ಮಂಗಳವಾರ, ಮಾರ್ಚ್ 21, 2023
20 °C
ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಫಾಲೋವರ್ಸ್ ಸಂಖ್ಯೆ 10,000ಕ್ಕೆ ಇಳಿಕೆ!

ಫೇಸ್‌ಬುಕ್ ತಾಂತ್ರಿಕ ದೋಷ: ಫಾಲೋವರ್ಸ್ ಸಂಖ್ಯೆ ಏಕಾಏಕಿ ಕುಸಿತ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮೆಟಾ ಒಡೆತನದ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಉಂಟಾಗಿದ್ದ ತಂತ್ರಿಕ ದೋಷದಿಂದಾಗಿ ಹಲವು ಮಂದಿ ಬಳಕೆದಾರರ ಫಾಲೋವರ್ಸ್ ಸಂಖ್ಯೆಯಲ್ಲಿ ಏಕಾಏಕಿ ಕುಸಿತ ದಾಖಲಾಗಿದೆ.

ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರಿಗೆ ಕೋಟಿಗೂ ಮಿಕ್ಕಿ ಫಾಲೋವರ್ಸ್ ಇದ್ದರು. ಅವರ ಫಾಲೋವರ್ಸ್ ಸಂಖ್ಯೆಯಲ್ಲೂ ಕುಸಿತ ದಾಖಲಾಗಿದ್ದು, 10,000ಕ್ಕಿಂತ ಕೆಳಗೆ ಬಂದಿದೆ.

ಫೇಸ್‌ಬುಕ್ ಬಗ್ ಕುರಿತು ಬಳಕೆದಾರರು ಪೋಸ್ಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶ ಮೂಲದ ಲೇಖಕಿ ತಸ್ಲೀಮಾ ನಸ್ರೀನ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, 9,00,000 ದಷ್ಟು ಇದ್ದ ನನ್ನ ಫೇಸ್‌ಬುಕ್ ಫಾಲೋವರ್ಸ್ ಸಂಖ್ಯೆ ಒಮ್ಮೆಗೆ 9,000ಕ್ಕೆ ಇಳಿಕೆಯಾಗಿದೆ ಎಂದಿದ್ದಾರೆ.

ನಂತರದಲ್ಲಿ ಫೇಸ್‌ಬುಕ್ ಸಮಸ್ಯೆಯನ್ನು ಸರಿ‍ಪಡಿಸಿದ್ದು, ಕಳೆದುಹೋಗಿದ್ದ ಫಾಲೋವರ್ಸ್ ಸಂಖ್ಯೆ ಮತ್ತೆ ಕಾಣಿಸಿಕೊಂಡಿದೆ ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು