ಬಹುತೇಕ ಮಂದಿ ಫೇಸ್ಬುಕ್ ಬಳಸುತ್ತಿದ್ದರೂ, ಅದನ್ನು ಸುರಕ್ಷಿತವಾಗಿಡುವ ಬಗ್ಗೆ ಹೆಚ್ಚಿನ ಗಮನ ಹರಿಸುವುದಿಲ್ಲ. ತಂತ್ರಜ್ಞಾನದ ಯುಗದಲ್ಲಿ ಯಾವುದೂ ಸೇಫ್ ಅಲ್ಲ ಎಂದು ಅನಿಸಿದರೂ ನಮ್ಮ ಖಾತೆಯನ್ನು ಸುರಕ್ಷಿತವಾಗಿಡುವ ಹೊಣೆ ನಮ್ಮದಾಗಿರುತ್ತದೆ. ಫೇಸ್ಬುಕ್ ಖಾತೆ ಸುರಕ್ಷಿತವಾಗಿಡುವುದಕ್ಕೆ ಟಿಪ್ಸ್ ಇಲ್ಲಿದೆ

ಪಾಸ್ವರ್ಡ್: ನೀವು ಬಳಸುವ ಪಾಸ್ವರ್ಡ್ ಸ್ಟ್ರಾಂಗ್ ಆಗಿರಲಿ. ನೆನಪಿಡಲು ಸುಲಭವಾಗುತ್ತದೆ ಎಂದು ನಿಮ್ಮ ಮನೆಯ ಬೆಕ್ಕಿನದ್ದೋ, ಪ್ರೇಮಿಯದ್ದೋ ಹೆಸರು ಇಡಬೇಡಿ. ಪಾಸ್ವರ್ಡ್ ಕ್ರಿಯೇಟ್ ಮಾಡುವಾಗ ಅಕ್ಷರಗಳ ಜತೆ ಸಂಖ್ಯೆ, ಚಿಹ್ನೆಯನ್ನು ಬಳಸಿ. ಯಾರಿಗೂ ಊಹಿಸಲು ಸಾಧ್ಯವಾಗದಂತೆ ವಿಶೇಷ ಪಾಸ್ವರ್ಡ್ ಕೊಡಿ. ಗಮನಿಸಿ, ಬೇರೆ ಖಾತೆಗಳಿಗೆ ಬಳಸುವ ಪಾಸ್ವರ್ಡ್ ಅನ್ನು ಇಲ್ಲಿ ಬಳಸಲೇ ಬೇಡಿ.

ಪಾಸ್ವರ್ಡ್ ಸೇವ್ ಮಾಡಬೇಡಿ: ಲಾಗಿನ್ ಆಗುವಾಗ ಪಾಸ್ವರ್ಡ್ ಸೇವ್ ಮಾಡಬೇಕೆ ಎಂದು ಬ್ರೌಸರ್ ನೋಟಿಫಿಕೇಶನ್ ಬಂದರೆ No ಎಂದು ಉತ್ತರಿಸಿ. ಯಾವುದೇ ಬ್ರೌಸರ್ ನಲ್ಲಿ ನಿಮ್ಮ ಪಾಸ್ವರ್ಡ್ ಸೇವ್ ಮಾಡಿಡಬೇಡಿ. ಅದೆಷ್ಟೇ ಆಪ್ತರಾಗಿದ್ದರೂ ಪಾಸ್ ವರ್ಡ್ ಹಂಚಿಕೊಳ್ಳಬೇಡಿ.

ಪಾಸ್ವರ್ಡ್ ಬದಲಿಸುತ್ತಿರಿ: 6 ತಿಂಗಳಿಗೊಮ್ಮೆ ನಿಮ್ಮ ಪಾಸ್ವರ್ಡ್ ಬದಲಿಸುತ್ತಿರಿ. ನಿಮ್ಮ ಖಾತೆಯಲ್ಲಿ ಏನಾದರೂ ಸಮಸ್ಯೆ ಕಂಡು ಬಂದರೆ ಅಥವಾ ಹ್ಯಾಕ್ ಆದರೆ ತಕ್ಷಣವೇ ಪಾಸ್ವರ್ಡ್ ಬದಲಿಸಿ.

URL ಗಮನಿಸಿ: ಫೇಸ್ಬುಕ್ಗೆ ಬ್ರೌಸರ್ನಲ್ಲಿ ಲಾಗಿನ್ ಆಗುವಾಗ URL ಗಮನಿಸಿ. ಫೇಸ್ಬುಕ್ನ URL https://www.facebook.com ಎಂದಿರುತ್ತದೆ. ಇದರ ಬದಲು ಗಡಿಬಿಡಿಯಲ್ಲಿ facebook.co, face.com ಅಥವಾ facebook1.com ಮೊದಲಾದ ವೆಬ್ ಸೈಟ್ಗಳಿಗೆ ಲಾಗಿನ್ ಆಗಬೇಡಿ.

ಫೇಸ್ಬುಕ್ ಸೆಕ್ಯುರಿಟಿ & ಲಾಗಿನ್ ಚೆಕ್ ಮಾಡುತ್ತಿರಿ: ಫೇಸ್ಬುಕ್ ಖಾತೆಗೆ ಲಾಗಿನ್ ಆದ ಮೇಲೆ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ. ಅದರಲ್ಲಿ ಸೆಕ್ಯುರಿಟಿ & ಲಾಗಿನ್ ಕ್ಲಿಕ್ ಮಾಡಿದರೆ ನಿಮ್ಮ ಫೇಸ್ಬುಕ್ ಖಾತೆ ಯಾವ ಬ್ರೌಸರ್ನಲ್ಲಿ ಲಾಗಿನ್ ಆಗಿದೆ ಮತ್ತು ಯಾವ ಡಿವೈಸ್ (ಮೊಬೈಲ್) ನಲ್ಲಿ ಲಾಗಿನ್ ಆಗಿದೆ ಎಂಬುದನ್ನು ತೋರಿಸುತ್ತದೆ. ಉದಾಹರಣೆಗೆ ನೀವು ನಿಮ್ಮ ಲ್ಯಾಪ್ಟಾಪ್ನಲ್ಲಿ ಲಾಗಿನ್ ಆಗಿದ್ದರೆ, ನಿಮ್ಮ ಲ್ಯಾಪ್ಟಾಪ್ ಹೆಸರು ಮತ್ತು ಮೊಬೈಲ್ ಹೆಸರು ಅಲ್ಲಿ ಡಿಸ್ ಪ್ಲೇ ಆಗಿರುತ್ತದೆ. ನಿಮ್ಮ ಅರಿವಿಗೆ ಬಾರದಂತೆ ಬೇರೆ ಯಾರಾದರೂ ಲಾಗಿನ್ ಆಗಿದ್ದರೆ ಆ ಡಿವೈಸ್ /ಬ್ರೌಸರ್ನಿಂದ ಲಾಗ್ ಔಟ್ ಆಗಿ.

Two-factor authentication ಎನೇಬಲ್ ಮಾಡಿ: Use Two-factor authentication ಆನ್ ಮಾಡಿದರೆ ನೀವು ಲಾಗಿನ್ ಆಗುವಾಗ ನಿಮ್ಮ ಮೊಬೈಲ್ ಗೆ ಕೋಡ್ ಎಸ್ ಎಂಎಸ್ ಮೂಲಕ ಬರುತ್ತದೆ. ನಿಮ್ಮ ಹೊರತಾಗಿ ಬೇರೆ ಯಾರಾದರೂ ಲಾಗಿನ್ ಆಗಲು ಯತ್ನಿಸಿದರೆ ಅದು ನಿಮ್ಮ ಅರಿವಿಗೆ ಬರುತ್ತದೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.