ಸೋಮವಾರ, ಜೂನ್ 14, 2021
20 °C

ಸಾಮಾಜಿಕ ಮಾಧ್ಯಮ ನೀತಿ ಕುರಿತು ಫೇಸ್‌ಬುಕ್‌ ಅನ್ನು ಟೀಕಿಸಿದ ಟಿಮ್ ಕುಕ್

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

DH Reuters

ಬೆಂಗಳೂರು: ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರ ವೈಯಕ್ತಿಕ ಮಾಹಿತಿ ಸಂಗ್ರಹಿಸುವ ಜತೆಗೆ ತಪ್ಪು ಮಾಹಿತಿಯನ್ನು ಪ್ರಸರಿಸುತ್ತಿದೆ ಎಂದು ಫೇಸ್‌ಬುಕ್ ವಿರುದ್ಧ ಆ್ಯಪಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್ ಕುಕ್ ಟೀಕಿಸಿದ್ದಾರೆ. 

ಇದರೊಂದಿಗೆ ಆ್ಯಪಲ್ ಮತ್ತು ಫೇಸ್‌ಬುಕ್ ನಡುವಿನ ಗೌಪ್ಯತಾ ಮತ್ತು ಖಾಸಗಿತನ ಕುರಿತ ನೀತಿ ಮತ್ತೆ ಚರ್ಚೆಗೆ ಬಂದಿದೆ.

ಈ ಹಿಂದೆಯೂ ಆ್ಯಪಲ್ ಸಿಇಒ ಟಿಮ್ ಕುಕ್, ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ರಹಸ್ಯವಾಗಿ ಸಂಗ್ರಹಿಸಿ, ಜಾಹೀರಾತುದಾರರು ಮತ್ತು ಏಜೆನ್ಸಿಗಳಿಗೆ ನೀಡುತ್ತವೆ ಎಂದು ಆರೋಪಿಸಿದ್ದರು. ಅಲ್ಲದೆ, ಆ್ಯಪಲ್ ಆ್ಯಪ್ ಸ್ಟೋರ್ ಕಠಿಣ ಖಾಸಗಿತನ ನೀತಿಯನ್ನು ಫೇಸ್‌ಬುಕ್ ಟೀಕಿಸಿತ್ತು.

ಪ್ರಸ್ತುತ ಸಾಮಾಜಿಕ ತಾಣಗಳಲ್ಲಿ ಬಳಕೆದಾರರ ಪ್ರತಿ ವಿವರಗಳನ್ನು ಕೆಲವು ಕಂಪನಿಗಳು ಸಂಗ್ರಹಿಸುತ್ತಿವೆ, ಅದಕ್ಕೆ ಪೂರಕವಾಗಿ ಆಲ್ಗರಿಥಂ ಕೂಡ ವಿನ್ಯಾಸ ಮಾಡಿವೆ. ಅವು ಗ್ರಾಹಕರ ಬ್ರೌಸಿಂಗ್ ವಿವರವನ್ನು ಸಂಗ್ರಹಿಸಿ, ಅದಕ್ಕೆ ಪೂರಕವಾಗಿ ಜಾಹೀರಾತು ತೋರಿಸುತ್ತವೆ ಎಂದು ಟಿಮ್ ಕುಕ್ ದೂರಿದ್ದಾರೆ. 

ಫೇಸ್‌ಬುಕ್ ಹೆಸರು ಹೇಳದೆ ಪರೋಕ್ಷವಾಗಿ ಟೀಕಿಸಿರುವ ಟಿಮ್ ಕುಕ್, ಜನರಿಗೆ ತಪ್ಪು ಮಾಹಿತಿ ಪ್ರಸರಿಸುವ ಮೂಲಕ ಅವರ ಮನಸ್ಸನ್ನು ಹಾಳುಮಾಡಲಾಗುತ್ತಿದೆ, ಕೋವಿಡ್ ಲಸಿಕೆ ಕುರಿತು ತಪ್ಪು ಕಲ್ಪನೆ, ದಂಗೆಕೋರರ ಗುಂಪು ಸೇರಿಕೊಳ್ಳಲು ಪ್ರಚೋದನೆಯನ್ನು ಕೆಲವು ಸಾಮಾಜಿಕ  ತಾಣಗಳು ಮಾಡುತ್ತಿವೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು