ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿದಿನ 10 ಲಕ್ಷ ನಕಲಿ ಖಾತೆಗಳ ರದ್ದು: ಟ್ವಿಟರ್‌ ಹೇಳಿಕೆ

Last Updated 8 ಜುಲೈ 2022, 3:03 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ನಕಲಿ ಎಂದು ಗುರುತಿಸಿ ಸುಮಾರು 10 ಲಕ್ಷ ಖಾತೆಗಳನ್ನು ಪ್ರತಿನಿತ್ಯವು ಅಳಿಸಿಹಾಕಲಾಗುತ್ತಿದೆ ಎಂದು ಟ್ವಿಟರ್‌ ಹೇಳಿದೆ. ನಕಲಿ ಖಾತೆಗಳ ಕುರಿತು ಎಲಾನ್ ಮಸ್ಕ್‌ ಅವರು ಎತ್ತಿದ್ದ ಆಕ್ಷೇಪವನ್ನು ಈ ಬೆಳವಣಿಗೆ ದೃಢಪಡಿಸುವಂತಿದೆ.

ಸಕ್ರಿಯ ಬಳಕೆದಾರರಲ್ಲಿ, ಸ್ವಯಂಚಾಲಿತ ಸ್ಪ್ಯಾಮ್‌ ಖಾತೆಗಳ ಪ್ರಮಾಣ ಶೇ 5ಕ್ಕೂ ಕಡಿಮೆ ಎಂದು ಕಂಪನಿಯು ನಿರೂಪಿಸದೇ ಹೋದರೆ ತಾನು ಟ್ವಿಟರ್‌ ಖರೀದಿ ಪ್ರಸ್ತಾವದಿಂದ ಹಿಂದೆ ಸರಿಯುಯುವುದಾಗಿ ಟೆಸ್ಲಾ ಸಿಇಒ ಆಗಿರುವ ಮಸ್ಕ್‌ ಎಚ್ಚರಿಸಿದ್ದರು.

ಆದರೆ, ತಪ್ಪು ಮಾಹಿತಿಗಳ ಪ್ರಸಾರ ಮತ್ತು ಸ್ಕ್ಯಾಮ್‌ಗಳಿಗೆ ಉತ್ತೇಜನ ನೀಡುವ ಖಾತೆಗಳ ಸಂಖ್ಯೆ ಕುರಿತು ಟ್ವಿಟರ್‌ ಕಡಿಮೆ ಅಂದಾಜು ಮಾಡಿದೆ. ಸ್ಪ್ಯಾಮ್ ಖಾತೆಗಳ ಸಂಖ್ಯೆ ಒಟ್ಟು ಬಳಕೆದಾರರಿಗಿಂತಲೂ ಶೇ 5ಕ್ಕೂ ಕಡಿಮೆ ಇದೆ ಎಂದು ಟ್ವಿಟರ್‌ ಪ್ರತಿಪಾದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT