ಗುರುವಾರ , ಅಕ್ಟೋಬರ್ 1, 2020
27 °C

ವರ್ಕ್‌ ಫ್ರಂ ಹೋಮ್ ‌ಸೈಬರ್‌ ಭದ್ರತೆಗೆ ಸೂತ್ರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್-19 ಕಾರ್ಪೊರೇಟ್ ಜೀವನಶೈಲಿಯಲ್ಲಿ ಅದರಲ್ಲೂ ವಿಶೇಷವಾಗಿ ಕೆಲಸದ ವೈಖರಿ ಮತ್ತು ಕಾರ್ಯ ನಿರ್ವಹಿಸುವ ಸ್ಥಳಗಳ ವಿಚಾರದಲ್ಲಿ ಭಾರೀ ಬದಲಾವಣೆ ತಂದಿದೆ. ಈ ‘ರಿಮೋಟ್ ವರ್ಕಿಂಗ್’ ಅಥವಾ ಮನೆಯಿಂದ ಕೆಲಸ ಮಾಡುವ ಪರಿಕಲ್ಪನೆಯನ್ನು ಬಹುತೇಕ ಉದ್ಯೋಗಿಗಳು ಭವಿಷ್ಯದಲ್ಲಿ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಆದರೆ, ಹೆಚ್ಚು ಹೆಚ್ಚು ಆನ್‌ಲೈನ್ ಬಳಕೆಯಾಗುತ್ತಿರುವುದರಿಂದ ಸೈಬರ್ ಬೆದರಿಕೆಗಳು ಕೂಡ ಹೆಚ್ಚಾಗುತ್ತಿವೆ. ಸೈಬರ್‌ ಸುರಕ್ಷತೆ ಮತ್ತು ಡೇಟಾ ಸಂರಕ್ಷಣೆ, ಕಂಪನಿಯ ನೆಟ್‌ವರ್ಕ್‌ ಬಗ್ಗೆ ಜಾಗರೂಕತೆ ವಹಿಸಬೇಕಾಗುತ್ತದೆ ಎನ್ನುತ್ತಾರೆ ನಾರ್ಟನ್ ಲೈಫ್ ಲಾಕ್ ಸೈಬರ್ ಸೇಫ್ಟಿಯ ಮಾರಾಟ ಮತ್ತು ಫೀಲ್ಡ್‌ ಮಾರ್ಕೆಟಿಂಗ್‌ ನಿರ್ದೇಶಕ ರಿತೇಶ್‌ ಚೋಪ್ರಾ.

* ನಿಮ್ಮ ಕಂಪನಿಯ ಟೂಲ್ ಬಾಕ್ಸ್ ಟೆಕ್ ಬಳಸಿ
ಮನೆಯಿಂದ ಕೆಲಸ ಮಾಡುವ ಸಂದರ್ಭದಲ್ಲಿ ಕಂಪನಿ ಬಳಸುವ ಟೆಕ್ ಟೂಲ್‌ಗಳು ನಿಮ್ಮ ಸೈಬರ್ ಸುರಕ್ಷತೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ. ಫೈರ್ ವಾಲ್ ಮತ್ತು ಆ್ಯಂಟಿವೈರಸ್ ರಕ್ಷಣೆಯನ್ನು ನೀಡುತ್ತವೆ. ಇವುಗಳೊಂದಿಗೆ ವಿಪಿಎನ್ ಮತ್ತು 2-ಫ್ಯಾಕ್ಟರ್ ಅಥೆಂಟಿಕೇಶನ್‌ನಂತಹ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ.

* ಪರ್ಯಾಯ ಡೌನ್‌ಲೋಡ್‌ ಮೇಲೆ ನಿಯಂತ್ರಣವಿರಲಿ
ಉದ್ಯೋಗಿಗಳು ಹೆಚ್ಚು ತಂಡಗಳಾಗಿ ಕಾರ್ಯನಿರ್ವಹಣೆ ಮಾಡುವುದು ಮತ್ತು ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಮತ್ತು ವಿಡಿಯೊ ಮೀಟಿಂಗ್ ರೂಂನಂತಹ ಸಹಭಾಗಿತ್ವದ ಟೂಲ್‌ ಬಳಸುವುದು ಸಹಜ. ಒಂದು ವೇಳೆ ನೀವು ಬಳಸುವ ಟೂಲ್ ಸಮರ್ಪಕವಾಗಿ ಕಾರ್ಯ ನಿರ್ವಹಿಸದಿದ್ದರೆ, ಇದಕ್ಕೆ ಪರ್ಯಾಯವಾಗಿ ಮತ್ತೊಂದನ್ನು ಡೌನ್‌ಲೋಡ್ ಮಾಡುವಂತೆ ಪಾಪ್‌ ಅಪ್‌ ಕಾಣಿಸಿಕೊಳ್ಳಬಹುದು. ನೀವು ಈ ಹೊಸ ಸಾಫ್ಟ್‌ವೇರ್ ಪ್ರೋಗ್ರಾಂ ಅನ್ನು ಡೌನ್‌ಲೋಡ್‌ ಮಾಡಿದರೆ ಕಂಪನಿಯ ಡೇಟಾವನ್ನು ಅಥವಾ ಡಿವೈಸ್‌ನಲ್ಲಿ ನೀವು ಹೊಂದಿರುವ ಯಾವುದೇ ವೈಯಕ್ತಿಕ ಮಾಹಿತಿಯನ್ನು ವೀಕ್ಷಿಸಲು ಅಥವಾ ಕದಿಯಲು ಸಾಧ್ಯವಾಗುತ್ತದೆ.

* ಸಾಫ್ಟ್‌ವೇರ್ ಮತ್ತು ಪ್ಯಾಚಸ್ ಅನ್ನು ಅಪ್‌ಡೇಟ್ ಮಾಡುತ್ತಿರಿ
ನಿಮ್ಮ ಕಂಪ್ಯೂಟರ್‌ನಲ್ಲಿನ ಸಾಫ್ಟ್‌ವೇರ್‌ಗಳನ್ನು ಅಪ್‌ಡೇಟ್ ಮಾಡುವಂತೆ ನಿಮಗೆ ರಿಮೈಂಡ್ಸ್‌  ಬರುತ್ತಿರುತ್ತವೆ. ಅಪ್‌ಡೇಟ್ ಮಾಡುವುದರಿಂದ ಸುರಕ್ಷತಾ ನ್ಯೂನತೆಗಳನ್ನು ಗುರುತಿಸಿ ನಿಮ್ಮ ಡೇಟಾವನ್ನು ರಕ್ಷಿಸಬಹುದು. 

* ನಿಮ್ಮ ವಿಪಿಎನ್ ಆನ್ ಆಗಿರುವಂತೆ ನೋಡಿಕೊಳ್ಳಿ
ವಿಪಿಎನ್ (ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್) ಡೇಟಾವನ್ನು ಎನ್‌ಕ್ರಿಪ್ಟ್ ಮಾಡುವ ಮೂಲಕ ಉದ್ಯೋಗಿಗಳು ಮತ್ತು ವ್ಯವಹಾರಗಳ ನಡುವೆ ಸುರಕ್ಷಿತವಾದ ಸಂಪರ್ಕ ಕಲ್ಪಿಸುತ್ತದೆ. ಸೈಬರ್ ಅಪರಾಧಿಗಳು ಅಥವಾ ಪ್ರತಿಸ್ಪರ್ಧಿಗಳಿಂದ ನಿಮ್ಮ ಮಾಹಿತಿಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಈ ವಿಪಿಎನ್ ನೆರವಾಗುತ್ತದೆ.

* ಕೊರೊನಾ ವಿಷಯ ಒಳಗೊಂಡ ಫಿಶಿಂಗ್ ಇಮೇಲ್ ಕುರಿತು ಜಾಗರೂಕರಾಗಿರಿ
ಸೈಬರ್ ಅಪರಾಧಿಗಳು ಕೊರೊನಾ ವಿಚಾರವನ್ನು ಬಳಸಿಕೊಂಡು ಉದ್ಯೋಗಿಗಳಿಗೆ ಅಪಾಯಕಾರಿ ಲಿಂಕ್‌ಗಳನ್ನು ಒಳಗೊಂಡ ನಕಲಿ ಇಮೇಲ್ ಕಳುಹಿಸಬಹುದು.

ಈ ಅನಾಮಧೇಯ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ನಿಮ್ಮ ಕಂಪ್ಯೂಟರ್‌ನಲ್ಲಿ ಮಾಲ್‌ವೇರ್‌ ಡೌನ್‌ಲೋಡ್ ಆಗುತ್ತದೆ. ಈ ಮೂಲಕ ಸೈಬರ್ ಅಪರಾಧಿಗಳು ನಿಮ್ಮ ಕಂಪ್ಯೂಟರ್‌ನಲ್ಲಿರುವ ಸೂಕ್ಷ್ಮವಾದ ವ್ಯವಹಾರ ಮಾಹಿತಿ ಮತ್ತು ಹಣಕಾಸು ಡೇಟಾ ಕದಿಯಬಹುದಾಗಿದೆ. ಯಾವುದೇ ಕಾರಣಕ್ಕೂ ಇಂತಹ ಲಿಂಕ್‌ ಕ್ಲಿಕ್‌ ಮಾಡಬೇಡಿ. 


ರಿತೇಶ್‌ ಚೋಪ್ರಾ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು