ಆಕ್ಸಿಯಂ–4 ಬಾಹ್ಯಾಕಾಶ ಯೋಜನೆಯ ಮೂಲಕ ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆಗೆ ಭಾರತವು ಮರು ಪ್ರವೇಶ ಪಡೆದಂತಾಗಿದೆ. ಇದರಿಂದ ನಮ್ಮ ಗಗನಯಾನ ಮಿಷನ್, ಭಾರತೀಯ ಬಾಹ್ಯಾಕಾಶ ಕೇಂದ್ರ ಸ್ಥಾಪನೆ, ಚಂದ್ರನಲ್ಲಿಗೆ ಮಾನವನನ್ನು ಕಳುಹಿಸುವ ಯೋಜನೆಗೆ ವೇದಿಕೆ ಸಿದ್ಧ ಮಾಡಿದಂತಾಗಿದೆ..
ಸೋಮಕ್ ರಾಯ್‌ಚೌಧರಿ, ಖಭೌತ ವಿಜ್ಞಾನಿ
ನಾವು ಈಗ ಯಾರದ್ದೋ ಅನುಯಾಯಿ ಅಲ್ಲ. ಶುಕ್ಲಾ ಅವರು ಈ ಮಿಷನ್‌ನ ಪ್ರಮುಖ ಭಾಗವಾಗಲಿದ್ದಾರೆ
ಜಿತೇಂದ್ರ ಸಿಂಗ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ
ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಶುಕ್ಲಾ ಅವರು ತೆರಳಿದ್ದು ಐತಿಹಾಸಿಕವಾದುದು. ನಮಗಿದು ಹೆಮ್ಮೆ. ಬಾಹ್ಯಾಕಾಶಕ್ಕೆ ಸಂಬಂಧಿಸಿ ಭಾರತದ ಮಹಾತ್ವಾಕಾಂಕ್ಷೆಗಳಿಗೆ ಇದೊಂದು ಮೈಲಿಗಲ್ಲು
ಪವನ್ ಕುಮಾರ್ ಗೋಯೆಂಕಾ, ಅಧ್ಯಕ್ಷ, ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರಮೋಷನ್ ಮತ್ತು ಆಥರೈಸೇಷನ್ ಸೆಂಟರ್