‘ಎಸ್ಎಸ್ಐ ಮಂತ್ರ’ (SSI MANTRA) ಎನ್ನುವ ರೋಬೊ ವ್ಯವಸ್ಥೆ ಬಗ್ಗೆ ನಿಮಗೆ ತಿಳಿದಿರಬೇಕಲ್ಲಾ? ಇದೊಂದು ಭಾರತದ ಮೊದಲ ಸ್ವದೇಶಿ ಶಸ್ತ್ರಚಿಕಿತ್ಸಾ ರೋಬೊ. ‘ಎಸ್ಎಸ್ಐ’ ಎನ್ನುವುದು ಈ ಮಂತ್ರವನ್ನು ಕಂಡುಹಿಡಿದಿರುವ ಪ್ರಯೋಗಾಲಯವಷ್ಟೆ. ‘ಮಂತ್ರ’ ಎಂದರೆ ‘ಮಲ್ಟಿ ಆರ್ಮ್ ನೋವೆಲ್ ಟೆಲಿ ರೋಬೋಟಿಕ್ ಅಸಿಸ್ಟೆನ್ಸ್’ ಎಂದರ್ಥ.

ಈ ಮುಂಚೆ ನಮ್ಮ ದೇಶದಲ್ಲಿ ಸ್ವದೇಶಿ ರೋಬೊಗಳು ಇರಲಿಲ್ಲವೇ? – ಎಂದು ಕೇಳಿದರೆ, ಉತ್ತರ ‘ಹೌದು’. ಮಾನವ್, ಕೆಂಪ, ದಕ್ಷ್, ಮಿತ್ರ, ಮುಂತಾದ ರೋಬೊಗಳು ಭಾರತದಲ್ಲಿ ಪರಿಚಯವಾಗಿ ಈಗಾಗಲೇ ದಶಕಗಳೇ ಕಳೆದಿವೆ. ಆದರೆ ಅವೆಲ್ಲ ವೈದ್ಯಕೀಯ ಕ್ಷೇತ್ರಕ್ಕೆ ವಿನ್ಯಾಸ ಮಾಡಿದುದಾಗಿರಲಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ರೋಬೊಗಳು ಬಳಕೆಯಲ್ಲಿದ್ದರೂ ಪೂರ್ತಿ ಶಸ್ತ್ರಚಿಕಿತ್ಸೆಯನ್ನು ಮಾಡುವಂಥವಾಗಿರಲಿಲ್ಲ. ಈ ಮಂತ್ರವು ಶಸ್ತ್ರಚಿಕಿತ್ಸೆಗೆಂದೇ ಅಭಿವೃದ್ದಿಪಡಿಸಿರುವ ವ್ಯವಸ್ಥೆ. ಅದುವೂ ಜಟಿಲವಾದ ಆಪರೇಷನ್ಗಳು! ಮೊನ್ನೆ ಮಹಾರಾಷ್ಟ್ರದ ಪುಣೆಯ ‘ನೋಬಲ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ’ದಲ್ಲಿ ಸ್ಥಾಪಿಸಿದ್ದಾರೆ. ಅಲ್ಲಿಯ ಮೊದಲ ಪ್ರಯತ್ನವಾಗಿ ಒಬ್ಬ ರೋಗಿಯ ದೊಡ್ಡ ಕರುಳಿನಲ್ಲಿದ್ದ ಕ್ಯಾನ್ಸರ್ನ ಗಂಟನ್ನೂ ಶಸ್ತ್ರಚಿಕಿತ್ಸೆ ಮಾಡಿ ತೆಗೆದಿದ್ದಾರೆ.

ಇದೊಂದು, ಜಟಿಲವಾದ ಶಸ್ತ್ರಚಿಕಿತ್ಸೆಗಳನ್ನು ಮಾಡುವ ಐದು ಕೈಗಳುಳ್ಳ, ಒಂದು 3D HD ಹೆಡ್ಸೆಟ್ ಜೋಡಿಸಿರುವ, ಹಾಗೂ 3D 4K ಗುಣಮಟ್ಟದ ಇಮೇಜಿಂಗ್ ಅನ್ನು ಒದಗಿಸುವ ವಿಷನ್ ಕಾರ್ಟ್ ಸೇರಿದಂತೆ ಮೂರು ರೋಬೊಗಳನ್ನೊಳಗೊಂಡ ಒಂದು ವ್ಯವಸ್ಥೆ. ಎಲ್ಲೋ ಇರುವ ರೋಗಿಯನ್ನು ಇನ್ನೆಲ್ಲಿಂದಲೋ ಪರೀಕ್ಷಿಸಿ, ಶಸ್ತ್ರಚಿಕಿತ್ಸೆ ಮಾಡಬಲ್ಲಂಥ, ಸಾಟಿಯಿಲ್ಲದ ನಿಂಯತ್ರಣ ಹಾಗೂ ನಿಖರತೆಯನ್ನು ದೂರದ ಶಸ್ತ್ರಚಿಕಿತ್ಸಾ ಸಿಬ್ಬಂದಿಗೆ ಒದಗಿಸಬಲ್ಲ ರೋಬೊ ಇದಾಗಿದೆ. ಈ ವಿಧಾನದಲ್ಲಿ ವೈದ್ಯರು ಸ್ವತಃ ಕತ್ತರಿ, ಚಾಕುಗಳನ್ನು ಹಿಡಿಯದೇ ರೋಬೋವಿನ ಕೈಗಳ ಮೂಲಕ ಕಿಲೋಮೀಟುರುಗಟ್ಟಲೆ ದೂರದಿಂದಲೇ ಶಸ್ತ್ರಕ್ರಿಯೆಯನ್ನು ನಡೆಸುತ್ತಾರೆ. 32 ಇಂಚಿನ ಎಲೆಕ್ಟ್ರಾನಿಕ್ ಪರದೆಯೊಂದು ವೈದ್ಯರ ಮುಂದೆ 3D ದೃಶ್ಯಾವಳಿಯನ್ನು ಪ್ರದರ್ಶಿಸುತ್ತಿರುತ್ತದೆ. ಇದಕ್ಕಾಗಿ ತಡೆಯಿಲ್ಲದ 5G ನೆಟ್ವರ್ಕನ್ನು ಬಳಸಲಾಗಿದೆ ಎನ್ನುತ್ತಾರೆ, ಈ ತಂತ್ರಜ್ಞಾನದ ವಿನ್ಯಾಸಕ ಹಾಗೂ ವೈದ್ಯ ಡಾ. ಸುಧೀರ್ ಶ್ರೀವಾತ್ಸವ್. ಜೊತೆಗೆ ವೈದ್ಯರ ಇರುವಿಕೆಯನ್ನು ಖಚಿತಪಡಿಸುವ ಸುರಕ್ಷಾ ಕ್ಯಾಮೆರಾವೂ ಇದೆಯಂತೆ. ಈ ವಿಧಾನವನ್ನೇ ‘ಟೆಲಿಸರ್ಜರಿ’ ಎನ್ನುತ್ತೇವೆ. ಮೊದಲು ಪ್ರಾಣಿಗಳ ಮೇಲೆ ಪ್ರಯೋಗಿಸಿ ಯಶಸ್ವಿಯಾದ ನಂತರವೇ, ಮನುಷ್ಯರ ಮೇಲೆ ಪ್ರಯೋಗಿಸಿ ಸಫಲರಾಗಿದ್ದಾರೆ, ಭಾರತೀಯ ವೈದ್ಯರು.

ಈ ರೋಬೊವನ್ನು ಬಳಸಿ ಮಾಡುವ ಶಸ್ತ್ರಚಿಕಿತ್ಸೆಯಲ್ಲಿ ಓಪನ್ ಸರ್ಜರಿಯ ಹಾಗೆ ದೇಹದ ಭಾಗವನ್ನು ದೊಡ್ಡದಾಗಿ ಕತ್ತರಿಸುವ ಅವಶ್ಯಕತೆಯಿಲ್ಲ. ಸಣ್ಣದಾಗಿ ಸೀಳಿ ತನ್ನ ಸಣ್ಣ ತಂತಿಯಂತಹ ಕೈಗಳಿಂದಲೇ ಅಚ್ಚುಕಟ್ಟಾಗಿ, ಮತ್ತು ನಿಖರವಾಗಿ ಕೆಲಸ ಮಾಡಿ ಮುಗಿಸುತ್ತದೆ, ಈ ರೋಬೊ. ಇದರಿಂದ ರೋಗಿಗಾಗುವ ನೋವು ಹಾಗೂ ಗಾಯದ ಕಲೆಗಳು ಕಡಿಮೆ ಇರುತ್ತದೆ. ರಕ್ತದ ನಷ್ಟವೂ ಕಡಿಮೆಯಿರುತ್ತದೆ. ಆಸ್ಪತ್ರೆಯಲ್ಲಿ ಹೆಚ್ಚುಕಾಲ ಇರುವ ಅಗತ್ಯವೂ ಇರದೆ ಆರಾಮದಾಯಕವಾಗಿರುತ್ತದೆ. ಅಲ್ಲದೇ ಶೀಘ್ರವಾಗಿ ಸಹಜ ಜೀವನಕ್ಕೆ ಮರಳಬಹುದು. ವಿದೇಶಗಳಿಂದ ಆಮದು ಮಾಡಿಕೊಂಡ ಉಳಿದ ರೋಬೊ ವ್ಯವಸ್ಥೆಗಳಿಗಿಂತ ಸ್ವದೇಶಿ ರೋಬೊಗಳು ಅಗ್ಗವೂ ಹೌದು. ತುರ್ತುಪರಿಸ್ಥಿತಿಗಳಲ್ಲಿ ರೋಗಿ ಎಲ್ಲೇ ಇದ್ದರೂ ವೈದ್ಯರು ತಕ್ಷಣದಲ್ಲಿಯೇ ಕಾರ್ಯಪ್ರವೃತ್ತರಾಗಬಹುದು. ಪ್ರಯಾಣದ ಸಮಯವೂ ಉಳಿಯುತ್ತದೆ.

