ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗ್ನಲ್ ಆ್ಯಪ್ ಚೀನಾದಲ್ಲಿ ಕಾರ್ಯಾಚರಣೆ ಸ್ಥಗಿತ

Last Updated 16 ಮಾರ್ಚ್ 2021, 11:17 IST
ಅಕ್ಷರ ಗಾತ್ರ

ಶೆಂಝೆನ್: ಎನ್‌ಕ್ರಿಪ್ಷನ್ ಮೆಸೇಜಿಂಗ್ ಆ್ಯಪ್ ಸಿಗ್ನಲ್ ಚೀನಾದಲ್ಲಿ ಕಾರ್ಯಾಚರಣೆ ನಿಲ್ಲಿಸಿದ್ದು, ಮಂಗಳವಾರದಿಂದ ವಿಪಿಎನ್ ನೆಟ್‌ವರ್ಕ್ ಮೂಲಕ ಮಾತ್ರ ಕೆಲಸ ಮಾಡಲಿದೆ.

ಚೀನಾದ ಸೈಬರ್ ಅಧಿಕಾರಿಗಳು ಇತ್ತೀಚಿನ ವರ್ಷಗಳಲ್ಲಿ ವಿವಿಧ ನಿಯಂತ್ರಣ ಕ್ರಮಗಳನ್ನು ಬಿಗಿಗೊಳಿಸಿದ್ದು, ವಿವಿಧ ಆ್ಯಪ್, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಿದ್ದಾರೆ.

ಸಿಗ್ನಲ್ ಆ್ಯಪ್ ಜತೆಗೆ ಚೀನಾದಲ್ಲಿ ಸಿಗ್ನಲ್ ವೆಬ್‌ಸೈಟ್ ಕೂಡ ಮಂಗಳವಾರ ಬೆಳಗ್ಗಿನಿಂದಲೇ ಬಳಕೆದಾರರಿಗೆ ಲಭ್ಯವಾಗುತ್ತಿಲ್ಲ.

ಆದರೆ ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ಸಿಗ್ನಲ್ ಆ್ಯಪ್ ಲಭ್ಯವಾಗುತ್ತಿತ್ತು. ಹಾಂಗ್ ಕಾಂಗ್‌ನಲ್ಲಿ ಸಿಗ್ನಲ್ ಆ್ಯಪ್ ಮತ್ತು ವೆಬ್‌ಸೈಟ್ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ.

ಚೀನಾದಲ್ಲಿ ಕಾರ್ಯಾಚರಣೆ ಸ್ಥಗಿತ ಕುರಿತಂತೆ ಸಿಗ್ನಲ್ ಆ್ಯಪ್ ಆಗಲೀ ಅಥವಾ ಚೀನಾದ ಸೈಬರ್‌ಸ್ಪೇಸ್ ಆಗಲೀ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ, ಜತೆಗೆ ಆ್ಯಪ್ ನಿಲುಗಡೆ ಕುರಿತು ಹೇಳಿಕೆ ಕೂಡ ಪ್ರಕಟಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT