ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಧು ಮೂಸೆವಾಲಾ ಹತ್ಯೆ: ಆಹಾರ ಸೇವಿಸಲೊಪ್ಪದ ಸಾಕು ನಾಯಿಗಳು!

ಅಕ್ಷರ ಗಾತ್ರ

ಬೆಂಗಳೂರು: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಮೇ 29ರಂದು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದರು.

ಗಾಯಕ ಸಿಧು ಹತ್ಯೆ ಪ್ರಕರಣ ರಾಷ್ಟ್ರದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಪಂಜಾಬ್‌ನಲ್ಲಿ ಸೆಲೆಬ್ರಿಟಿಗಳಿಗೆ ನೀಡಿದ್ದ ಪೊಲೀಸ್ ಭದ್ರತೆಯನ್ನು ಹಿಂಪಡೆದ ಬೆನ್ನಲ್ಲೇ ಸಿಧು ಹತ್ಯೆಯಾಗಿತ್ತು.

ಸಿಧುವನ್ನು ಮನೆಯವರು, ಗೆಳೆಯರು ಮತ್ತು ಅಭಿಮಾನಿಗಳು ಮಾತ್ರವಲ್ಲ ಅವರ ಮನೆಯ ಸಾಕುನಾಯಿಗಳು ಕೂಡ ಮಿಸ್ ಮಾಡಿಕೊಳ್ಳುತ್ತಿವೆ. ಈ ಕುರಿತ ವಿಡಿಯೊ ಒಂದು ವೈರಲ್ ಆಗಿದೆ.

ಸಿಧು ಮನೆಯಲ್ಲಿರುವ ಅವರ ಪ್ರೀತಿಯ ಸಾಕುನಾಯಿಗಳು ಸಿಧು ಸಾವಿಗೀಡಾದ ಬಳಿಕ ಆಹಾರ ತ್ಯಜಿಸಿವೆ.

ಶೆರಾ ಮತ್ತು ಬಘೀರ ಹೆಸರಿನ ಎರಡು ನಾಯಿಗಳು ಇದ್ದು, ಅವುಗಳು ಕಳೆದ ಭಾನುವಾರದಿಂದ ಆಹಾರ ಸೇವಿಸುತ್ತಿಲ್ಲ ಎಂದು ವಿಡಿಯೊದಲ್ಲಿ ಹೇಳಲಾಗಿದೆ.

ಸಿಧು ಪ್ರಾಣಿಪ್ರಿಯರಾಗಿದ್ದು, ಮುದ್ದಿನ ಸಾಕುನಾಯಿಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT