ಶನಿವಾರ, ಜೂನ್ 25, 2022
27 °C

ಕರುಣಾನಿಧಿ ಜನ್ಮದಿನದಂದು #HBDFatherofcorruption ಟ್ರೆಂಡ್‌ ಆಗುವುದೇಕೆ?

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಭಾರತದಲ್ಲಿ #HBDFatherofcorruption ( ಭ್ರಷ್ಟಾಚಾರದ ಜನಕನಿಗೆ ಹುಟ್ಟುಹಬ್ಬದ ಶುಭಾಶಯಗಳು)  ಎಂಬ ಹ್ಯಾಶ್‌ಟ್ಯಾಗ್ ಎರಡು ದಿನಗಳಿಂದಲೂ ಟ್ರೆಂಡಿಂಗ್‌ನಲ್ಲಿದೆ. ಗಮನಿಸಬೇಕಾದ ಅಂಶವೆಂದರೆ,  ಈ ಹ್ಯಾಷ್‌ ಟ್ಯಾಗ್‌ನ ಅಡಿಯಲ್ಲಿ ‌ಪೋಸ್ಟ್‌ ಆಗಿರುವ  ಎಲ್ಲಾ ಟ್ವೀಟ್‌ಗಳು ತಮಿಳುನಾಡಿನ ಮಾಜಿ  ಮುಖ್ಯಮಂತ್ರಿ, ಕಲೈಜ್ಞರ್‌, ದಿವಂಗತ ಎಂ. ಕರುಣಾನಿಧಿ ಅವರನ್ನು ಕುರಿತು ಮಾತನಾಡುತ್ತಿವೆ. 

ಇದನ್ನೂ ಓದಿ: ಜಯಲಲಿತಾ- ಕರುಣಾನಿಧಿ 'ಸೇಡಿನ ರಾಜಕೀಯ'ದ ಪುಟ ತಿರುವಿದಾಗ...

ತಮಿಳುನಾಡಿನ ಪ್ರಖ್ಯಾತ ರಾಜಕಾರಣಗಳಲ್ಲಿ ಒಬ್ಬರಾದ ಕರುಣಾನಿಧಿ ಅವರು ಸುಮಾರು ಎರಡು ದಶಕಗಳ ಕಾಲ ಅಲ್ಲಿ ಮುಖ್ಯಮಂತ್ರಿಯಾಗಿದ್ದವರು.

ಇದನ್ನೂ ಓದಿ: ಸ್ಟಾಲಿನ್‍ ಅಪ್ಪನ ನೆರಳಿನ ಶ್ರೀರಕ್ಷೆ ಮತ್ತು ಸವಾಲು

ಜೂನ್‌ 3 ಕರುಣಾನಿಧಿ ಅವರ ಜನ್ಮದಿನ. ಅವರ ಹುಟ್ಟುಹಬ್ಬದ ದಿನ, ಪ್ರತಿಬಾರಿಯೂ  #HBDFatherofcorruption ಟ್ರೆಂಡ್‌ ಆಗುತ್ತಿದೆ. ಕಳೆದಬಾರಿಯಂತೆ ಈ ಬಾರಿಯೂ ಟ್ರೆಂಡ್‌ ಆಗಿದೆ. 

ಇದನ್ನೂ ಓದಿ: ಜೈಲುಪಾಲಾದವರು, ಸೆರೆಮನೆ ತಪ್ಪಿಸಿಕೊಂಡವರು...

#HBDFatherofcorruption ಅಡಿಯಲ್ಲಿ ಪೋಸ್ಟ್‌ ಆದ ಟ್ವೀಟ್‌ಗಳಲ್ಲಿ ಕುರುಣಾನಿಧಿ ಅವರು ಮುಖ್ಯಮಂತ್ರಿ ಆಗಿದ್ದ ಕಾಲದ ಭ್ರಷ್ಟಾಚಾರ ಪ್ರಕರಣಗಳ ಮಾಧ್ಯಮ ವರದಿ, ಕುಟುಂಬ ರಾಜಕಾರಣ, 2ಜಿ ತರಂಗಾಂತರ ಹಗರಣಗಳ ಕುರಿತು ಉಲ್ಲೇಖಗಳಿವೆ. 

ಗೂಗಲ್‌ನಲ್ಲಿ ಹುಡುಕಾಡಿದರೆ ಕುರುಣಾನಿಧಿ ಹೆಸರು ‌

ತಮಿಳುನಾಡಿನ ಭ್ರಷ್ಟಾಚಾರದ ಜನಕ ಯಾರು ಎಂದು (Who is the Father of Corruption in Tamilnadu?)  ಯಾರಾದರೂ ಗೂಗಲ್‌ ಸರ್ಚ್‌ ಎಂಜಿನ್‌ನಲ್ಲಿ ಹುಡುಕಿದರೆ. ಅಲ್ಲಿ ಮೊದಲಿಗೆ ಕರುಣಾನಿಧಿ ಅವರ ವಿಕಿಪೀಡಿಯಾ ತೆರೆದುಕೊಳ್ಳುತ್ತದೆ. ನಂತರದ ಹತ್ತು ವೆಬ್‌ಪುಟಗಳು ಕರುಣಾನಿಧಿ ಅವರಿಗೆ ಸಂಬಂಧಿಸಿದ್ದಾಗಿರುತ್ತವೆ. 

ಈ ವೆಬ್‌ಸರ್ಚ್‌ನ ಫಲಿತಾಂಶದ ಸ್ಕ್ರೀನ್‌ಶಾಟ್‌ ತೆಗೆದು ಹಲವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 

#HBDFatherOfModernTamilnadu ಮೂಲಕ ತಿರುಗೇಟು  

‌#HBDFatherofcorruption ಹ್ಯಾಷ್‌ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆದಾಗೆಲ್ಲ #HBDFatherOfModernTamilnadu ಹ್ಯಾಷ್‌ ಟ್ಯಾಗ್‌ ಕೂಡ ಟ್ರೆಂಡ್‌ ಆಗುತ್ತದೆ.  ಕರುಣಾನಿಧಿ ಅವರ ಅಧಿಕಾರವಧಿಯಲ್ಲಿ ಕೈಗೊಳ್ಳಲಾದ ಪ್ರಮುಖ ನಿರ್ಧಾರಗಳು, ಅಭಿವೃದ್ಧಿ ಕಾರ್ಯಗಳನ್ನು ಈ ಪೋಸ್ಟ್‌ಗಳಲ್ಲಿ ಸ್ಮರಿಸಲಾಗುತ್ತದೆ. ಈ ಮೂಲಕ ಡಿಎಂಕೆ (ಡ್ರಾವಿಡ ಮುನ್ನೇತ್ರ ಕಳಗಂ)  ಬೆಂಬಲಿಗರು #HBDFatherofcorruption  ಹ್ಯಾಷ್‌ಟ್ಯಾಗ್‌ನ ಪೋಸ್ಟರ್‌ ಗಳಿಗೆ ತಿರುಗೇಟು ನೀಡುತ್ತಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು