ಕ್ರೂರ ಪ್ರಾಣಿಯಾದ ಹುಲಿಯೂ ಹಾವಿಗೆ ಹೆದರುವುದೇ..? ಹೌದು ಎನ್ನುತ್ತದೆ ಈ ವಿಡಿಯೊ.

ಕಾಡಿನಲ್ಲಿ ಇತರ ಪ್ರಾಣಿಗಳ ನಿದ್ದೆ ಹಾರಿಸುವ ಹುಲಿರಾಯನಿಗೂ ಭಯವಾಗುತ್ತದೆ ಎಂಬುದಕ್ಕೆ ಈ ವಿಡಿಯೊನೇ ಸಾಕ್ಷಿ. ಸಫಾರಿ ದಾರಿಯಲ್ಲಿ ನಾಗರಹಾವು ಹಾಗೂ ಹುಲಿ ಮುಖಾಮುಖಿ ಆಗುತ್ತವೆ. ಆದರೆ ನಾಗಪ್ಪನ ಹೆಡೆಗೆ ಹುಲಿರಾಯ ಹೆದರಿ ಬಾಲ ಮುದುಡಿಕೊಂಡು ಹಿಂದೆ ಸರಿಯುತ್ತದೆ.

ಇನ್ನೂ ಈ ವಿಡಿಯೊವನ್ನು ಸಾಕಷ್ಟು ಜನ ಹಂಚಿಕೊಂಡಿದ್ದಾರೆ. ಇದರಲ್ಲಿ ಹುಲಿರಾಯನದ್ದು ಭಯವೋ ಅಥವಾ ಕಾಡಿನಲ್ಲಿ ತನ್ನಂತೆ ಇತರ ಜೀವಿಗಳಿಗೂ ಇರುವ ಹಕ್ಕಿದೆ ಎಂಬ ಗೌರವೋ ಎಂಬುದರ ಕುರಿತು ನೆಟ್ಟಿಗರ ಚರ್ಚೆಗೆ ಕಾರಣವಾಗಿದೆ.

ಹರಿದಾಡುತ್ತಿರುವ ವಿಡಿಯೊದಲ್ಲಿ, ಸಫಾರಿ ದಾರಿ ಒಂದರಲ್ಲಿ ಹುಲಿ ಹಾಗೂ ನಾಗರಹಾವು ಮುಖಾಮುಖಿಯಾಗುತ್ತವೆ. ಆ ವೇಳೆ ನಾಗರಹಾವು ಹೆಡೆ ಎತ್ತಿ ಹುಲಿಯನ್ನು ಹೆದರಿಸಲು ಮುಂದಾಗುತ್ತದೆ. ಹುಲಿ ಕೂಡ ತನ್ನ ಕಾಲುಗಳಿಂದ ಹಾವಿಗೆ ಹೊಡೆಯಲು ಹೋಗುತ್ತದೆ. ಆದರೆ ನಾಗಪ್ಪ ಹುಲಿಯ ಶಕ್ತಿಗೆ ಹೆದರದೆ.. ಮತ್ತೆ ಮತ್ತೆ ಹೆಡೆ ಎತ್ತಿ ಕೆಣಕಲು ಹೋಗುತ್ತದೆ. ಕೊನೆಗೆ ಹುಲಿಯು ತಾನೇ ಬದಿಗೆ ಸರಿದು ತನ್ನ ಪಾಡಿಗೆ ಮುಂದು ಹೋಗುವುದನ್ನು ಈ ವಿಡಿಯೊದಲ್ಲಿ ಕಾಣಬಹುದು

ಸದ್ಯ, ಈ ವಿಡಿಯೊಗೆ ನೆಟ್ಟಿಗರು ‘ಹಾವಿಗೆ ಹೆದರಿದ ಹುಲಿ’, ‘ಹುಲಿಗೂ ಹೆದರಿಕೆ ಇದೆ’ ಸೇರಿ ಅನೇಕ ರೀತಿಯ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.