2020ರ ದ್ವಿತೀಯಾರ್ಧದಲ್ಲಿ ನಡೆಸಲಾದ ಅಧ್ಯಯನವನ್ನು ಬಳಸಿಕೊಂಡು ಜಾಹೀರಾತು ಏಜೆನ್ಸಿ ಐಪಿಜಿ ಮೀಡಿಯಾಬ್ರ್ಯಾಂಡ್ಸ್, ಮೀಡಿಯಾ ರೆಸ್ಪಾನ್ಸಿಬಿಲಿಟಿ ಇಂಡೆಕ್ಸ್ (ಮಾಧ್ಯಮ ಜವಾಬ್ದಾರಿ ಸೂಚ್ಯಂಕ) ಬಿಡುಗಡೆ ಮಾಡಿದೆ. ಈ ಪೈಕಿ, ಮಕ್ಕಳ ಹಕ್ಕುಗಳ ರಕ್ಷಣೆ, ಹೆಚ್ಚು ಸ್ಪಷ್ಟ, ನಿಖರ ಮತ್ತು ಪಾರದರ್ಶಕ ಸುದ್ದಿ ಪ್ರಸಾರ, ಸುಳ್ಳು ಸುದ್ದಿ ತಡೆ ಹೀಗೆ 10 ವಿವಿಧ ಅಂಶಗಳನ್ನು ಬಳಸಿಕೊಂಡು ಪ್ರಮುಖ ಸಾಮಾಜಿಕ ಜಾಲತಾಣಗಳ ಅಧ್ಯಯನ ನಡೆಸಲಾಗಿದೆ.