ಮಂಗಳವಾರ, ಆಗಸ್ಟ್ 3, 2021
28 °C

ಟಿಕ್‍ಟಾಕ್ ಬಳಸುತ್ತೀರೇ? ಮಕ್ಕಳು, ನಿಮ್ಮ ಭದ್ರತೆಗೆ ಹತ್ತು ಸೂತ್ರ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಟಿಕ್‌ಟಾಕ್‌ ವಿಡಿಯೊ ಮೇಕಿಂಗ್‌ ಆ್ಯಪ್‌

ಬೆಂಗಳೂರು: ಯುವ ಪೀಳಿಗೆ ಬಹುಬೇಗ ತಂತ್ರಜ್ಞಾನ ಬದಲಾವಣೆ ಮತ್ತು ಅಳವಡಿಕೆಯಲ್ಲಿ ಪ್ರವೀಣರಾಗುತ್ತಿದ್ದಾರೆ. ಐಎಎಂಎಐ ವರದಿ ಪ್ರಕಾರ 16 ರಿಂದ 29ರ ವಯೋಮಾನದ ಬಹುತೇಕ ಜನರು ಹೆಚ್ಚು ಇಂಟರ್‌ನೆಟ್‌ ಬಳಸುತ್ತಿದ್ದಾರೆ.

1990ರ ನಂತರ ಜನಿಸಿರುವವರು ( Gen Zs) ಹಾಗೂ ಮಿಲೇನಿಯಲ್ಸ್‌ಗಳ ( Millennials) ಪೈಕಿ ಟಿಕ್‌ಟಾಕ್ ಅತ್ಯಂತ ಜನಪ್ರಿಯವಾಗುತ್ತಿದೆ. ಸೃಜನಾತ್ಮಕ ಲಭ್ಯತೆ ಮತ್ತು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಪರಿಕಲ್ಪನೆಯಿಂದಾಗಿ ಟಿಕ್‌ಟಾಕ್ ಭಾರತದಲ್ಲಿ ಲಕ್ಷಾಂತರ ಜನರ ಗಮನ ಸೆಳೆದಿದೆ. ಯುವ ಪ್ರೇಕ್ಷಕರನ್ನು ಸೆಳೆಯುವ ನಿಟ್ಟಿನಲ್ಲಿ ಟಿಕ್‌ಟಾಕ್‌, ಮನೋರಂಜನೆಯ ಜತೆಗೆ ಸಮಗ್ರ ಮತ್ತು ಅತ್ಯಂತ ಸುರಕ್ಷಿತ ವೈಶಿಷ್ಟ್ಯತೆಗಳನ್ನು ಸಜ್ಜುಗೊಳಿಸಿದೆ.

ಟಿಕ್‌ಟಾಕ್‌ ಬಳಕೆ ಮಾಡುವ ವೇಳೆ ಪಾಲಕರು, ಮಕ್ಕಳ ಸುರಕ್ಷತೆಗೆ ಹತ್ತು ಸೂತ್ರಗಳು ಇಲ್ಲಿವೆ:

1. ಏಜ್ ಗೇಟ್: ಇದು 13 ಮತ್ತು ಅದಕ್ಕಿಂತ ಹೆಚ್ಚು ವಯಸಿನ ಬಳಕೆದಾರರಿಗೆ ಮಾತ್ರ ಅಕೌಂಟ್ ತೆರೆಯಲು ಅನುಮತಿ ನೀಡುತ್ತದೆ. ಪ್ಲಾಟ್‌ಫಾರ್ಮ್ ಅನ್ನು ಚಿಕ್ಕ ಮಕ್ಕಳು ಬಳಕೆ ಮಾಡುವುದನ್ನು ತಡೆಯುತ್ತದೆ.

2. ಸ್ಕ್ರೀನ್ ಟೈಮ್ ಮ್ಯಾನೇಜ್‌ಮೆಂಟ್: ಇದು ಬಳಕೆದಾರರು ಅಪ್ಲಿಕೇಷನ್ ಮೇಲೆ 40, 60, 90, 120 ನಿಮಿಷಗಳು ಹೀಗೆ ಎಷ್ಟು ನಿಮಿಷ ಬೇಕೋ ಅಷ್ಟು ನಿಮಿಷವನ್ನು ಮಿತಿಗೊಳಿಸುತ್ತದೆ. ಒಂದು ವೇಳೆ ನಿಗದಿಪಡಿಸಿದ ಅಥವಾ ಸೆಟ್ ಮಾಡಿದ ಸಮಯಕ್ಕಿಂತ ಹೆಚ್ಚು ಸಮಯ ಬಳಕೆ ಮಾಡಲು ಬಯಸಿದರೆ ಬಳಕೆದಾರ ಮತ್ತೊಮ್ಮೆ ಪಾಸ್‌ವರ್ಡ್‌ ನೀಡಬೇಕಾಗುತ್ತದೆ.

3. ರೆಸ್ಟ್ರಿಕ್ಟೆಡ್ ಮೋಡ್: ಮಶಿನ್ ಲರ್ನಿಂಗ್ ಆದ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಚಿಕ್ಕ ಮಕ್ಕಳಿಗೆ ಸೂಕ್ತವಲ್ಲದ ಕಂಟೆಂಟ್‌ಗಳನ್ನು ಫಿಲ್ಟರ್ ಮಾಡುತ್ತದೆ. ಇದು ಸೆಟ್ಟಿಂಗ್‌ ಆಯ್ಕೆಯಾಗಿದ್ದು, ಬಳಕೆದಾರರು ತಾವು ನೋಡುವ ಮತ್ತು ಸ್ವೀಕರಿಸುವ ಕಂಟೆಂಟ್‌ಗಳನ್ನು ನಿಯಂತ್ರಣ ಮಾಡಿಕೊಳ್ಳಬಹುದಾಗಿದೆ. ಒಮ್ಮೆ ಈ ಆಯ್ಕೆಯನ್ನು ಆಯ್ಕೆ ಮಾಡಿಕೊಂಡಲ್ಲಿ ಅದನ್ನು ಬದಲಿಸಲು ಮತ್ತೆ ಪಾಸ್‌ವರ್ಡ್ ನಮೂದಿಸಬೇಕು.

4. ಇನ್-ಆ್ಯಪ್‌ ಸೂಸೈಡ್ ಪ್ರಿವೆನ್ಷನ್: ಇದು ಬಳಕೆದಾರರಿಗೆ ಇನ್-ಆ್ಯಪ್ ಸೂಸೈಡ್ ರಿಸೋರ್ಸ್ ಪೇಜ್‌ಗೆ ರೀಡೈರೆಕ್ಟ್ ಮಾಡುತ್ತದೆ. ಇಲ್ಲಿ ಬಳಕೆದಾರರಿಗೆ ಟಿಪ್ಸ್ ಮತ್ತು ಹಾಟ್‌ಲೈನ್ ಬಗ್ಗೆ ಮಾಹಿತಿ ನೀಡುತ್ತಿದೆ.

5. ಕಮೆಂಟ್ ಫಿಲ್ಟರ್ ವೈಶಿಷ್ಟ್ಯತೆ: ಇದು ಇಂಗ್ಲಿಷ್‌ ಮತ್ತು ಬಳಕೆದಾರರ ಸ್ಥಳೀಯ ಭಾಷೆಯಲ್ಲಿನ ಕಾಮೆಂಟ್‌ಗಳಿಂದ 30 ಕೀವರ್ಡ್‌ಗಳನ್ನು ಸ್ವಯಂ-ವ್ಯಾಖ್ಯಾನಿಸಲು ಅವಕಾಶ ಕಲ್ಪಿಸುತ್ತದೆ. ಈ ಪಟ್ಟಿಯನ್ನು ಬಳಕೆದಾರ ಯಾವುದೇ ಸಂದರ್ಭದಲ್ಲಿ ಬೇಕಾದರೂ ಬದಲಾಯಿಸಿಕೊಳ್ಳಬಹುದು.

6. ಫ್ಯಾಮಿಲಿ ಪೇರಿಂಗ್: ಫ್ಯಾಮಿಲಿ ಪೇರಿಂಗ್ ವೈಶಿಷ್ಟ್ಯತೆಯು ಡಿಜಿಟಲ್ ವೆಲ್ ಬೀಯಿಂಗ್ ಮೋಡ್‌ನ ಭಾಗವಾಗಿದೆ. ಇದು ಪೋಷಕರು ಟಿಕ್‌ಟಾಕ್‌ನಲ್ಲಿ ತಮ್ಮ ಮಕ್ಕಳನ್ನು ಮಿತಗೊಳಿಸುವ ನಿಟ್ಟಿನಲ್ಲಿ ಸ್ಕ್ರೀನ್-ಟೈಂ ಅನ್ನು ನಿಗದಿಪಡಿಸಬಹುದು. ಇದರಿಂದ ಸೀಮಿತ ಮೋಡ್ ಹಾಗೂ ನೇರವಾಗಿ ಮೆಸೇಜ್‌ಗಳನ್ನು ನೋಡುವುದನ್ನು ನಿಯಂತ್ರಿಸಬಹುದು. ಈ ಮೂಲಕ ಪಾಲಕರು ತಮ್ಮ ಮಕ್ಕಳು ಟಿಕ್‌ಟಾಕ್ ಚಟುವಟಿಕೆಗಳ ಮೇಲೆ ನಿಗಾ ಇಡಬಹುದು ಮತ್ತು ನಿಯಂತ್ರಣ ಸಾಧಿಸಬಹುದಾಗಿದೆ.

7. ಇನ್-ಆ್ಯಪ್ ರಿಪೋರ್ಟಿಂಗ್: ಇನ್-ಆ್ಯಪ್ ರಿಪೋರ್ಟಿಂಗ್ ವೈಶಿಷ್ಟ್ಯತೆಯ ನೆರವಿನಿಂದ ಬಳಕೆದಾರರು ಸಮುದಾಯ ಮಾರ್ಗಸೂಚಿಗಳಿಗೆ ವಿರುದ್ಧವಾದ ವಿಡಿಯೊಗಳಿದ್ದರೆ ಆ ಬಗ್ಗೆ ದೂರು ನೀಡಬಹುದು. ಬಳಕೆದಾರರು ಇಂತಹ ವಿಡಿಯೊಗಳ ವಿರುದ್ಧ ತಮ್ಮ ಧ್ವನಿ ಎತ್ತಲು ಮತ್ತು ಟಿಕ್‌ಟಾಕ್‌ ಅನ್ನು ಸುರಕ್ಷಿತ ಹಾಗೂ ಧನಾತ್ಮಕವಾಗಿ ನಡೆಯುವಂತೆ ಮಾಡಲು ಈ ವೈಶಿಷ್ಟ್ಯತೆಯು ಅವಕಾಶ ಕಲ್ಪಿಸುತ್ತದೆ. ಜಾಗತಿಕ ಮಟ್ಟದಲ್ಲಿ ಸಾಂಕ್ರಾಮಿಕ ಹರಡಿರುವ ಈ ಸಂದರ್ಭದಲ್ಲಿ ಟಿಕ್‌ಟಾಕ್‌ ತನ್ನ ಇನ್-ಆ್ಯಪ್ ರಿಪೋರ್ಟಿಂಗ್ ವೈಶಿಷ್ಟ್ಯತೆಯನ್ನು ಮತ್ತಷ್ಟು ಸಬಲಗೊಳಿಸಿದ್ದು, ಹೊಸದಾಗಿ ಆರಂಭಿಸಿರುವ 'Misleading Information' ವಿಭಾಗದಲ್ಲಿ ಸಮುದಾಯ ವಿರೋಧಿ ವಿಡಿಯೊ ಅಥವಾ ಕಂಟೆಂಟ್‌ಗಳ ವಿರುದ್ಧ ದೂರು ಸಲ್ಲಿಸಬಹುದಾಗಿದೆ.

8. ಪ್ರೈವೆಸಿ ಸೆಟಿಂಗ್ಸ್‌:  

* ಬಳಕೆದಾರರು ತಮ್ಮನ್ನು ಯಾರು ಫಾಲೋ ಮಾಡಬೇಕೆಂಬುದನ್ನು ನಿರ್ಧರಿಸಬೇಕು
* ಕಾಮೆಂಟ್‌ಗಳನ್ನು ಯಾರು ಕಳುಹಿಸಲು ಅವಕಾಶ ನೀಡಬೇಕೆಂಬುದನ್ನು ನಿರ್ಧರಿಸಬೇಕು
* ತಮ್ಮ ವಿಡಿಯೊಗಳಿಗೆ ಪ್ರತಿಕ್ರಿಯಿಸಲು ಯಾರಿಗೆ ಅನುಮತಿಸಬೇಕೆಂಬ ನಿರ್ಧಾರ ಕೈಗೊಳ್ಳಬೇಕು
* ಡ್ಯುಯೆಟ್‌ನಲ್ಲಿ ಭಾಗಿಯಾಗಲು ಯಾರಿಗೆ ಅನುಮತಿಸಬೇಕೆಂಬ ನಿರ್ಧಾರವನ್ನು ತೆಗೆದುಕೊಳ್ಳಬೇಕು
* ಮೆಸೇಜ್‌ಗಳನ್ನು ಯಾರು ಕಳಿಸಬೇಕೆಂಬ ನಿರ್ಧಾರವನ್ನು ಬಳಕೆದಾರ ತೆಗೆದುಕೊಳ್ಳಬೇಕು
* ಇಷ್ಟವಿಲ್ಲದ ಕಂಟೆಂಟ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು ನಿಯಂತ್ರಿಸಬೇಕು
* ಬ್ಲಾಕ್ ಲೀಸ್ಟ್ ಅನ್ನು ರಚಿಸುವುದು ಮತ್ತು ಎಡಿಟ್ ಮಾಡಬೇಕು

9. ಡಿವೈಸ್ ಮ್ಯಾನೇಜ್ ಮೆಂಟ್: ಈ ವೈಶಿಷ್ಟ್ಯತೆಯನ್ನು ಬಳಸಿಕೊಂಡು ಟಿಕ್‌ಟಾಕ್‌ ಬಳಕೆದಾರರು ಸೆಷನ್‌ಗಳನ್ನು ಮುಗಿಸಲು ಅಥವಾ ಇತರೆ ಡಿವೈಸ್‌ಗಳಲ್ಲಿರುವ ತಮ್ಮ ಅಕೌಂಟ್‌ಗಳನ್ನು ತೆಗೆದು ಹಾಕಬಹುದಾಗಿದೆ. ಈ ಮೂಲಕ ಅವರ ಅಕೌಂಟ್ ಅನ್ನು ಸುರಕ್ಷಿತವಾಗಿಟ್ಟುಕೊಳ್ಳಬಹುದು. ಯೂಸರ್ ಅಕೌಂಟ್‌ಗಳನ್ನು ದುರ್ಬಳಕೆ ಮಾಡುವುದನ್ನು ಇದು ತಪ್ಪಿಸುತ್ತದೆ.

10. ರಿಸ್ಕ್‌ ವಾರ್ನಿಂಗ್ ಟ್ಯಾಗ್: ಇದು ಸಾಮಾನ್ಯ ಬಳಕೆಗೆ ಅಪೇಕ್ಷಣೆಯಲ್ಲದ ವಿಡಿಯೊ ಎಂದು ವೀಕ್ಷಕರಿಗೆ ತಿಳಿಸುತ್ತದೆ.

ಹೆಚ್ಚಿನ ವಿವರಗಳಿಗೆ: https://www.tiktok.com/en/safetyಗೆ ಭೇಟಿ ನೀಡಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು