ಕೋಲ್ಕತ್ತ: ಟಿಎಂಸಿಯ ವಿದ್ಯಾರ್ಥಿ ಪರಿಷತ್ ಘಟಕದ ಕೆಲ ವಿದ್ಯಾರ್ಥಿ ನಾಯಕರು ಕಾಲೇಜು ಒಂದರಲ್ಲಿ ಮದ್ಯ ಸೇವಿಸಿ ಪಾರ್ಟಿ ಮಾಡಿರುವ ಘಟನೆ ನಡೆದಿದೆ.

ಹೌರಾ ಜಿಲ್ಲೆಯ ನರಸಿಂಹ ದತ್ತ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕರು ಈ ದುಂಡಾವರ್ತನೆ ತೋರಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಘಟಕ ಎಕ್ಸ್ನಲ್ಲಿ ವಿಡಿಯೊ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದೆ.

ಟಿಎಂಸಿಯ ವಿದ್ಯಾರ್ಥಿ ಪರಿಷತ್ ರಾಜ್ಯ ಘಟಕದ ಉಪಾಧ್ಯಕ್ಷ ಸೌವಿಕ್ ರಾಯ್ ಅವರು ಈ ವಿಡಿಯೊದಲ್ಲಿರುವುದು ವಿವಾದ ಹುಟ್ಟಿಸಿದೆ. ಇಂಟರ್ನೆಟ್ನಲ್ಲಿ ವಿಡಿಯೊ ಸಾಕಷ್ಟು ಹರಿದಾಡುತ್ತಿದೆ.

ಸೌವಿಕ್ ರಾಯ್ ಸೇರಿದಂತೆ ಕೆಲವರು ಕೆಎಫ್ ಬಿಯರ್ ಬಾಟಲ್ ಹಿಡಿದುಕೊಂಡು ಮದ್ಯ ಸೇವಿಸುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತದೆ.

ಆದರೆ, ಸೌವಿಕ್ ರಾಯ್ ಆರೋಪವನ್ನು ಅಲ್ಲಗಳೆದಿದ್ದು, ಇದನ್ನು ತಿರುಚಲಾಗಿದೆ. ವಿಡಿಯೊದಲ್ಲಿರುವುದು ನಾನಲ್ಲ ಎಂದಿದ್ದಾರೆ. ಅದಾಗ್ಯೂ ಟಿಎಂಸಿ ಕೇಂದ್ರ ಕಚೇರಿಯಿಂದ ಕಾರಣ ಕೇಳಿ ಸೌವಿಕ್ ರಾಯ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.