ನವದೆಹಲಿ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಎರಡನೇ ಭಾರತೀಯ ಶುಭಾಂಶು ಶುಕ್ಲಾ ಅವರು ಜುಲೈ 15ರಂದು ಭೂಮಿಗೆ ಮರಳಲಿದ್ದು, ಕ್ಯಾಲಿಫೋರ್ನಿಯಾದ ಕಡಲ ತೀರದ ಬಳಿ ನೀರಿನಲ್ಲಿ ಇಳಿಯಲಿದ್ದಾರೆ.

ಆಕ್ಸಿಯಮ್–4 ಯೋಜನೆಯಲ್ಲಿ ಶುಕ್ಲಾ ಅವರೊಂದಿಗೆ, ಅಮೆರಿಕದ ಪೆಗ್ಗಿ ವಿಟ್ಸನ್, ಹಂಗರಿಯ ಟಿರ್ಬೊ ಕಾಪು ಹಾಗೂ ಪೋಲೆಂಡ್ನ ಸ್ವವೋಶ್ ಓಜ್ನೈನ್ಸ್ಕಿ ವೀಶ್ನೀವುಫ್ಸ್ಕಿ ಅವರು ಜೂನ್ 26ರಂದು ಬಾಹ್ಯಾಕಾಶ ಯಾನ ಕೈಗೊಂಡಿದ್ದರು. ಇವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸುಮಾರು 60 ಪ್ರಯೋಗಗಳನ್ನು ನಡೆಸುವ ಉದ್ದೇಶದಿಂದ ತೆರಳಿದ್ದರು. ಎರಡು ವಾರಗಳ ಅವಧಿಗೆ ತೆರಳಿದ್ದ ಈ ತಂಡ ಮರಳಲು ದಿನಾಂಕ ನಿಗದಿಯಾಗಿದೆ.

ಈ ನಾಲ್ವರು ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸೋಮವಾರ (ಜುಲೈ 14) ಸಂಜೆ ಭಾರತೀಯ ಕಾಲಮಾನ ಪ್ರಕಾರ 4.35ಕ್ಕೆ ಹೊರಡಲಿದ್ದಾರೆ ಎಂದು ರಾಷ್ಟ್ರೀಯ ಏರೊನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತ ತಿಳಿಸಿದೆ.

‘ಐಎಸ್ಎಸ್ನಿಂದ ಡ್ರಾಗನ್ ನೌಕೆಯಲ್ಲಿ ಹೊರಡುವ ಈ ತಂಡ ನಿಗದಿತ ಕಕ್ಷೆಯಲ್ಲಿನ ಹಲವು ಸುತ್ತುಗಳ ಬಳಿಕ ಕ್ಯಾಲಿಫೋರ್ನಿಯಾದ ತೀರದಲ್ಲಿ ಜುಲೈ 15ರಂದು ಮಧ್ಯಾಹ್ನ 3ಕ್ಕೆ ಬಂದಿಳಿಯಲಿದ್ದಾರೆ.

‘ಭೂಮಿಗೆ ಮರಳುತ್ತಿದ್ದಂತೆ ಗಗನಯಾತ್ರಿಗಳು ಏಳು ದಿನಗಳ ಪುನಶ್ಚೇತನಾ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ವೈದ್ಯಕೀಯ ತಂಡ ನೆರವಾಗಲಿದ್ದಾರೆ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.
.ಶುಭಾಂಶು ಶುಕ್ಲಾ ಕರೆ: ISSಗೆ ಸುರಕ್ಷಿತ ಪ್ರಯಾಣದಲ್ಲಿ ISRO ಪಾತ್ರ ಶ್ಲಾಘನೆ.ಐಎಸ್ಎಸ್ನಿಂದ ಭೂಮಿ ನೋಡುವುದೇ ಸಂಭ್ರಮ: ಶುಭಾಂಶು ಶುಕ್ಲಾ.
2027ರಲ್ಲಿ ಭಾರತದ ಗಗನಯಾನ

2027ರಲ್ಲಿ ‘ಗಗನಯಾನ’ ಮೂಲಕ ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸವ ಯೋಜನೆಗೆ ನೆರವಾಗುವ ಉದ್ದೇಶದಿಂದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಕಳುಹಿಸಲು ಸುಮಾರು ₹550 ಕೋಟಿಯನ್ನು ಇಸ್ರೊ ನೀಡಿದೆ.

‘ಗಗನಯಾತ್ರಿಗಳ ಆರೋಗ್ಯ ಮತ್ತು ದೈಹಿಕ ಸಾಮರ್ಥ್ಯದ ಕುರಿತು ಇಸ್ರೊದ ವೈಮಾನಿಕ ವೈದ್ಯಕೀಯ ತಂಡವು ತೀವ್ರ ನಿಗಾ ವಹಿಸಿದೆ. ಸದ್ಯ ಶುಭಾಂಶು ಅವರ ಆರೋಗ್ಯ ಉತ್ತಮವಾಗಿದೆ. ಅವರ ಅತ್ಯಂತ ಉತ್ಸಾಹದಿಂದಿದ್ದಾರೆ’ ಎಂದು ಇಸ್ರೊ ಹೇಳಿದೆ.

ಭೂಮಿಯಿಂದ 28 ಸಾವಿರ ಕಿಲೋ ಮೀಟರ್ ಎತ್ತರದಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವಿದೆ. ಅಲ್ಲಿಂದ ಹೊರಟ ನೌಕೆಯು ಸ್ವಯಂ ಚಾಲಿತವಾಗಿದ್ದು, ನಿಧಾನವಾಗಿ ತನ್ನ ವೇಗವನ್ನು ತಗ್ಗಿಸಿ ಭೂಮಿಯ ವಾತಾವರಣವನ್ನು ಪ್ರವೇಶಿಸಲಿದೆ. ಅಲ್ಲಿಂದ ಅದು ಕ್ಯಾಲಿಫೋರ್ನಿಯಾದ ಕಡಲ ತೀರದಲ್ಲಿ ನೀರಿನಲ್ಲಿ ಇಳಿಯಲಿದೆ.
.ಶುಭಾಂಶು–ಮೋದಿ ಸಂಭಾಷಣೆ: ಹೊಸ ಯುಗದ ಶುಭಾರಂಭ ಎಂದು ಬಣ್ಣನೆ.ಸಂಪಾದಕೀಯ | ಬಾಹ್ಯಾಕಾಶಕ್ಕೆ ತಲುಪಿದ ಶುಭಾಂಶು; ಮಹತ್ವಾಕಾಂಕ್ಷೆಯ ಮೊದಲ ಹೆಜ್ಜೆ.
ಬಾಹ್ಯಾಕಾಶ ನಿಲ್ದಾಣದಲ್ಲಿ 60 ಪ್ರಯೋಗಗಳು

ಡ್ರ್ಯಾಗನ್ ನೌಕೆಯು ಗಗನಯಾನಿಗಳೊಂದಿಗೆ 280 ಕೆ.ಜಿ.ಯಷ್ಟು ವಸ್ತುಗಳನ್ನೂ ಹೊತ್ತು ತರುತ್ತಿದೆ. ಇದರಲ್ಲಿ ನಾಸಾದ ಕೆಲ ಹಾರ್ಡ್ವೇರ್ಗಳು ಮತ್ತು 60 ಪ್ರಯೋಗಗಳಿಗೆ ಬಳಸಿದ ವಸ್ತುಗಳು ಇವೆ. ತಮ್ಮ ಬಾಹ್ಯಾಕಾಶ ಯಾನದ ಕುರಿತು ಆಕ್ಸಿಯಮ್–4ರ ಕಮಾಂಡರ್ ಪೆಗ್ಗಿ ವಿಟ್ಸನ್ ಅವರು ಅನಿಸಿಕೆ ಹಂಚಿಕೊಂಡಿದ್ದು, ‘ಐಎಸ್ಎಸ್ನಲ್ಲಿನ ಕೊನೆಯ ಕೆಲ ದಿನಗಳನ್ನು ಸಂಭ್ರಮದಿಂದ ಕಳೆಯುತ್ತಿದ್ದೇವೆ. ಈ ಸಂಭ್ರಮಕ್ಕಾಗಿ ಪುನರ್ಜಲೀಕರಣಗೊಂಡ ಶ್ರಿಂಪ್ ಕಾಕ್ಟೈಲ್ ಮತ್ತು ಉತ್ತಮ ಸ್ನೇಹಿತರ ಬಳಗವಿದೆ’ ಎಂದು ಸಾಮಾಜಿಕ ಮಾದ್ಯಮ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.

ಶುಕ್ಲಾ ಅವರು ತೆಗೆದುಕೊಂಡು ಹೋದ ಕ್ಯಾರೆಟ್ ಹಲ್ವಾ ಮತ್ತು ಆಮ್ರಸ್ ಅನ್ನು ಪಾರ್ಟಿಗೆ ಕಳೆ ಹೆಚ್ಚಿಸಿದೆ.

ಆಳ ಬಾಹ್ಯಾಕಾಶ ಯೋಜನೆಯಲ್ಲಿ ಒಂದು ದಿನಕ್ಕಾಗಿ ಸೂಕ್ಷ್ಮ ಪಾಚಿಯನ್ನು ಬಳಸಿ ಆಹಾರ ಉತ್ಪಾದನೆ, ಆಮ್ಲಜನಕ ಮತ್ತು ಜೈವಿಕ ಇಂಧನ ಉತ್ಪಾದನೆಯ ಪ್ರಯೋಗವನ್ನು ಶುಭಾಂಶು ಮುನ್ನಡೆಸಿದ್ದಾರೆ. ಇದರೊಂದಿಗೆ ಇತರ ಪ್ರಯೋಗಗಳ ಮೂಲಕ ಕಕ್ಷೆಯಲ್ಲಿನ ಕ್ಲಿಷ್ಟಕರ ವಾತಾವರಣದಲ್ಲಿ ಗಗನಯಾನಿಗಳು ದೀರ್ಘಕಾಲದವರೆಗೆ ಜೈವಿಕವಾಗಿ, ಭಾವನಾತ್ಮಕವಾಗಿ ಹೇಗಿರಲಿದ್ದಾರೆ ಎಂಬುದರ ಪ್ರಯೋಗವೂ ನಡೆದಿದೆ.
.ನೀನಿಲ್ಲದೆ...ಗಗನಯಾನಕ್ಕೂ ಮುನ್ನ ಪತ್ನಿಗಾಗಿ ಶುಭಾಂಶು ಶುಕ್ಲಾ ಭಾವುಕ ಪೋಸ್ಟ್.ಶುಭಾಂಶು ಸಾಧನೆಗೆ ತಂದೆಯ ಸಂಭ್ರಮ, ರಾಕೆಟ್ನಲ್ಲಿದ್ದ ಮಗನ ಕಂಡು ತಾಯಿ ಭಾವುಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.