ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ 'ಟಿಕ್‌ಟಾಕ್‌' ಆ್ಯಪ್‌ ನಿರ್ಬಂಧಿಸಿದ ಪಾಕಿಸ್ತಾನ

Last Updated 9 ಅಕ್ಟೋಬರ್ 2020, 12:32 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ ಚೀನಾದ ಟಿಕ್‌ಟಾಕ್‌ ಆ್ಯಪ್‌ ನಿರ್ಬಂಧಿಸಿರುವುದಾಗಿ ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದೆ.

ಸಮಾಜದ ಹಲವು ವಲಯಗಳಿಂದ ವಿಡಿಯೊ ಶೇರಿಂಗ್‌ ಅಪ್ಲಿಕೇಷನ್‌ ಟಿಕ್‌ಟಾಕ್‌ನಲ್ಲಿ ಅಸಭ್ಯವಾದ ವಿಡಿಯೊಗಳು ಇರುವುದಾಗಿ ದೂರುಗಳು ಬಂದಿವೆ. ದೂರುಗಳ ಆಧಾರದ ಮೇಲೆ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ಟಿಕ್‌ಟಾಕ್‌ ಅಪ್ಲಿಕೇಷನ್‌ ನಿರ್ಬಂಧಿಸಲು ಸೂಚನೆ ನೀಡಿದೆ ಎಂದು ಪಿಟಿಎ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾನೂನು ಬಾಹಿರವಾದ, ಅಶ್ಲೀಲ ದೃಶ್ಯಗಳನ್ನು ಒಳಗೊಂಡಿರುವ ಕಂಟೆಂಟ್‌ ನಿಯಂತ್ರಿಸಲು ಪರಿಣಾಮಕಾರಿಯಾದ ವ್ಯವಸ್ಥೆ ಅಭಿವೃದ್ಧಿ ಪಡಿಸುವಂತೆ ನೀಡಲಾಗಿದ್ದ ಸೂಚನೆಯನ್ನು ಪಾಲಿಸುವಲ್ಲಿ ಕಂಪನಿ ವಿಫಲವಾಗಿರುವ ಕಾರಣ ಟಿಕ್‌ಟಾಕ್‌ ಆ್ಯಪ್‌ ನಿರ್ಬಂಧಿಸಲು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT