ಶನಿವಾರ, ಮೇ 15, 2021
23 °C

ಡೈಮಂಡ್‌ ಸ್ಟ್ರೋಕ್‌ ಕಲಾವಿದ ಶಿವ ಹಾದಿಮನಿ

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರಾದ ಶಿವ ಹಾದಿಮನಿ ಅವರು ವಿಶಿಷ್ಟ ಕಲಾವಿದ. ಚಿತ್ರಕಲಾ ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ವಿವಿಧ ಚಿತ್ರಕಲಾ ಪ್ರಕಾರಗಳಿಗೆ ವಿಭಿನ್ನವಾಗಿ ತಮ್ಮದೇ ಆದ ಚಿತ್ರ ಬಿಡಿಸುವ ಶೈಲಿಯನ್ನು ಹುಟ್ಟುಹಾಕಿದವರು. ವಜ್ರದ ಅಂಚಿನ ಮಾದರಿಯಲ್ಲಿ ಮೊನಚಾದ ಗೆರೆಗಳನ್ನು ಬಳಸಿ ಕುಂಚದಲ್ಲೇ ಚಿತ್ರ ಬಿಡಿಸುವುದು ಇವರ ವೈಶಿಷ್ಟ್ಯ