತ್ಯ–ಎಲ್‌1 ಒಟ್ಟು 125 ದಿನಗಳನ್ನು ಪ್ರಯಾಣಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT