ನವದೆಹಲಿ: ದೇಶದಲ್ಲಿ ಬಳಕೆದಾರರ ಮಾಹಿತಿ ಕದಿಯುತ್ತವೆ ಮತ್ತು ರಾಷ್ಟ್ರದ ಸಾರ್ವಭೌಮತೆಗೆ ಧಕ್ಕೆಯಾಗುತ್ತಿದೆ ಎಂಬ ಕಾರಣಕ್ಕಾಗಿ ಚೀನಾ ಮೂಲದ ಟಿಕ್‌ಟಾಕ್ ಸಹಿತ ವಿವಿಧ ಆ್ಯಪ್‌ಗಳನ್ನು ಸರ್ಕಾರ ನಿಷೇಧಿಸಿತ್ತು. ಅದರ ಬೆನ್ನಲ್ಲೇ ವಿವಿಧ ದೇಸಿ ವಿಡಿಯೋ ಕ್ರಿಯೇಟರ್ ಆ್ಯಪ್‌ಗಳು ಜನಪ್ರಿಯತೆ ಪಡೆದುಕೊಂಡಿವೆ. ಈ ಮಧ್ಯೆ ಯೂಟ್ಯೂಬ್‌ನ ಕಿರುವಿಡಿಯೋ ಪೋಸ್ಟ್ ಆ್ಯಪ್ ಯೂಟ್ಯೂಬ್ ಶಾರ್ಟ್ಸ್, ಅತ್ಯಂತ ಹೆಚ್ಚಿನ ವೀಕ್ಷಣೆ ಪಡೆದುಕೊಳ್ಳುವ ಮೂಲಕ ಸದ್ದು ಮಾಡಿದೆ.
ಟಿಕ್‌ಟಾಕ್ ಜತೆಗೆ ಸ್ಪರ್ಧಿಸುತ್ತಿರುವ ಯೂಟ್ಯೂಬ್ ಶಾರ್ಟ್ಸ್, ಬೀಟಾ ಟೆಸ್ಟಿಂಗ್ ಅವಧಿಯಲ್ಲಿ ದಿನಕ್ಕೆ 350 ಕೋಟಿ ವೀಕ್ಷಣೆ ಪಡೆದುಕೊಂಡಿದೆ ಎಂದು ಯೂಟ್ಯೂಬ್ ಮುಖ್ಯಸ್ಥರು ಹೇಳಿದ್ದಾರೆ. ಗೂಗಲ್ ಒಡೆತನದ ಯೂಟ್ಯೂಬ್, ವಿಡಿಯೊ ಹಂಚಿಕೊಳ್ಳಲು ಜನಪ್ರಿಯ ವೇದಿಕೆಯಾಗಿದೆ.
ಸುಸಾನ್ ವೊಜಿಕಿ ಈ ಕುರಿತು ವಿವರಣೆ ನೀಡಿದ್ದು, ಯೂಟ್ಯೂಬ್ ಶಾರ್ಟ್ಸ್ ಮೂಲಕ ಪೋಸ್ಟ್ ಮಾಡಲಾಗುವ ವಿಡಿಯೊಗಳು ದಿನಕ್ಕೆ 350 ಕೋಟಿ ವೀಕ್ಷಣೆ ಪಡೆದುಕೊಳ್ಳುತ್ತಿವೆ. ಜಗತ್ತಿನಾದ್ಯಂತ ಬಳಕೆದಾರರು ಯೂಟ್ಯೂಬ್ ಶಾರ್ಟ್ಸ್ ವಿಡಿಯೋ ಬಳಕೆದಾರರಿದ್ದಾರೆ. ಮತ್ತಷ್ಟು ಹೆಚ್ಚಿನ ರಾಷ್ಟ್ರಗಳಲ್ಲಿ ಯೂಟ್ಯೂಬ್ ಶಾರ್ಟ್ಸ್ ಪರಿಚಯಿಸಲಾಗುತ್ತದೆ ಎಂದಿದ್ದಾರೆ.
ಪ್ರಸ್ತುತ ಯೂಟ್ಯೂಬ್ ಶಾರ್ಟ್ಸ್ ಪ್ರತ್ಯೇಕ ಅಪ್ಲಿಕೇಶನ್ ಆಗಿದೆ, ಮುಂದಿನ ದಿನಗಳಲ್ಲಿ ಯೂಟ್ಯೂಬ್‌ನಲ್ಲಿಯೇ ಶಾರ್ಟ್ಸ್ ಅನ್ನು ಕೂಡ ಸೇರಿಸಲಾಗುವುದು, ಇದರಿಂದ ಬಳಕೆದಾರರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.