ಉಕ್ರೇನ್ ಯೋಧನ ಜೀವ ಉಳಿಸಿದ ಮೊಬೈಲ್ ಫೋನ್: ರಷ್ಯಾ ಸೈನಿಕರ ಗುಂಡೇಟೆನಿಂದ ಪಾರು

ಬೆಂಗಳೂರು: ರಷ್ಯಾ ಪಡೆಗಳ ಗುಂಡಿನ ದಾಳಿಯಿಂದ ಉಕ್ರೇನ್ ಯೋಧರೊಬ್ಬರನ್ನು ಮೊಬೈಲ್ ಫೋನ್ ಒಂದು ಕಾಪಾಡಿದೆ.
ಈ ಕುರಿತ ವಿಡಿಯೊ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಯುದ್ಧಪೀಡಿತ ಉಕ್ರೇನ್ನಲ್ಲಿ ಯೋಧನ ಮೇಲೆ ರಷ್ಯಾ ಪಡೆಗಳು ಗುಂಡಿನ ದಾಳಿ ನಡೆಸಿದ್ದವು. ಈ ಸಂದರ್ಭದಲ್ಲಿ 7.62mm ಗುಂಡು ಯೋಧನಲ್ಲಿದ್ದ ಮೊಬೈಲ್ ಫೋನ್ಗೆ ಬಡಿದಿದೆ.
ಅಲ್ಲದೆ, ಮೊಬೈಲ್ಗೆ ತಾಗಿದ ಬುಲೆಟ್, ಅದರಲ್ಲೇ ಸಿಲುಕಿಕೊಂಡಿದೆ. ಇದರಿಂದಾಗಿ ಯೋಧನ ದೇಹ ಹೊಕ್ಕದೆ ಬುಲೆಟ್ ಹೊರಗಡೆ ಉಳಿದಿದ್ದು, ಜೀವಕ್ಕೆ ಯಾವುದೇ ಅಪಾಯವಾಗಿಲ್ಲ. ಈ ಬಗ್ಗೆ ಯೋಧ ‘ಮೊಬೈಲ್ ಫೋನ್ ನನ್ನ ಜೀವ ಕಾಪಾಡಿದೆ ಎಂದು ಹೇಳುತ್ತಿರುವ ವಿಡಿಯೊ’ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ.
ಕ್ಯಾಮೆರಾಗೆ ಪೋಸ್ ನೀಡಿದ ಅವಳಿ ಪೊಲೀಸ್ ಅಧಿಕಾರಿಗಳು: ‘ಸಿಂಗಂ’ ಎಂದ ನೆಟ್ಟಿಗರು
This #Ukrainian soldier is saved by his mobile phone, as he shows the bullet wedged into the rear case of the phone #UkraineRussiaWar #Ukraine #RussiaUkraineWar pic.twitter.com/mzuAhCc0GI
— Globe Sentinel (@GlobeSentinels) April 18, 2022
ರಷ್ಯಾ ಪಡೆಗಳು ಉಕ್ರೇನ್ ಮೇಲೆ ಫೆಬ್ರುವರಿ 24ರಿಂದ ನಿರಂತರ ದಾಳಿ ನಡೆಸುತ್ತಿವೆ.
ಕೋಮು ಸಂಘರ್ಷದಲ್ಲಿ ಆ ಪೊಲೀಸ್ ಪೇದೆ ತೋರಿದ ಸಾಹಸ ವೈರಲ್!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.