ಇದುವರೆಗೂ ರೋಬೊಗಳನ್ನು ಬಳಸಿ ಮಾಡುವ ಟೆಲಿಸರ್ಜರಿಯಲ್ಲಿ ಯೂರಾಲಜಿ, ಗೈನಕಾಲಜಿ ಮತ್ತಿತ್ತರ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿದ್ದರು. ಆದರೆ ಹೃದಯದ ಶಸ್ತ್ರಚಿಕಿತ್ಸೆಯನ್ನೂ ಹೀಗೆ ರೋಬೊವನ್ನು ಬಳಸಿ ಮಾಡುವ ಪ್ರಯತ್ನಕ್ಕೆ ಇದೇ ಮೊದಲ ಬಾರಿಗೆ ಭಾರತ ಮುಂದಾಗಿದೆ. ಹೃದಯದ ಸರ್ಜರಿಗೂ ಸೂಕ್ತವೆನಿಸುವಂತೆಯೇ ಈ ರೋಬೊಗಳ ಕೈಗಳನ್ನು ನಿರ್ಮಿಸಲಾಗಿದೆಯಂತೆ. ಹಾಗಾಗಿ ಹೃದಯದ ಸಮಸ್ಯೆ ಕಾಣಿಸಿಕೊಂಡ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿದರೆ ರೋಗಿಯನ್ನು ಸುಲಭವಾಗಿ ಉಳಿಸಿಕೊಳ್ಳಬಹುದು. ರೋಗಿಯ ಅಥವಾ ವೈದ್ಯರ ಪ್ರಯಾಣದಲ್ಲಿಯೋ, ಇನ್ನಾವುದೋ ಕಾರಣಗಳಿಂದಲೋ ಆ ‘ಗೋಲ್ಡನ್ ಟೈಂ’ ವ್ಯರ್ಥವಾಗುವುದಿಲ್ಲ. ಒಟ್ಟಾರೆ, ಭವಿಷ್ಯದಲ್ಲಿ ಟೆಲಿಸರ್ಜರಿಯ ಮೂಲಕ ದೇಶದ ಮೂಲೆಮೂಲೆಯಲ್ಲಿರುವ ಪ್ರತಿ ರೋಗಿಗೂ ಈ ಸೌಲಭ್ಯವನ್ನು ಒದಗಿಸುವ ಉದ್ದೇಶ ಈ ವ್ಯವಸ್ಥೆಯದ್ದಾಗಿದೆ. ಭಾರತದಲ್ಲಿ ಮಾತ್ರವಲ್ಲ, ಮುಂದುವರಿದ ರಾಷ್ಟ್ರಗಳಾದ ಅಮೆರಿಕ, ಚೀನಾ, ರಷ್ಯಾ, ಜಪಾನ್ ಸೇರಿದಂತೆ ಎಲ್ಲೆಡೆ ಈ ಪ್ರಯತ್ನ ನಡೆಯುತ್ತಿದ್ದರೂ, ಸದ್ಯ ಮುಂದಿರುವುದು ಮಾತ್ರ ಭಾರತವೇ. ಹೃದಯದ ಟೆಲಿಸರ್ಜರಿಯಲ್ಲಿ ಭಾರತ ಜಗತ್ತಿಗೇ ನಾಯಕನಾಗುವ ಕಾಲ ದೂರ ಉಳಿದಿಲ್ಲ ಎನ್ನಬಹುದು.

ಟೆಲಿಸರ್ಜರಿ ಎನ್ನುವುದು ಭಾರತಕ್ಕೆ ಸುಮಾರು ನಾಲ್ಕು ದಶಕಗಳ ಕನಸು, ಈಗ ಅದು ನನಸಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.