ಮಂಗಳವಾರ, ಜೂನ್ 28, 2022
28 °C

ಮೃತ ಮಾವುತನಿಗೆ ಗಜರಾಜನ ಕಣ್ಣೀರ ವಿದಾಯ; ಮನ ಮಿಡಿಯುವ ವಿಡಿಯೊ ವೈರಲ್‌

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಕೊಟ್ಟಾಯಂ: ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಮಾವುತನೊಬ್ಬನ ಅಂತ್ಯಕ್ರಿಯೆಯ ಸ್ಥಳಕ್ಕೆ ಧಾವಿಸಿದ ಗಜರಾಜ, ಕಣ್ಣೀರ ವಿದಾಯ ನೀಡಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.

ಕಳೆದ 25 ವರ್ಷಗಳಿಂದ ಈ ಆನೆಯ ಪರಿಪಾಲನೆಯನ್ನು ಮಾವುತ ದಾಮೋದರ್ ನಾಯರ್ ನೋಡಿಕೊಳ್ಳುತ್ತಿದ್ದರು. 74 ವರ್ಷದ ದಾಮೋದರ್ ಇಹಲೋಕ ತ್ಯಜಿಸಿದಾಗ ಮೂಕ ಪ್ರಾಣಿಯು ಮಾವುತನಿಗೆ ಭಾವನಾತ್ಮಕ ಅಶ್ರುತರ್ಪಣಗೈದ ವಿಡಿಯೊ ಎಂಥಹ ಕಲ್ಲು ಹೃದಯವನ್ನು ಕರಗಿಸಿಬಿಡುತ್ತದೆ.

ಬ್ರಹದತ್ತನ್ ಎಂಬ ಆನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾವುತನ ಮೇಲೆ ಆನೆ ತೋರಿಸಿರುವ ಪ್ರೀತಿಗೆ ಸ್ಥಳೀಯ ನಿವಾಸಿಗಳು ಸೇರಿದಂತೆ ಎಲ್ಲರೂ ಮನಸೋತಿದ್ದಾರೆ.

ಇದನ್ನೂ ಓದಿ: 

 

ಮನೆಯಲ್ಲಿ ಪಾರ್ಥಿವ ಶರೀರವನ್ನು ನೋಡಲು ಬಂದ ಆನೆ ಕಣ್ಣೀರಿಟ್ಟಿತ್ತಲ್ಲದೆ ಸೊಂಡಿಲಿನಿಂದ ಮೃತದೇಹವನ್ನು ಸ್ಪರ್ಶಿಸಿ ಮೇಲಕ್ಕೆ ಎತ್ತಿಹಿಡಿದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು