ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಬ್ಬಾ.. ಹೀಗಿದೆ ನೋಡಿ ಅನಂತ್ ಅಂಬಾನಿ - ರಾಧಿಕಾ ಮದುವೆಯ ಆಮಂತ್ರಣ ಪತ್ರಿಕೆ

Published 28 ಜೂನ್ 2024, 5:11 IST
Last Updated 28 ಜೂನ್ 2024, 5:11 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಐಷಾರಾಮಿ ವಿವಾಹದ ಆಮಂತ್ರಣ ಪತ್ರಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವಿವಾಹ ಪೂರ್ವ ಕಾರ್ಯಕ್ರಮಗಳಿಂದ ಕುತೂಹಲ ಮೂಡಿಸಿದ್ದ ಈ ಜೋಡಿಯ ಮದುವೆಯ ಕಾರ್ಯಕ್ರಮ ಈಗ ಆಮಂತ್ರಣ ಪತ್ರಿಕೆಯಿಂದಲೂ ಸದ್ದು ಮಾಡುತ್ತಿದೆ.

ಜುಲೈ 12 ರಂದು ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಗಣ್ಯ ಅತಿಥಿಗಳಿಗಾಗಿ ವಿಶೇಷ ಆಮಂತ್ರಣ ಪತ್ರಿಕೆಯನ್ನು ತಯಾರಿಸಲಾಗಿದೆ. ಒಂದು ಬಾಕ್ಸ್‌ನಲ್ಲಿ ಸಣ್ಣ ದೇವರ ಗುಡಿ ಹಾಗೂ ಹಿಂದೂ ದೇವರ ವಿಗ್ರಹಗಳಿರುವ ಚೌಕಟ್ಟನ್ನು ಜೊತೆಗೆ ವಿಶೇಷವಾಗಿ ತಯಾರಿಸಿರುವ ನಾಲ್ಕೈದು ಪುಟಗಳಿರುವ ಆಮಂತ್ರಣ ಪತ್ರಿಕೆಯನ್ನು ಸಿದ್ಪಡಿಸಲಾಗಿದೆ.

ಆಮಂತ್ರಣ ಪತ್ರಿಕೆಯ ವಿಡಿಯೊವನ್ನು 'ಎಎನ್‌ಐ' ಸುದ್ದಿಸಂಸ್ಥೆ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ವಿಡಿಯೊದಲ್ಲಿ ಪೆಟ್ಟಿಗೆಯಂತಹ ದೇವಾಲಯವನ್ನು ತೋರಿಸಲಾಗಿದೆ. ಅದರಲ್ಲಿ ಬೆಳ್ಳಿಯಿಂದ ಮಾಡಿದ ಚಿಕ್ಕ ದೇವಾಲಯವಿದೆ. ಕೆಂಪು ಬಣ್ಣದ ಪೆಟ್ಟಿಗೆ ತೆರೆದ ಕೂಡಲೇ ಬೆಳ್ಳಿಯ ದೇವಾಲಯದ ಮಾದರಿ ಮತ್ತು ದೇವರ ಚಿನ್ನದ ವಿಗ್ರಹಗಳಿವೆ. ಹಿನ್ನಲೆಯಲ್ಲಿ ಹಿಂದಿ ಭಾಷೆಯಲ್ಲಿ ದೇವರ ಸ್ತುತಿ, ಮಂತ್ರ ಕೇಳಿಸುತ್ತವೆ. ಗಣೇಶ, ವಿಷ್ಣು, ಲಕ್ಷ್ಮಿ, ರಾಧಾ-ಕೃಷ್ಣ ಮತ್ತು ದುರ್ಗಾ ದೇವತೆ ವಿಗ್ರಹಗಳಿವೆ.

ಜುಲೈ 12ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಇವರ ವಿವಾಹ ನಡೆಯಲಿದೆ. ಮೂರು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ. ಜುಲೈ 13 ರಂದು ಆಶೀರ್ವಾದ ಸಮಾರಂಭ ಮತ್ತು ಜುಲೈ 14 ರಂದು ಸ್ವಾಗತ ಸಮಾರಂಭವನ್ನು ನಿಗದಿಪಡಿಸಲಾಗಿದೆ.

ಈಗಾಗಲೇ 2 ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿವೆ. ಮೊದಲ ವಿವಾಹ ಪೂರ್ವ ಕಾರ್ಯಕ್ರಮ ಜಾಮ್‌ನಗರದಲ್ಲಿ ಮೂರು ದಿನಗಳ ನಡೆದಿತ್ತು. ಬಳಿಕ ಜೂನ್‌ನಲ್ಲಿ 2ನೇ ವಿವಾಹಪೂರ್ವ ಕಾರ್ಯಕ್ರಮ ಯುರೋಪ್‌ನಲ್ಲಿ ನಡೆದಿತ್ತು. ಹಲವಾರು ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT