ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Watch: ರಷ್ಯಾ ಮಿಲಿಟರಿ ಶ್ವಾನಗಳಿಗೆ ಪ್ಯಾರಚೂಟ್‌ ತರಬೇತಿ

ಅಕ್ಷರ ಗಾತ್ರ

ರಷ್ಯಾ ಹೊಸ ಪ್ಯಾರಚೂಟ್‌ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ, ಅದು ವಿಮಾನ ಇಳಿಯಲು ಸಾಧ್ಯವಾಗದ ಸ್ಥಳಗಳಿಗೆ ಮಿಲಿಟರಿ ಶ್ವಾನಗಳನ್ನು ಸಾಗಿಸಲು ಸಹಾಯ ಮಾಡುತ್ತದೆ.

ಈ ಸಾಧನಗಳು ಅಂತಿಮ ಹಂತದ ಪರೀಕ್ಷೆಗೆ ಒಳಪಡುತ್ತಿವೆ. ಹೊಸ ರೀತಿಯ ಪ್ಯೂರಚ್ಯೂಟ್‌ಗಳ ತಯಾರಿಕೆಯ ಜವಾಬ್ದಾರಿ ಹೊಂದಿರುವ ವಾಯುಯಾನ ಕಂಪನಿಯಾದ ಟೆಕ್ನೊಡಿನಾಮಿಕಾ, ತಮ್ಮ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಂ ಪುಟಗಳಲ್ಲಿ ಕೆಲವು ಪರೀಕ್ಷೆಗಳು ಮತ್ತು ಸಂದರ್ಶನಗಳ ವಿಡಿಯೊವನ್ನು ಬಿಡುಗಡೆ ಮಾಡಿದೆ.

ಈ ಮೊದಲು ರಷ್ಯಾದಲ್ಲಿ ಈ ಸಾಧನಗಳು ಲಭ್ಯವಿರಲಿಲ್ಲ ಆದರೆ ಈಗ ವಿಮಾನವು ಇಳಿಯಲು ಸಾಧ್ಯವಾಗದ ಸ್ಥಳಗಳಲ್ಲಿ ಶೋಧ ಮತ್ತು ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಲು ಒಬ್ಬ ವ್ಯಕ್ತಿಯು ಅಧಿಕೃತ ಶ್ವಾನದೊಂದಿಗೆ ತೆರಳಲು ಸಹಾಯ ಮಾಡುತ್ತದೆ. ತಮ್ಮ ವ್ಯವಸ್ಥೆಯನ್ನು ಶ್ವಾನದೊಂದಿಗೆ ಒಂದೇ ಸ್ಕೈ ಡೈವ್‌ಗಾಗಿ ಮತ್ತು ಒಟ್ಟಾಗಿ ಬಳಸಬಹುದು ಎಂದು ಅವರ ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಿಡಿಯೊದಲ್ಲಿ, ಮಿಲಿಟರಿ ಸೈನಿಕರು ತಮ್ಮ ತರಬೇತಿ ಪಡೆದ ಶ್ವಾನದೊಂದಿಗೆ ಸಿದ್ಧರಾಗಿರುವುದನ್ನು ಕಾಣಬಹದು. ಪ್ಯಾರಚೂಟ್‌ ಎಂಟ್ರಾಪ್ಮೆಂಟ್ ವಿಭಿನ್ನವಾಗಿದ್ದು, ಪಟ್ಟಿಯ ಪಾಕೆಟ್ ಹೊಂದಿದೆ, ಅಲ್ಲಿ ಮನುಷ್ಯನ ಮುಂಭಾಗ ಶ್ವಾನವನ್ನು ಸಹ ಕೊಂಡೊಯ್ಯಬಹುದು. ಪ್ಯಾರಚೂಟ್‌ ಅನ್ನು ಮಾನವ ಮತ್ತು ಶ್ವಾನಕ್ಕೆ ಅಳವಡಿಸಿದ ನಂತರ, ಅವರು ಸ್ಕೈಡೈವಿಂಗ್‌ಗೆ ಹೊರಟರು. ಅದೃಷ್ಟವಶಾತ್, ಹೊಸ ಉಪಕರಣಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಈ ಪ್ರಕ್ರಿಯೆಯಲ್ಲಿ ಯಾವುದೇ ಪ್ರಾಣಿಗಳಿಗೆ ಹಾನಿಯಾಗಿಲ್ಲ.

'ದಾಖಲೆಗಳಿಂದ ಹಿಡಿದುಪ್ರಾಥಮಿಕ ಪ್ರಯೋಗಗಳವರೆಗೆ ನಾವು ಪ್ಯಾರಚೂಟ್ ಅಭಿವೃದ್ಧಿಯ ಪೂರ್ಣ ಪ್ರಕ್ರಿಯೆಯನ್ನು ನಡೆಸಿದ್ದೇವೆ' ಎಂದು ಮುಖ್ಯ ಪ್ಯಾರಾಚೂಟರ್ ಅಲೆಕ್ಸಿ ಕೊಜಿನ್ ತಿಳಿಸಿರುವುದಾಗಿ ಟೆಕ್ನೊಡಿನಾಮಿಕ ತನ್ನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಿಳಿಸಿದೆ. ಈ ವ್ಯವಸ್ಥೆಯನ್ನು ನಂತರ ರಷ್ಯಾದ ರಕ್ಷಣಾ ಸಚಿವಾಲಯಕ್ಕೆ ವರ್ಗಾಯಿಸಲಾಯಿತು ಎಂದು ಅವರು ಹೇಳಿದರು.

ಈ ಸಾಧನಗಳು ಅಂತಿಮ ಪರೀಕ್ಷೆಗೆ ಒಳಗಾಗುತ್ತಿದ್ದು, 2021 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT