ಸೋಮವಾರ, ಡಿಸೆಂಬರ್ 6, 2021
23 °C

ಟೊಮೆಟೊ ದರ ಏರಿಕೆ: ಮೀಮ್ ಟ್ವೀಟ್ ಮಾಡಿದ ಪ್ರಕಾಶ್ ರಾಜ್!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

DH PHOTO

ಬೆಂಗಳೂರು: ಟೊಮೆಟೊ ಬೆಲೆ ಏರಿಕೆ ಕುರಿತು ಮೀಮ್ ಒಂದನ್ನು ಟ್ವೀಟ್ ಮಾಡಿರುವ ನಟ ಪ್ರಕಾಶ್ ರಾಜ್ ಇದನ್ನು ಮಾಡಿದವರು ಯಾರು ಎಂದು ಪ್ರಶ್ನಿಸಿದ್ದಾರೆ.

ಅಕಾಲಿಕ ಮಳೆ ಮತ್ತು ಇತರ ಕಾರಣಗಳಿಂದಾಗಿ ಟೊಮೆಟೊ ಮತ್ತು ವಿವಿಧ ಬೆಳೆಗಳು ಹಾನಿಗೀಡಾಗಿವೆ. ಇದರಿಂದ ಸಹಜವಾಗಿಯೇ ಟೊಮೆಟೊ ದರ ಏರಿಕೆಯಾಗಿದೆ.

ಟೊಮೆಟೊ ದರ ಕೆಲವು ನಗರಗಳಲ್ಲಿ ಕಿಲೋ ಒಂದಕ್ಕೆ ₹100ಕ್ಕೂ ಅಧಿಕವಾಗಿದೆ.

ಇದೇ ಸಂದರ್ಭದಲ್ಲಿ ಹಲವರು ಬೆಲೆ ಏರಿಕೆ ಕುರಿತಂತೆ ಮೀಮ್ಸ್ ರಚಿಸಿ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಅಂತಹ ಮೀಮ್ ಒಂದರಲ್ಲಿ ನಟ ಸೂರ್ಯ ಪೊಲೀಸ್ ಕಂಟ್ರೋಲ್ ರೂಮ್‌ನಲ್ಲಿ ಇದ್ದು, ಫೋನ್ ಕರೆ ಕೇಳಿಸಿಕೊಳ್ಳುತ್ತಿರುವಾಗ, ಅತ್ತ ಕಡೆ ಪ್ರಕಾಶ್ ರಾಜ್ ಅವರು ಟೊಮೆಟೊ ಕೆಜಿ.ಗೆ ₹110 ಎನ್ನುವ ಚಿತ್ರವಿದೆ.

ಈ ಮೀಮ್ ಅನ್ನು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದು, ಈ ಮೀಮ್ ರಚಿಸಿದವರು ಯಾರು ಎಂದು ಪ್ರಶ್ನಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು