‘ನಿಮ್ಮ ಖಾಸಗಿ ಕ್ಷಣಗಳ ವಿಡಿಯೊವನ್ನು ಅಂತರ್ಜಾಲದಲ್ಲಿ ಹಂಚುತ್ತೇವೆ,’ ಎಂಬುದಾಗಿ ಬೆದರಿಸಿ ಹಣ ಸುಲಿಗೆ ಮಾಡುವ ‘ನಕಲಿ’ ಇಮೇಲ್ ಅಭಿಯಾನ ದೇಶದಲ್ಲಿ ನಡೆಯುತ್ತಿದೆ. ಇದರ ಬಗ್ಗೆ ಎಚ್ಚರ ವಹಿಸಿ ಎಂದು ದೇಶದ ಸೈಬರ್ ಭದ್ರತಾ ಏಜನ್ಸಿ ಇಂಟರ್ನೆಟ್ ಬಳಕೆದಾರರನ್ನು ತಿಳಿಸಿದೆ.

ಇಂಥ ಇ–ಮೇಲ್‌ಗಳು ಬಂದರೆ, ಆತಂಕ ಪಡುವ ಅಗತ್ಯವೇನೂ ಇಲ್ಲ ಎಂದೂ ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ದಳ (ಸಿಇಆರ್‌ಟಿ–ಇನ್) ಸ್ಪಷ್ಟಪಡಿಸಿದೆ. ಇಂಟರ್‌ನೆಟ್ ಬಳಕೆದಾರರು ಸಾಮಾಜಿಕ ಜಾಲತಾಣದ ತಮ್ಮ ಖಾತೆಗಳ ಪಾಸ್‌ವರ್ಡ್‌ಗಳನ್ನು ಹೊಸದಾಗಿ ಹೊಂದಿಸಿಕೊಳ್ಳುವಂತೆಯೂ ಅದು ಸಲಹೆ ನೀಡಿದೆ.

‘ನಿಮ್ಮ ಕಂಪ್ಯೂಟರ್ ಹ್ಯಾಕ್ ಆಗಿದೆ, ನಿಮ್ಮ ವೆಬ್ ಕ್ಯಾಮೆರಾ ಮೂಲಕ ವಿಡಿಯೊಗಳನ್ನು ಮಾಡಿಕೊಂಡಿದ್ದೇವೆ. ನಿಮ್ಮ ಪಾಸ್‌ವರ್ಡ್‌ಗಳು ನಮಗೆ ಗೊತ್ತಿವೆ,’ ಎಂದು ವಂಚಕರು ಮೊದಲಿಗೆ ಇ–ಮೇಲ್ ಮಾಡುತ್ತಾರೆ. ಅದನ್ನು ನಂಬಿದರೆ ವಂಚಕರು ಸುಲಿಗೆ ಮಾಡುತ್ತಾರೆ ಎಂದು ಸಿಇಆರ್‌ಟಿ–ಇನ್ ಸಲಹೆ ಸೂಚನೆಗಳನ್ನು ಬಿಡುಗಡೆ ಮಾಡಿದೆ.

ಈ ಇ–ಮೇಲ್‌ಗಳು ನಕಲಿ ಮತ್ತು ಸುಲಿಗೆ ಮಾಡುವ ಉದ್ದೇಶದ್ದಾಗಿದ್ದು, ಈ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಸಲಹೆ ಸೂಚನೆಗಳಲ್ಲಿ ತಿಳಿಸಲಾಗಿದೆ.

ವಂಚನೆ ಹೇಗೆ?

ಮೊದಲನೆಯದಾಗಿ ವಂಚಕರು ಇಂಟರ್ನೆಟ್ ಬಳಕೆದಾರರಿಗೆ ಇ–ಮೇಲ್ ಮಾಡುತ್ತಾರೆ. ಅದನ್ನು ನಂಬಿ ಪ್ರತಿಕ್ರಿಯಿಸಿದರೆ ಯಾವುದಾದರೊಂದು ಹಳೆಯ ಪಾಸ್‌ವರ್ಡ್ ಅನ್ನು ಇ– ಮೇಲ್‌ನಲ್ಲಿ ಬರೆದು ಕಳಿಸುತ್ತಾರೆ. ಈ ಮೂಲಕ ಬಳಕೆದಾರರ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತದೆ.

ಅದರ ನಂತರ, ವಂಚಕರು ಕಂಪ್ಯೂಟರ್ ಪರಿಭಾಷೆಯಲ್ಲಿ ಸುಳ್ಳಿನ ಕತೆಯೊಂದನ್ನು ಸೃಷ್ಟಿ ಮಾಡುತ್ತಾರೆ. ಆ ಕತೆ ಹೀಗಿದೆ... ‘ಅಶ್ಲೀಲ ವೆಬ್‌ಸೈಟ್‌ನಲ್ಲಿ ನಾವು ವೈರಸ್‌ಗಳನ್ನು ಹರಿಬಿಟ್ಟಿದ್ದೇವೆ. ನೀವು ಅಶ್ಲೀಲ ಸೈಟ್‌ಗಳನ್ನು ವೀಕ್ಷಿಸುತ್ತಿರುವಾಗ, ನಿಮ್ಮ ವೆಬ್‌ಕ್ಯಾಮ್ ಮತ್ತು ಕಂಪ್ಯೂಟರ್ ಪರದೆಯನ್ನು ನಾವು ಹ್ಯಾಕ್ ಮಾಡಿದ್ದೇವೆ. ನಿಮ್ಮ ಮೆಸೆಂಜರ್, ಫೇಸ್‌ಬುಕ್ ಮತ್ತು ಇ–ಮೇಲ್‌ನಿಂದ ನಿಮ್ಮೆಲ್ಲ ಸಂಪರ್ಕಗಳನ್ನೂ ಕದ್ದಿದ್ದೇವೆ,’ ಎಂದು ಆ ಕತೆಯಲ್ಲಿ ಹೇಳಲಾಗುತ್ತದೆ. ಇದು ಸುಲಿಗೆಯ ಅಂತಿಮ ಹಂತ ಎಂದು ಸಿಇಆರ್‌ಟಿ ಹೇಳಿದ್ದು, ಕತೆ ನಂಬಿದರೆ ಆನ್‌ಲೈನ್ ಬಳಕೆದಾರರು ಹಣ ಕಳೆದುಕೊಳ್ಳುವುದು ಖಚಿತ ಎಂದು ತಿಳಿಸಿದೆ.

ವಂಚಕರು ಬಿಟ್‌ಕಾಯ್ನ್ ಮೂಲಕ ಹಣ ಕೇಳುತ್ತಾರೆ. 24 ಗಂಟೆಗಳಲ್ಲಿ ಕೊಡದೇ ಹೋದರೆ ವಿಡಿಯೊವನ್ನು ಸ್ನೇಹಿತರು, ಸಂಬಂಧಿಗಳಿಗೆ ಕಳುಹಿಸುವುದಾಗಿ ಬೆದರಿಸುತ್ತಾರೆ. ಆದರೆ, ಇಂಥ ಇ– ಮೇಲ್‌ಗಳಿಗೆ ಉತ್ತರಿಸದಂತೆಯೂ, ಹಣ ನೀಡದಂತೆಯೂ ಸಿಇಆರ್‌ಟಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.