'ಡಾನ್ಸಿಂಗ್ ದಾದಿ'ಯ ಮೋಹಕ ಹೆಜ್ಜೆಗೆ ಮರುಳಾದ ನೆಟ್ಟಿಗರು: ವಿಡಿಯೊ ನೋಡಿ

ಬೆಂಗಳೂರು: ಈಗಾಗಲೇ ಸಾಕಷ್ಟು ಮಂದಿ ಅದ್ಭುತ ನೃತ್ಯ ಪ್ರದರ್ಶನದ ಮೂಲಕ ವಯಸ್ಸೆಂಬುದು ಕೇವಲ ಸಂಖ್ಯೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ಪೈಕಿ 'ಡಾನ್ಸಿಂಗ್ ದಾದಿ' ಎಂದೇ ಸಾಮಾಜಿಕ ತಾಣಗಳಲ್ಲಿ ಗುರುತಿಸಿಕೊಂಡಿರುವ ರವಿಬಾಲಾ ಶರ್ಮಾ ಅವರು ಮತ್ತೊಂದು ನೃತ್ಯದ ವಿಡಿಯೊ ಮೂಲಕ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿದ್ದಾರೆ.
63 ವರ್ಷದ ಬಾಲಾ ಶರ್ಮಾ ಅವರ ಮೋಹಕ ನೃತ್ಯಕ್ಕೆ ಮರುಳಾದವರೇ ಹೆಚ್ಚು. ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರ ಮುಂಬರುತ್ತಿರುವ 'ಅತರಂಗಿ ರೆ' ಸಿನಿಮಾದ 'ಚಕ್ಕಾಚಕ್ಕ ಚಕ್' ಹಾಡಿಗೆ ಆಕರ್ಷಕ ಹೆಜ್ಜೆ ಹಾಕಿದ್ದಾರೆ.
ಹಸಿರು ಮತ್ತು ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿರುವ ಬಾಲಾ ಶರ್ಮಾ ಅವರ ಮನಸೆಳೆಯುವ ಮುಗುಳ್ನಗು, ಮುಖದಲ್ಲಿ ಎದ್ದು ತೋರುವ ನೃತ್ಯಭಾವ, ಹುಮ್ಮಸ್ಸು ಯುವತಿಯರನ್ನೇ ನಾಚಿಸುವಂತಿದೆ.
ತಾಯಿಗೆ ವೈದ್ಯರ ತಪ್ಪು ಸಲಹೆಯಿಂದ ತನ್ನ ಜನನ: ಕೋರ್ಟ್ ಮೆಟ್ಟಿಲೇರಿದ ಯುವತಿಗೆ ಜಯ
ಈ ಹಿಂದೆ ಮಗನ ಜೊತೆ 'ಜುಗ್ನು ಚಾಲೆಂಜ್' ಸ್ವೀಕರಿಸಿದ್ದರು. ಆಧುನಿಕ ಹುಡುಗಿಯರಂತೆ ಜೀನ್ಸ್, ಟೀಶರ್ಟ್, ಕೂಲಿಂಗ್ ಗ್ಲಾಸ್ನಲ್ಲಿ ತುಂಬ ಸ್ಟೈಲಿಶ್ ಆಗಿ ಕಾಣಿಸಿದ್ದರು.
ಸಾರಾ ಅಲಿ ಖಾನ್ ನಟನೆಯ 'ಅತರಂಗಿ ರೆ' ಸಿನಿಮಾ ಡಿಸೆಂಬರ್ 24ಕ್ಕೆ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆ ತಮಿಳು ನಟ ಧನುಶ್ ಜೊತೆಯಾಗಿ ಕಾಣಿಸಿಕೊಂಡಿರುವುದು ವಿಶೇಷ. ಇದರ ತಮಿಳು ಡಬ್ ಚಿತ್ರಕ್ಕೆ 'ಗಲಾಟ ಕಲ್ಯಾಣಂ' ಎಂದು ಹೆಸರಿಡಲಾಗಿದೆ. ಡಿಸ್ನಿ+ಹಾಟ್ಸ್ಟಾರ್ನಲ್ಲಿ ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.
ತಾಯಿ ಪ್ರೀತಿ: ಸ್ವಾಗತಿಸಲು ಹೂಗುಚ್ಛ ತಂದಿದ್ದ ಮಗನಿಗೆ ಚಪ್ಪಲಿ ಏಟು, ವಿಡಿಯೊ ನೋಡಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.