ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುಳ್ಳು ಸುದ್ದಿಗಳನ್ನು ಹರಡುವ 9 ಯುಟ್ಯೂಬ್ ಚಾನಲ್‌ಗಳ ಪಟ್ಟಿ ಬಿಡುಗಡೆ

ಪಿಐಬಿ ಫ್ಯಾಕ್ಟ್ ಚೆಕ್ ವಿಭಾಗ x ತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ
Published 2 ಡಿಸೆಂಬರ್ 2023, 6:14 IST
Last Updated 2 ಡಿಸೆಂಬರ್ 2023, 6:14 IST
ಅಕ್ಷರ ಗಾತ್ರ

ಬೆಂಗಳೂರು: ಪ್ರೆಸ್ ಇನ್‌ಫಾರ್ಮೆಶನ್ ಬ್ಯುರೊದ (PIB) ಫ್ಯಾಕ್ಟ್ ಚೆಕ್ ವಿಭಾಗ, ಸುಳ್ಳು ಸುದ್ದಿಗಳನ್ನು ಹರಡುವ 9 ಯುಟ್ಯೂಬ್ ಚಾನಲ್‌ಗಳ ಹೆಸರುಗಳನ್ನು ಬಿಡುಗಡೆ ಮಾಡಿದೆ.

ಈ ಕುರಿತು ಪಿಐಬಿ ಫ್ಯಾಕ್ಟ್ ಚೆಕ್ ವಿಭಾಗ x ತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.

ಆ ಪ್ರಕಾರ Sarkari Yojana Official, Sansani Live, Bajrang Education, Aapke Guruji, BJ News, Ab Bolega Bharat, GVT News, Daily Study, Bharat Ekta News ಎಂಬ 9 ಯುಟ್ಯೂಬ್ ಚಾನಲ್‌ಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ ಎಂದು ದೂರಿದೆ.

ಈ ಎಲ್ಲ 9 ಯುಟ್ಯೂಬ್ ಚಾನಲ್‌ಗಳು 83 ಲಕ್ಷಕ್ಕೂ ಅಧಿಕ ಚಂದಾದಾರರನ್ನು ಹೊಂದಿದ್ದವು ಎಂದು ತಿಳಿಸಿದೆ. ಈ ವರದಿ ಆಧರಿಸಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಚಾನಲ್‌ಗಳನ್ನು ಸ್ಥಗಿತಗೊಳಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT