ಮೋದಿ ಅಧಿಕಾರವಧಿಯಲ್ಲಿ ಭಾರತ ವಿಶ್ವಬ್ಯಾಂಕ್‍ನಿಂದ ಸಾಲ ಪಡೆದಿಲ್ಲ ಎಂಬುದು ಸುಳ್ಳು!

7

ಮೋದಿ ಅಧಿಕಾರವಧಿಯಲ್ಲಿ ಭಾರತ ವಿಶ್ವಬ್ಯಾಂಕ್‍ನಿಂದ ಸಾಲ ಪಡೆದಿಲ್ಲ ಎಂಬುದು ಸುಳ್ಳು!

Published:
Updated:

ಬೆಂಗಳೂರು: ಭಾರತಕ್ಕೆ ಸ್ವಾತಂತ್ರ ಸಿಕ್ಕಿ 70 ವರ್ಷಗಳು ಕಳೆದಿವೆ. ಇದರಲ್ಲಿ  2015 - 2018ರ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಮಾತ್ರ ಭಾರತ ಸರ್ಕಾರ ವಿಶ್ವ ಬ್ಯಾಂಕ್‍ನಿಂದ ಸಾಲ ಪಡೆದಿಲ್ಲ ಎಂಬ ವಾಟ್ಸ್ಆ್ಯಪ್ ಸಂದೇಶವೊಂದು ಹರಿದಾಡುತ್ತಿದೆ. ಈ ಸಂದೇಶದ ಸತ್ಯ ಸಂಗತಿ ಏನು ಎಂಬುದನ್ನು ದಿ ಲಾಜಿಕಲ್ ಇಂಡಿಯನ್ ವರದಿ ಮಾಡಿದೆ.

ಸಂದೇಶದಲ್ಲಿ ಹೇಳುತ್ತಿರುವುದು ಏನು? 
ಹಿಂದೂಸ್ತಾನದ 70 ವರ್ಷದ ಇತಿಹಾಸದಲ್ಲಿ,  3 ವರ್ಷ ಮಾತ್ರ ಹಿಂದೂಸ್ತಾನ ವಿಶ್ವ ಬ್ಯಾಂಕ್‍ನಿಂದ ಒಂದೇ ಒಂದು ರೂಪಾಯಿ ಸಾಲ ಪಡೆದಿಲ್ಲ. ಅದು ಯಾವ ವರ್ಷ ಎಂದರೆ 2015-16, 2016-17, 2017-18. ಈ ಸಂದೇಶದ ಬಗ್ಗೆ ದಿ ಕ್ವಿಂಟ್ ಕೂಡಾ ವರದಿ ಮಾಡಿತ್ತು. 

ಫೇಸ್‍ಬುಕ್ ,ಟ್ವಿಟರ್ ಮತ್ತು ವಾಟ್ಸ್ಆ್ಯಪ್‍ನಲ್ಲಿ ಇದೇ ರೀತಿಯ ಸಂದೇಶ 2017, 2018ರಲ್ಲಿಯೂ ಹರಿದಾಡಿತ್ತು. 2018ರಲ್ಲಿ ಈ ಸಂದೇಶದ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿತ್ತು.

ಕೇಂದ್ರ ರೈಲ್ವೆ ಸಚಿವ ಪೀಯೂಷ್ ಗೋಯಲ್ ಕೂಡಾ ಫಾಲೋ ಮಾಡುತ್ತಿರುವ  @Sagrika4india ಎಂಬ ಟ್ವಿಟರ್ ಹ್ಯಾಂಡಲ್‍ನಲ್ಲಿ ಇದೇ ಸಂದೇಶ ಶೇರ್ ಆಗಿದ್ದು ಇದನ್ನು 1,277  ಮಂದಿ ಲೈಕ್ ಮಾಡಿದ್ದಾರೆ ಮತ್ತು  450 ಹೆಚ್ಚು ಬಾರಿ ರೀಟ್ವೀಟ್ ಆಗಿದೆ.

ಸುತಿದರ್  ಛಬ್ರಾ ಎಂಬವರ ಫೇಸ್‌ಬುಕ್ ಪುಟದಲ್ಲಿ ಮೇ 31,  2018ರಂದು ಇದೇ ಸಂದೇಶ ಶೇರ್ ಆಗಿದ್ದು ಅದು ಇಲ್ಲಿಯವರೆಗೆ 89,000 ಬಾರಿ ಶೇರ್ ಆಗಿದೆ.

ಸತ್ಯ ಸಂಗತಿ ಏನು? 
ಆ ಬಗ್ಗೆ ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ಮಾಡಿದಾಗ ತಿಳಿದು ಬಂದ ವಿಷಯ ಹೀಗಿದೆ.
ವಿಶ್ವ ಬ್ಯಾಂಕ್‍ನ ದಾಖಲೆಗಳನ್ನು ಪರಿಶೀಲಿಸಿದಾಗ 1/1/2015 ಮತ್ತು  31/12/2018ರ ಅವಧಿಯಲ್ಲಿ 66 ಯೋಜನೆಗಳಿಗಾಗಿ ಇಲ್ಲಿಂದ  ಧನ ಸಹಾಯ ಪಡೆಯಲಾಗಿದೆ.  2015 ಡಿಸೆಂಬರ್ 15ರಂದು ಸ್ವಚ್ಛ ಭಾರತ್ ಮಿಷನ್ ಸಪೋರ್ಟ್ ಆಪರೇಷನ್‍ಗಾಗಿ 1.5 ಬಿಲಿಯನ್ ಅಮೆರಿಕನ್ ಡಾಲರ್ (₹10,600 ಕೋಟಿ) ಸಾಲ ಪಡೆಯಲಾಗಿದೆ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.

 


01/01/2015- 14/01/2019ರ ವರೆಗಿನ ಅವಧಿಯಲ್ಲಿ ಸಾಲದ ಬಗ್ಗೆ ವಿಶ್ವ ಬ್ಯಾಂಕ್  ಮಾಹಿತಿ

2016ರಲ್ಲಿ ವಿಶ್ವ ಬ್ಯಾಂಕ್ ಪ್ರಕಟಿಸಿದ ವರದಿ ಪ್ರಕಾರ ಸ್ವತಂತ್ರ ರಾಷ್ಟ್ರಗಳ ಪೈಕಿ ಅತೀ ಹೆಚ್ಚು ಸಾಲ ಪಡೆದ ದೇಶ ಭಾರತ ಆಗಿದೆ.  1945- 2015ರ ಕಾಲಾವಧಿಯಲ್ಲಿ ವಿಶ್ವ ಬ್ಯಾಂಕ್ ಭಾರತಕ್ಕೆ 102.1 ಬಿಲಿಯನ್ ಅಮೆರಿಕನ್ ಡಾಲರ್ ಸಾಲ ನೀಡಿದೆ. ಕಳೆದ ಮೂರು ವರ್ಷಗಳಲ್ಲಿ ಸಾಲದ ಮೊತ್ತ ಅಧಿಕ ಆಗಿದೆ.

ಇದನ್ನೂ ಓದಿ:  ಮೋದಿ ಅಧಿಕಾರವಧಿಯಲ್ಲಿ ಸರ್ಕಾರದ ಸಾಲದ ಹೊರೆ ₹82,03,253 ಕೋಟಿ!

ಬರಹ ಇಷ್ಟವಾಯಿತೆ?

 • 62

  Happy
 • 5

  Amused
 • 4

  Sad
 • 7

  Frustrated
 • 20

  Angry

Comments:

0 comments

Write the first review for this !