ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೈರಲ್ ವಿಡಿಯೋ: ಮದುವೆ ಮನೆಯ ಊಟ–ಕ್ಯಾಮರಾಮೆನ್‌ ಕಾಟ...

ಅಕ್ಷರ ಗಾತ್ರ

ಬೆಂಗಳೂರು: ಮದುವೆ ಎಂದರೆನೇ ಹಾಗೇ ಅಲ್ಲಿ ನಡೆಯುವ ಸಂತಸ ಸಂಭ್ರಮದ ಕ್ಷಣಗಳಿಗೆ ಕೊರತೆ ಇರುವುದಿಲ್ಲ. ಇನ್ನು ಮದುವೆ ಮನೆಯ ಊಟವಂತೂ ಅದೊಂದು ಪ್ರತ್ಯೇಕ ಅಧ್ಯಾಯವೇ.

ಮದುವೆ ಊಟದಲ್ಲಿ ಕೆಲವರಿಗೆ ದಾವಂತವಾದರೇ, ಇನ್ನೂ ಕೆಲವರಿಗೆ ಭರ್ಜರಿ ಭೋಜನ ಸವಿಯುವ ಆಸೆ. ಅದರಲ್ಲೂ ಕೆಲವರು ನಯ ನಾಜೂಕಿನಿಂದ ಊಟ ಮಾಡುವುದರಲ್ಲೇ ಮಗ್ನರಾಗಿರುತ್ತಾರೆ. ಇನ್ನು ಹೇಳಲೇಬೇಕಾದ ವಿಷಯವೆಂದರೆ ಊಟದ ಹಾಲ್‌ನಲ್ಲಿ ಕ್ಯಾಮರಾಮೆನ್‌ಗಳ ಕಾಟ.

ಈ ಕ್ಯಾಮರಾಮೆನ್‌ಗಳು ಊಟ ಮಾಡುವುವರನ್ನು ಚಿತ್ರ ತೆಗೆಯುವುದು, ವಿಡಿಯೋ ಮಾಡುವುದು ಮಾಡುತ್ತಾರೆ. ಇದು ಊಟಕ್ಕೆ ಬಂದ ಕೆಲವರಿಗೆ ಇಷ್ಟವಾಗುವುದಿಲ್ಲ.

ಇಂತಹದೇ ಮದುವೆ ಮನೆಯಲ್ಲಿ ಯುವತಿಯೊಬ್ಬಳು ಕ್ಯಾಮರಾಮೆನ್‌ನಿಂದ ಅನುಭವಿಸಿದ ಫಜೀತಿಯ ವಿಡಿಯೋ ವೈರಲ್ ಆಗಿದೆ.@official_niranjanm87 ಎನ್ನುವರು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, 63 ಸಾವಿರ ವೀಕ್ಷಣೆ ಕಂಡಿದೆ. 2.2 ಸಾವಿರ ಲೈಕ್ಸ್‌ ಪಡೆದಿದೆ.

ಯುವತಿ ತನ್ನ ಇಷ್ಟದಂತೆ ಆಹಾರ ಸೇವಿಸುತ್ತಿರುವಾಗ ಕ್ಯಾಮರಾಮೆನ್ ಬಂದು ಅವಳ ಮುಖಕ್ಕೆ ಕ್ಯಾಮರಾ ಹಿಡಿದಾಗ, ಅವಳು ಮುಜುಗರ ಪಟ್ಟುಕೊಂಡು ನಾಜೂಕಿನಿಂದ ಊಟ ಮಾಡುತ್ತಾಳೆ.

ಇಂತಹ ಅನುಭವ ಮದುವೆ ಸಮಾರಂಭದಲ್ಲಿ ಭಾಗವಹಿಸಿದ ಅನೇಕರಿಗೆ ಆಗಿರುತ್ತದೆ. ಒಟ್ಟಿನಲ್ಲಿ ಊಟ ಮಾಡಲೇ ಬೇಡವೇ ಅನ್ನೋ ಪರಿಸ್ಥಿತಿ ಆಗ ಉದ್ಭವಿಸಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT